ಗ್ರಾಹಕ  ಸಂರಕ್ಷಣೆ  ಯೋಜನೆ:  ಆಸ್ಟ್ರೇಲಿಯಾಕ್ಕೆ ತೆರಳಿದ ನಿಯೋಗ

0
3

ನವದೆಹಲಿ-  ಗ್ರಾಹಕ  ಸಂರಕ್ಷಣೆ ಕುರಿತ ಸಹಕಾರಿ ಯೋಜನೆ ಜಾರಿಗಾಗಿ  ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾಖಾತೆ  ಸಹಾಯಕ ಸಚಿವ ರೌಸಾಹೇಬ್ ಪಾಟೀಲ್ ಡಾನ್ವೆ ನೇತೃತ್ವದ ಉನ್ನತ ಮಟ್ಟದ ನಿಯೋಗ  ಆಸ್ಟ್ರೇಲಿಯಾಕ್ಕೆ ತೆರಳಿದೆ.
ಸಿಡ್ನಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಆಸ್ಟ್ರೇಲಿಯಾ-ಭಾರತ ಸಹಕಾರಿ ಗ್ರಾಹಕ ಸಂರಕ್ಷಣಾ ಯೋಜನೆಯ ಎರಡನೇ ಹಂತದ  ಮಾತುಕತೆಯಲ್ಲಿ  ನಿಯೋಗ ಭಾಗವಹಿಸಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ .
1992 ರಲ್ಲಿ ಸ್ಥಾಪನೆಯಾದ ಆಸ್ಟ್ರೇಲಿಯಾ-ಇಂಡಿಯಾ ಕೌನ್ಸಿಲ್ (ಎಐಸಿ) ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಂಬಲದಿಂದ ಸಿಡ್ನಿ ವಿಶ್ವವಿದ್ಯಾಲಯವು ಗ್ರಾಹಕ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ನವದೆಹಲಿಯಲ್ಲಿ (ಸಿಡ್ನಿ ವಿಶ್ವವಿದ್ಯಾಲಯದಿಂದ) ಕಾರ್ಯಾಗಾರ ದುಂಡುಮೇಜಿನ ಸಭೆ  ನಾಲ್ಕು ಹಂತಗಳಲ್ಲಿ ನಡೆದ ನಂತರ  ಕಾರ್ಯಗತಗೊಳಿಸಿದ ನಂತರ ಈಗ  ಭಾರತದಿಂದ ಆಸ್ಟ್ರೇಲಿಯಾಕ್ಕೆ ಉನ್ನತ ಮಟ್ಟದ ನಿಯೋಗ ತೆರಳಿದೆ .

loading...