ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ತಾ.ಪಂ ಇಓ ಮಲ್ಲಿಕಾರ್ಜುನ ಕಲಾದಗಿ

0
21

ದಾಮಣೆ ಎಸ್. (ಬೈಲೂರ) ಗ್ರಾಮದಲ್ಲಿ ಅಧಿಕಾರಿಗಳ ಬೀಡು | ಅಗತ್ಯ ಸೌಲಭ್ಯ ಕಲ್ಪಿಸಲು ನಾಗರಿಕರ ಮನವಿ
ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆಗಳ ಅನಾವರಣ
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ತಾ.ಪಂ ಇಓ ಮಲ್ಲಿಕಾರ್ಜುನ ಕಲಾದಗಿ
ಬೆಳಗಾವಿ:
ಧಾಮಣೆ ಎಸ್. ಬೈಲೂರ ಗ್ರಾಮದಲ್ಲಿ ತಹಸೀಲ್ದಾರ ಆರ್.ಕೆ. ಕುಲಕರ್ಣಿ ಶನಿವಾರ ಗ್ರಾಮ ವಾಸ್ತವ್ಯ ನಡೆಸಿದರು. ಗ್ರಾಮದಲ್ಲಿ ಸುತ್ತಾಡಿ ಜನರ ಸಮಸ್ಯೆ ಆಲಿಸಿದರು. ಸ್ಥಳದಲ್ಲಿಯೇ ೧೦ ಜನ ಹಿರಿಯ ನಾಗರಿಕರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸಿದರು.
ಗ್ರಾಮದಲ್ಲಿ ಕುಡಿಯುವ ನೀರು ಇಲ್ಲ, ಬೋರವೆಲ್ ವ್ಯವಸ್ಥೆ ಮಾಡಬೇಕು. ಗ್ರಾಮದ ಎಲ್ಲ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಕಾಯಂ ವಸತಿ ಸೌಲಭ್ಯ ಸಾಕಷ್ಟು ಜನರಿಗೆ ಇಲ್ಲ, ಅಂಗನವಾಡಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಬೆಳಗಾವಿ ತಾಲೂಕಿನ ದಾಮಣೆ ಎಸ್. ಬೈಲೂರ ಗ್ರಾಮದಲ್ಲಿ ತಹಸೀಲ್ದಾರ ಆರ್.ಕೆ. ಕುಲಕರ್ಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಮಲ್ಲಿಕಾರ್ಜುನ ಕೆ. ಕಲಾದಗಿ ನೇತÊತ್ವದಲ್ಲಿ ಜನರ ಸಮಸ್ಯೆ ಆಲಿಸಿದರು.
ಸೋಲಾರ್ ವಿದ್ಯುತ ದೀಪಗಳನ್ನು ಅಳವಡಿಸಬೇಕು. ಮುಖ್ಯವಾಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಬೇಕು. ಗ್ರಾಮದಲ್ಲಿ ದಾಮಣೆ ಎಸ್. ಬೈಲೂರ ಕಾದಿರಿಸಿದ ಅರಣ್ಯ ದನಗರವಾಡ ಗ್ರಾಮ ಮತ್ತು ಯಾವುದೇ ಮೊಬೈಲ ನೆಟ್‌ವಕ್ ಸಂಪರ್ಕ ಸಿಗುತ್ತಿಲ್ಲ, ಅದರ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ದಾಮಣೆ ಎಸ್. ಬೈಲೂರ ಮತ್ತು ಪಕ್ಕದ ಅರಣ್ಯ ಪ್ರದೇಶದಲ್ಲಿರುವ ಜನವಸತಿ ಪ್ರದೇಶಕ್ಕೂ ಅಧೀಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅದು ಅರಣ್ಯ ಇಲಾಖೆ ವ್ಯಾಪ್ತಿಯ ಜಾಗವಾದ್ದರಿಂದ ಅಲ್ಲಿ ಯಾವುದೇ ಮೂಲ ಸೌಕರ್ಯ ಇರಲಿಲ್ಲ, ಆದರೂ, ಇದ್ದ ಜಾಗದಲ್ಲಿಯೇ ಮೂಲ ಸೌಕರ್ಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದರು.
ಹಾಗೂ ಈಗಾಗಲೇ ದನಗರವಾಡ ಗ್ರಾಮದಲ್ಲಿ ೫ ಸೋಲಾರ್ ದೀಪಗಳನ್ನು ಹಾಗೂ ೧ ಕೈ ಬೋರ್‌ವೆಲ್ ಅಳವಡಿಸಲಾಗಿದೆ. ಇನ್ನೂ ಹೆಚ್ಚಿನ ಬೋರವೆಲ್ ಹಾಗೂ ಸೋಲಾರ ದೀಪ ಅಳವಡಿಸಬೇಕೆಂದು ಆಗ್ರಹಿಸಿದರು.

ಗ್ರಾಮಸ್ಥರ ಬೇಡಿಕೆಗಳನ್ನು ಪರಿಶೀಲಿಸಿ ಬಗೆಹರಿಸುವುದಾಗಿ ತಹಸೀಲ್ದಾರ ಭರವಸೆ ನೀಡಿದರು. ಬಿಇಒ ಆರ್.ಪಿ. ಜುಟ್ಟನವರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಮಲ್ಲಿಕಾರ್ಜುನ ಕೆ. ಕಲಾದಗಿ, ಪಿಡಿಒ ಹುಲೆಪ್ಪಣ್ಣ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಟಿ. ಶಿವಕುಮಾರ, ಕಂದಾಯ ನೀರಿಕ್ಷಕರು (ಉಚಗಾಂವ) ಜಗನ್ನಾಥ ದಾಪಳೆ, ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಾ ಸುತಾರ, ತಾಲೂಕಾ ಪಂಚಾಯತಿ ಸದ್ಯಸ್ಯ ನಾರಾಯಣ ನಲ್ವಡೆ, ವಲಯ ಅರಣ್ಯ ಅಧಿಕಾರಿ ಶಿವಾನಂದ ಮಗದುಮ್ಮ, ಉಪ ಅರಣ್ಯ ಅಧಿಕಾರಿ ಆರ್. ಎಸ್. ಗಿರಿಯಪ್ಪನವರ, ಗ್ರಾಮ ಪಂಚಾಯತಿ ಸದಸ್ಯರು ಬಾಳು ಗೋಪಾಲ ಚೌಕುಳಕರ, ಮನೋಹರ ಪಾಟೀಲ, ಮುಖ್ಯೋಪಾದ್ಯಯ ಎಮ್.ಪಿ. ಕನಗುಟಕರ ನಿರೂಪನೆ ಜಿ.ಜಿ.ಕುನಿಕಿಕೊಪ್ಪ, ವಂದಿಸಿದರು ಎಂ.ಬಿ ಕನಕುಟಕರ, ಎಲ್ಲ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

“ಬಾಕ್ಸ =====
ಅರಣ್ಯ ದನಗರವಾಡ ಗ್ರಾಮದಲ್ಲಿ ಜಾನುವಾರಿಗಳಿಗೆ ಶೆಡ್ ನಿರ್ಮಿಸಲು ನಾಗರಿಕರ ಮನವಿ. ಅರಣ್ಯ ವ್ಯಾಪ್ತಿಯಲ್ಲಿ ನೆಲೆಸಿರುವ ೨೦ ಕುಟುಂಬಗಳಿಗೆ ೨೦೦ ಜಾನುವಾರುಗಳು ಇವೆ. ಇವುಗಳನ್ನು ಹಗಲಿನಲ್ಲಿಯೇ ಕಾಡು ಪ್ರಾಣಿಗಳು ಹೊತ್ತೊಯ್ಯುತ್ತಿವೆ. ಇಲಾಖೆಯಿಂದ ಜನವಾರುಗಳಿಗೆ ಶೆಡ್ ನಿರ್ಮಾನ ಮಾಡಿಕೊಡಬೇಕು ಎಂದು ಜನ ಕೋರಿದರು. ಅಲ್ಲದೆ, ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ೮ನೇ ತರಗತಿ ನಂತರ ಮುಂದಿನ ವ್ಯಾಸಂಗಕ್ಕೆ ಶಾಲೆಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ, ಕೂಡಲೇ ಬಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು”.

 

loading...