ಗೌಪ್ಯತೆ ಕಾಪಾಡುವಲ್ಲಿ ಕೇಂದ್ರ ಸರಕಾರ ವಿಫಲಗೊಂಡಿದೆ: ಮಮ್ಮದ್ ಆಗಾ

0
69

ಕನ್ನಡಮ್ಮ ಸುದ್ದಿ-ಕುಮಟಾ: ದೇಶದ ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರಗಳ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಸಿ ಎ ಜಿ ವರದಿ ಬಹಿರಂಗವಾಗದಂತೆ ಗೌಪ್ಯತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಕ್ಫ ಮಂಡಳಿ ಉಪಾಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಮಮ್ಮದ್ ಹಾಶಂ ಆಗಾ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಕ್ಷಣಾ ಇಲಾಖೆ ಬಳಿ ಇರುವ ಶಸ್ತ್ರಾಸ್ತ್ರಗಳು ಯುದ್ಧ ನಡೆದರೆ 10 ದಿನಗಳಿಗೆ ಸಾಕಾಗುವಷ್ಟು ಮಾತ್ರ ಇದ್ದು, ಅಸ್ತ್ರಗಳು ಗುಣಮಟ್ಟದ್ದಲ್ಲಾ ಇದರ ಬಿಡಿ ಭಾಗಗಳು ಚೀನಾ ನಿರ್ಮಿತವಾಗಿದ್ದು ಎಂದು ಸಿ ಎ ಜಿ ಸರ್ಕಾರಕ್ಕೆ ವರದಿ ಮಾಡಿದೆ. ಈ ವರದಿ ಬಹಿರಂಗ ಗೊಂಡದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಕ್ಷಾಣಾ ಪ್ರತಿಷ್ಟೆಗೆ ದಕ್ಕೆಯಾಗುವ ಜೊತೆಗೆ ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಆತ್ಮಸ್ಥೈರ್ಯಕ್ಕೆ ಕುಂದು ತರುವಂತದ್ದು. ಅಲ್ಲದೆ ಶತ್ರು ರಾಷ್ಟ್ರಗಳಿಗೆ ನಮ್ಮ ರಕ್ಷಣೆ ಸಾಮರ್ಥ ಬಗ್ಗೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಆಗಾ ಆತಂಕ ವ್ಯಕ್ತಪಡಿಸಿದರು.
ಗಡಿಯಲ್ಲಿ ಯುದ್ಧದ ಕಾರ್ಮೋಡ ಸೃಷ್ಟಿಯಾಗಿದ್ದು ನಮ್ಮ ವೈರಿ ರಾಷ್ಟ್ರಗಳು ಯುದ್ದದ ಸಿದ್ಧತೆ ಮಾಡಿಕೊಂಡು ಸಮರಾಭ್ಯಾಸದಲ್ಲಿ ತೊಡಗಿದ್ದಾರೆ. ದೇಶದ ಸೈನಿಕರು ಗಡಿಯಲ್ಲಿ ಯುದ್ಧವನ್ನು ಎದುರಿಸಲು ಸನ್ನದ ಅಂತಾ ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದು, ವಾಸ್ತವಿಕ ಸ್ಥಿತಿ ಅವಲೋಕಿಸಿದರೆ ಬೇರೆಯೆ ಯಾಗಿದೆ. ಕೇಂದ್ರ ಸರ್ಕಾರ ರಕ್ಷಾಣ ಸಾಮಥ್ರ್ಯವನ್ನು ಸದೃಡ ಗೊಳಿಸಿಕೊಂಡು ಸೈನಿಕರ ಆತ್ಮಸ್ಥೈರ್ಯ ತುಂಬುವ ಕೆಲಸವಾಗುವ ಜೊತೆಗೆ ರಕ್ಷಣೆಗೆ ಸಂಭಂದಿಸಿದ ವರದಿಗಳು ಬಹಿರಂಗ ವಾಗದಂತೆ ಎಚ್ಚರ ವಹಿಸಬೇಕು ಎಂದು ಮಮ್ಮದ್ ಹಾಶಂ ಆಗಾ ಆಗ್ರಹಿಸಿದ್ದಾರೆ.

loading...