ಚನ್ನಮ್ಮ ಎಲ್ಲ ಸಮಾಜದ ಆಸ್ತಿ: ಸಿದ್ದರಾಮಯ್ಯ

0
7

ಹುನಗುಂದ: ಕಿತ್ತೂರ ರಾಣಿ ಚನ್ನಮ್ಮ ಈ ರಾಜ್ಯದ ಸ್ವಾಭಿಮಾನದ ಹೆಮ್ಮೆಯ ಸಂಕೇತ. ಈ ನಾಡಿಗಾಗಿ ನಾಡ ರಕ್ಷಣಿಗಾಗಿ ತಮ್ಮನ್ನು ತಾವು ಅರ್ಪಣಿ ಮಾಡಿಕೊಂಡು ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಆ ವೀರ ಮಹಿಳೆಯನ್ನು ಸ್ಮರಿಸುವ ದಿನವಾಗಿದೆ. ಚನ್ನಮ್ಮ ಪಂಚಮಸಾಲಿ ಸಮಾಜದ ಆಸ್ತಿಯಲ್ಲ ನಾಡಿನ ಎಲ್ಲ ಸಮಾಜದ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ನಗರದ ತಾಲೂಕ ಕ್ರಿÃಡಾಂಗಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಹಮ್ಮಿಕೊಂಡಿದ್ದ ರಾಷ್ಟçಮಾತೆ ಕಿತ್ತೂರ ರಾಣಿ ಚನ್ನಮ್ಮನವರ ೨೪೦ ನೆಯ ಜಯಂತೋತ್ಸವ ಮತ್ತು ೧೯೫ ನೆಯ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಮೂರನೆಯ ಬೃಹತ್ ಸಮಾವೇಶವನ್ನು ಪಂಚ ದಾನ್ಯಗಳನ್ನು ಬುಟ್ಟಿಗೆ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತ ಒಬ್ಬ ಮಹಿಳೆಯಾಗಿ ಬ್ರಟಿಷರಿಗೆ ತಲೆ ಬಗ್ಗಿಸದೇ ಆಂಗ್ಲರ ದರ್ಪವನ್ನು ಎದೆಗಾರಿಕೆಯಿಂದ ಎದುರಿಸಿದ ದಿಟ್ಟ ವೀರ ಮಹಿಳೆ ಕಿತ್ತೂರ ಚನ್ನಮ್ಮ.ಸ್ವಾತಂತ್ರö್ಯಕ್ಕಾಗಿ ಕಚ್ಚೆದೆಯಿಂದ ಹೋರಾಡಿದ ವೀರರನ್ನು ಸ್ಮರಿಸುವುದು ಭಾರತೀಯರ ಕರ್ತವ್ಯವಾಗಿದೆ. ಪಂಚಮಸಾಲಿ ಜನಾಂಗ ಶೈಕ್ಷಣೀಕ, ಆರ್ಥಿಕ, ರಾಜಕೀಯ, ಸಾಮಾಜಿಕ ಕ್ಷೆÃತ್ರದಲ್ಲಿ ಸಂಘಟಿತರಾಗಬೇಕು. ೧೨ನೆಯ ಶತಮಾನದ ಶಿವಶರಣರು ಜಾತಿ ವ್ಯವಸ್ಥೆ,ಸಾಮಾಜಿಕ ಅಸಮಾನತೆಯನ್ನು ತೊಲಗಬೇಕು.ಮನುಷ್ಯ ಮನುಷ್ಯರಲ್ಲಿ ಜಾತಿ ಹೋಗಬೇಕು ಎಂದು ಹೋರಾಟ ಮಾಡಿದವರು.ಬಸವಣ್ಣವರು ಕಾಯಕ ದಾಸೋಹದ ಪರಿಕಲ್ಪನೆಯ ಮೂಲಕ ಉತ್ಪಾದನೆ ಮತ್ತು ಹಂಚಿಕೆ ವ್ಯವಸ್ಥೆಯನ್ನು ನೀಡಿದರು.
ವೈಜ್ಞಾನಿಕ ವೈಚಾರಿಕ ಚಿಂತನೆ ಬೆಳೆಸಿದರು ಕರ್ಮಸಿದ್ದಾಂತವನ್ನು ತಿರಸ್ಕರಿಸಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು, ದಿವ್ಯ ಸಾನಿಧ್ಯವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ವಹಿಸಿಕೊಂಡು ಮಾತನಾಡಿದರು, ಚಿತ್ತರಗಿ ಸಂಸ್ಥಾನಮಠ ಇಲಕಲ್ಲದ ಗುರುಮಹಾಂತ ಶ್ರಿÃಗಳು ಸಮ್ಮುಖವನ್ನು ವಹಿಸಿಕೊಂಡಿದ್ದರು. ಸಚಿವ ಶಿವಾನಂದ ಪಾಟೀಲ, ಸಚಿವ ಎಂ.ಸಿ.ಮನಗೂಳಿ, ಸಂಸದ ಸಂಗಣ್ಣ ಕರಡಿ, ಮಲ್ಲಣ್ಣ ನಾಡಗೌಡ್ರ, ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್ ಹನಮಂತ ನಿರಾಣಿ, ಜೆಡಿಎಸ್ ಮುಖಂಡ ಹನಮಂತ ಮಾವಿನಮರದ, ರಾಜಶೇಖರ ಮಣಿಸಿನಕಾಯಿ, ರೋಹಿಣಿ ಪಾಟೀಲ, ಅಮೇರಿಕಾ ಕೃಷಿ ವಿಜ್ಞಾನಿ ಭೀಮನಗೌಡ ಪಾಟೀಲ ಸೇರಿದಂತೆ ಅನೇಕ ಪಂಚಮಸಾಲಿ ಮುಖಂಡರು ವೇದಿಕೆಯಲ್ಲಿದ್ದರು. ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ವಾಗತಿಸಿದರು. ಸಂಗಣ್ಣ ಗದ್ದಿ ನಿರೂಪಿಸಿದರು.

loading...