ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ: ರಾಘವೇಶ್ವರ ಸ್ವಾಮೀಜಿ

0
72

ಕುಷ್ಟಗಿ: ಗೋ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಮಠ, ಗೋಪರಿವಾರದಿಂದ ದೊರೆಯುವ ಅರ್ಜಿಗಳನ್ನು ಜನರಿಗೆ ತಲುಪಿಸುವ ಹಾಗೂ ಗ್ರಾಮ ಮಟ್ಟದಿಂದ ಸಂಗ್ರಹಿಸುವ ಕಾರ್ಯವಾಗಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳು ಹೇಳಿದರು.

ನಗರದ ಅಡವಿರಾಯ ದೇವಸ್ಥಾನದಲ್ಲಿ ಶನಿವಾರ ಭಾರತೀಯ ಗೋಪರಿವಾರ ಕೊಪ್ಪಳ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಡೆದ ಅಭಯ ಗೋಯಾತ್ರೆಯ ಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಗೋಹತ್ಯೆ ನಿಷೇಧಕ್ಕೆ ಲಿಖಿತ ಅಭಿಪ್ರಾಯಗಳನ್ನು ಅರ್ಜಿಯ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಹಕ್ಕೊತ್ತಾಯ ಮಂಡಿಸಬೇಕು. ಇದಕ್ಕೆ ಗೋಪರಿವಾರದ ಕಾರ್ಯಕರ್ತರು ಕೊಂಡಿಯಾಗಿ ಕೆಲಸ ಮಾಡಬೇಕಾಗಿದ್ದು, ಮಠ ಇದೆಲ್ಲದರ ಮೇಲ್ವಿಚಾರಣೆ ಮಾಡುತ್ತದೆ. ಗೋಹತ್ಯೆ ತಡೆಗೆ ಗೊತ್ತಾದ ಮುಹೂರ್ತದಲ್ಲಿ ಹಿಂದೂಗಳೆಲ್ಲ ಒಟ್ಟಿಗೆ ಸೇರಿ ಗೋಮಾತೆಗೆ ಜೈ ಎಂದು ಹೇಳಬೇಕಿದೆ ಎಂದರು.
ಭಾರತದಲ್ಲಿ ನೂರು ಕೋಟಿ ಹಿಂದೂಗಳಿದ್ದಾರೆ. ಅವರೆಲ್ಲ ಗೋವನ್ನು ತಾಯಿ, ದೇವರಂತೆ ಕಾಣುತ್ತಾರೆ. ಸಿಖ್, ಜೈನರೂ ಅದೇ ಭಾವದಿಂದ ನೋಡುತ್ತಾರೆ. ಎಲ್ಲ ಮುಸಲ್ಮಾನರು ಹಾಗೂ ಎಲ್ಲ ಕ್ರೈಸ್ತರು ಗೋಹತ್ಯೆ ಪರವಾಗಿರುತ್ತರೆ ಎಂದು ಹೇಳಲು ಸಾಧ್ಯವಿಲ್ಲ. ಅವರಲ್ಲಿಯೂ ಒಂದು ವರ್ಗ ಗೋಮಾತೆಯ ಪರವಾಗಿದೆ. ಅಂದ ಮೇಲೆ ಗೋಪರವಾಗಿ ನಿಲ್ಲುವವರ ಸಂಖ್ಯೆ 115ಕೋಟಿ ಎಂದು ನಿರ್ಧಿಷ್ಟವಾಗಿ ಹೇಳಬಹುದು. ಆದರೆ ಎಲ್ಲರೂ ಒಟ್ಟಾಗಿ ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುವುದಿಲ್ಲ. ಒಂದು ಗೊತ್ತಾದ ಮುಹೂರ್ತದಲ್ಲಿ ಎಲ್ಲರೂ ಸೇರಿ ಗೋಮಾತೆ ಪರವಾಗಿ ಜೈಕಾರ ಹಾಕದೇ ಇರುವುದರಿಂದ ನಿತ್ಯ ಗೋಹತ್ಯೆ ನಡೆಯುತ್ತಿದೆ.
ಭಾರತೀಯ ಗೋಪರಿವಾರ ರಾಜ್ಯ ಅಧ್ಯಕ್ಷ ಗಂವ್ಹಾರದ ಶ್ರೀತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀ ಮಠದ ಶ್ರೀ ಪಾಂಡುರಂಗ ಮಹಾರಾಜ್, ಪ್ರಧಾನ ಕಾರ್ಯದರ್ಶಿ ಡಾ. ವೈಕೆ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ , , ಜಯಥೀತರಾವ್ ದೇಸಾಯಿ, ಗೋಪಾಲರಾವ್ ಬಿಜಕಲ್, ಶರಣ್ಣ ತಳಿಕೇರಿ, ಬಸವರಾಜ ಪಾಟೀಲ್, ವೀರೇಶ ಬಂಗಾರ ಶಟ್ಟರ್, ಕೃಷ್ಣ ಕಂದಕೂರು,ದೊಡ್ಡಬಸವ ಸುಂಕದ್ ಸೇರಿದಂತೆ ಇನ್ನಿತರರು ಇದ್ದರು.

loading...