ಘೋಡಗೇರಿ ಶಿವಾನಂದ ಮಠದ ಜಾತ್ರೌತ್ಸವ

0
54

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ:19 ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳ

ಸಂಗಮದ ಅಂಚಿನಲ್ಲಿರುವ ತಾಲೂಕಿನ ಘೋಡಗೇರಿ ಗ್ರಾಮದ

ಶ್ರೀ ಶಿವಾನಂದ ಮಠದ ಜಾತ್ರೌತ್ಸವ ಹಾಗೂ ಪುರಾಣ ರತ್ನ

ಚನ್ನಬಸವ ದೇವರ ಜನ್ಮ ಶತಮಾನೋತ್ಸವ ಹಾಗೂ 23

ನೇ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ತ ರವಿವಾರದಿಂದ

ಆರಂಭಗೊಂಡು ಬರುವ ದಿ. 25ರ ವರೆಗೆ ಮಲ್ಲಯ್ಯ ಸ್ವಾಮಿಗಳ

ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೋಮವಾರ ದಿ. 20 ರಂದು ಸಂಜೆ 6.30 ಕ್ಕೆ ಗದಗ

ಶಿವಾನಂದ ಮಠದ ಜಗದ್ಗುರು ಅಭಿನವ ಶಿವಾನಂದ ಸ್ವಾಮಿಗಳು,

ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಸನ್ನಿಧಾನದಲ್ಲಿ

ಸೋಮನಕೊಪ್ಪದ ಶೃದ್ದಾನಂದ ಸ್ವಾಮಿಗಳು ಹಾಗೂ

ಧಾರವಾಡದ ಪಂಡಿತ ಜಯತೀರ್ಥಾಚಾರ್ಯ ಮಳಗಿಯವರ

ಸಮ್ಮುಖದಲ್ಲಿ ಸ್ವಧರ್ಮೇ ನಿಧನಂ ಶ್ರೇಯ: ವಿಷಯ ಕುರಿತು

ಪ್ರವಚನ. ಘೋಡಗೇರಿ ವಿರಕ್ತ ಮಠದ ಕಾಶೀನಾಥ ಸ್ವಾಮಿಗಳು

ಈ ವಿಶಇಂಷಂ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ

ಅತಿಥಿಗಳಾಗಿ ಶಾಸಕ ಉಮೇಶ ಕತ್ತಿ, ಸಂಸದ ರಮೇಶ ಕತ್ತಿ,

ಈರಣ್ಣಾ ಕಡಾಡಿ, ಬಸಗೌಡಾ ಪಾಟೀಲ, ಬಾಳಪ್ಪಾ ಬೆಳಕೂಡ,

ಎಮ್.ಎಚ್.ಸೋನವಾಲ್ಕರ್, ಪ್ರಥಮ ದರ್ಜೆ ಗುತ್ತಿಗೆದಾರರಾದ

ಕೆ.ದೊರೆಸ್ವಾಮಿ, ಕೆ.ಕರುಣಾಕರ ಶೆಟ್ಟಿ ಆಗಮಿಸಲಿದ್ದಾರೆ.

ಮಂಗಳವಾರ ದಿ. 21 ರಂದು ಸಂಜೆ 6.30 ಕ್ಕೆ ಇಳಕಲ್ಲ

ಡಾ. ಮಹಾಂತ ಅಪ್ಪಗಳ ಸನ್ನಿಧಾನದಲ್ಲಿ ಗುರುಮಹಾಂತ

ಸ್ವಾಮಿಗಳು, ತಿಕೋಟಾದ ಚನ್ನಮಲ್ಲ ಸ್ವಾಮಿಗಳ ಸಮ್ಮುಖದಲ್ಲಿ

ಸಾಯದ ಮುನ್ನ ಸ್ವಯವ ನರಿದಡೆ ವಿಷಂಂಂಂ ಕುರಿತು ಪ್ರವಚನ.

ಮುಖ್ಯ ಅತಿಥಿಗಳಾಗಿ ಡಾ. ವಿಶ್ವನಾಥ ಪಾಟೀಲ, ಸುರೇಶ

ಸೋಲಾಪೂರಮಠ, ಮಲ್ಲಿಕಾರ್ಜುನ ಜಗಜಂಪಿ, ಪಂಚಾಕ್ಷರಿ

ಚೊನ್ನದ, ಗೋವಿಂದಪ್ಪಾ ಗುಜ್ಜನ್ನವರ, ಬಸವರಾಜ ಜೋಗಿ,

ನಿಂಗಪ್ಪಣ್ಣಾ ಮಾನಗಾಂವಿ, ಡಿ.ಟಿ.ಶೆಟ್ಟಿ ಆಗಮಿಸಲಿದ್ದು ಹರಿಶ್ಚಂದ್ರ

ಮುತ್ನಾಳೆ ಹಾಗೂ ಗೌಡಪ್ಪಾ ಮಳಲಿಯವರಿಗೆ ಸತ್ಕಾರ

ನಡೆಯಲಿದೆ.

ಬುಧವಾರ ದಿ. 22 ರಂದು ಸಂಜೆ 6.30 ಕ್ಕೆ ನಿಡಸೋಸಿಯ

ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ಸನ್ನಿಧಾನ,

ಗೋಕಾಕದ ಮುರಘೇಂದ್ರ ಸ್ವಾಮಿಗಳು, ಬೆಳವಿಯ ಶರಣದೇವರ

ಸಮ್ಮುಖದಲ್ಲಿ ಕರುಣದಿಂದತಿಶಯವಹ ಧರ್ಮಮುಂಟೆ

ವಿಷಂಂಂಂ ಕುರಿತು ಪ್ರವಚನ. ಮುಖ್ಯ ಅತಿಥಿಗಳಾಗಿ ಸಚಿವ ಸತೀಶ

ಜಾರಕಿಹೊಳಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ಸಿದ್ದು

ನ್ಯಾಮಗೌಡರ, ಹುಕ್ಕೇರಿ ತಹಶೀಲದಾರ ಎಸ್.ಎಸ್.ಬಳ್ಳಾರಿ,

ಎಸ್.ಪಿ.ಪಾಟೀಲ, ಬಸವರಾಜ ಮಟಗಾರ, ಮುತ್ತಣ್ಣಾ ಹಿಪ್ಪರಗಿ,

ಸಂಗೀತಾ ಕರಗುಪ್ಪಿ, ಅಡಿವೆವ್ವಾ ಚಿತ್ತೂರ ಆಗಮಿಸಲಿದ್ದಾರೆ.

ಗುರುವಾರ ದಿ. 23 ರಂದು ಸಂಜೆ 6.30 ಕ್ಕೆ ಬೆಳಗಾವಿ

ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮಿಗಳ ಸನ್ನಿಧಾನ,

ಮುಳವಳ್ಳಿಯ ಶಿವಯೋಗಿ ಸ್ವಾಮಿಗಳು, ಬೈಲಹೊಂಗಲ

ಮಹಾದೇವಾನಂದ ಸರಸ್ವತಿ ಸ್ವಾಮಿಗಳು, ಬಾಲಗಾಂವದ

ಅಮೃತಾನಂದ ಸ್ವಾಮಿಗಳು, ಗದಗದ ಶರಣೆ ಅಕ್ಕಮಹಾದೇವಿ

ತಾಯಿಯ ಸಮ್ಮುಖದಲ್ಲಿ ಮೃತ್ತಿರಿಂದಾದ ಭಾಂಡಗಳಂತೆ

ವಿಷಂಂಂಂ ಕುರಿತು ಪ್ರವಚನ. ಮುಖ್ಯ ಅತಿಥಿಗಳಾಗಿ ಶಾಸಕ

ಬಾಲಚಂದ್ರ ಜಾರಕಿಹೊಳಿ, ವಿಧಾನ ಪಂರಿಷಂತ ಸದಸ್ಯ

ಮಹಾಂತೇಶ ಕವಟಗಿಮಠ, ಮಹಾಂತೇಶ ಕೌಜಲಗಿ, ಜಗದೀಶ

ಗಡಗುಂಟಿಮಠ, ಡಾ. ಸಿದ್ದು ಹುಲ್ಲೌಳಿ, ಎಸ್.ಸಿ.ಪಾಟೀಲ,

ಮಲ್ಲಿಕಾರ್ಜುನ ಈಟಿ, ಮಲ್ಲಿಕಾರ್ಜುನ ರಾಚನ್ನವರ

ಆಗಮಿಸಲಿದ್ದಾರೆ.

ಶುಕ್ರವಾರ ದಿ. 24 ರಂದು ಸಂಜೆ 6.30 ಕಣೇರಿ ಸಿದ್ದಗಿರಿ

ಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ

ಸನ್ನಿಧಾನ, ಆಲಮಟ್ಟಿ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು,

ನಿಂಬಾಳದ ತೇಜೋಮಯಾನಂದ ಸ್ವಾಮಿಗಳ ಸಮ್ಮುಖದಲ್ಲಿ

ಅಮೃತಶ್ಯ ಪುತ್ರಾ: ವಯಮ್ ವಿಷಂಂಂಂ ಕುರಿತು ಪ್ರವಚನ.

ಮುಖ್ಯ ಅತಿಥಿಗಳಾಗಿ ಸಚಿವ ಪ್ರಕಾಶ ಹುಕ್ಕೇರಿ, ಶಾಸಕ

ರಮೇಶ ಜಾರಕಿಹೊಳಿ, ಶಾಸಕಿ ಶಶಿಕಲಾ ಜೊಲ್ಲೆ, ಗೋಕಾಕ

ತಹಶೀಲದಾರ ರವೀಂದ್ರ ಕರಲಿಂಗಣ್ಣವರ, ರಾಮಣ್ಣಾ ಕಲೂತಿ,

ರಾಮಣ್ಣಾ ಹುಕ್ಕೇರಿ, ಪರಗೊಂಡ ಪಾಟೀಲ ಆಗಮಿಸಲಿದ್ದಾರೆ.

ಶನಿವಾರ ದಿ. 25 ರಂದು ಬೆಳಗಿನ ಜಾವ 5 ಘಂಟೆಗೆ

ಜಪಯೋಗ, 7 ಘಂಟೆಗೆ ಪೂಜ್ಯರಿಂದ ಆಶೀರ್ವಚನ,

8 ಘಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 9 ಘಂಟೆಗೆ

ಕುಂಭೋತ್ಸವ, 12 ಘಂಟೆಗೆ ಮಹಾಪ್ರಸಾದ, ಸಾಯಂಕಾಲ 4

ಘಂಟೆಗೆ ರಥೋತ್ಸವದೊಂದಿಗೆ ಜಾತ್ರೆಗೆ ತೆರೆ ಬೀಳಲಿರುವದಾಗಿ

ಮಲ್ಲಯ್ಯ ಸ್ವಾಮಿಗಳು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here