ಚಂಡಮಾರುತ ಪೀಡಿತ ಒಡಿಶಾಗೆ ಟಿವಿಎಸ್ ಮೋಟಾರ್ ನೆರವು

0
8

ಭುವನೇಶ್ವರ-ಒಡಿಶಾದ ಫೋನಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಭರದಿಂದ ಸಾಗಿರುವ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿರುವ ಟಿವಿಎಸ್ ಮೋಟಾರ್ ಕಂಪನಿ, ರಾಜ್ಯದಲ್ಲಿ ರೋಡ್ ಸೈಡ್ ಅಸಿಸ್ಟೆಂಟ್ (ಆರ್ ಎಸ್ ಎ ) ಸೇವೆಯನ್ನು ಆರಂಭಿಸಿದೆ.
ಇದಕ್ಕೆ ಪೂರಕವಾಗಿ 24 ಗಂಟೆಗಳ ಕಾಲ ನಿರಂತರ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಆರಂಭಿಸಲಾಗಿದ್ದು,ಇದು ಒಡಿಯಾ ಹಾಗೂ ಬಂಗಾಳಿ ಭಾಷೆಗಳ ಪ್ರಶ್ನೆಗಳಿಗೆ ಉತ್ತರಿಸುತ್ತದೆ.
ಸಂತ್ರಸ್ತರ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಕರಾವಳಿ ಪ್ರದೇಶದ 10 ಜಿಲ್ಲೆಗಳಲ್ಲಿ 25 ಸಂಚಾರಿ ವ್ಯಾನ್ ಗಳನ್ನು ಆರಂಭಿಸಲಾಗಿದ್ದು, ಟಿವಿಎಸ್ ವಾಹನದ ಪ್ರಾಥಮಿಕ ವಾರಂಟಿ ಹೊಂದಿರುವ ಗ್ರಾಹಕರಿಗೆ ಉಚಿತ ಸೇವೆ ನೀಡಲಾಗುತ್ತದೆ.
ಈ ಯೋಜನೆ ಕುರಿತು ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿ ನಿರ್ದೇಶಕ ಹಾಗೂ ಸಿಇಒ ಕೆ.ಎನ್. ರಾಧಾಕೃಷ್ಣನ್, ಫೋನಿ ಚಂಡಮಾರುತದಿಂದ ಮೂಲಭೂತ ಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಆದ್ದರಿಂದ ಗ್ರಾಹಕರಿಗೆ ಉತ್ತಮ ಹಾಗೂ ಕ್ಷಿಪ್ರಗತಿಯ ಸೇವೆ ಒದಗಿಸುವ ಸಲುವಾಗಿ 24 ಗಂಟೆಗಳ ಸಹಾಯವಾಣಿ ಆರಂಭಿಸಲಾಗಿದ್ದು, ರಾಜ್ಯದಲ್ಲಿ ದೂರವಾಣಿ ಸಂಪರ್ಕ ಕಾರ್ಯನಿರ್ವಹಿಸುತ್ತಿದ್ದಂತೆ, ಸಹಾಯವಾಣಿ ಜನರಿಗೆ ನೆರವಾಗಲಿದೆ ಎಂದರು.
ಗ್ರಾಹಕರು ಆರ್ ಎಸ್ ಎ ತಂಡದ ಮೊಬೈಲ್ ವ್ಯಾನ್ ಗಳನ್ನು ಸಂಪರ್ಕಿಸಬಹುದು. ಟಿವಿಎಸ್ ಮೋಟಾರ್ ಸಂಸ್ಥೆ ವಿಡಿಯೋ ಸರ್ವೆಗಳನ್ನು ನಡೆಸುವ ಸಲುವಾಗಿ ಹಾಟ್ ಲೈನ್ ಒಂದನ್ನು ಆರಂಭಿಸಲಿದ್ದು, ವಾಹನಗಳ ರಿಪೇರಿಗೆ ಕನಿಷ್ಠ ದಾಖಲೆಗಳ ಆಧಾರದ ಮೇಲೆ ಶೇ.50ರಷ್ಟು ಮುಂಗಡ ಹಣ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು.

loading...