ಚಿಕ್ಕವರಿದ್ದಾಗ ಕರಿ ಟೋಪಿ ಹಾಕ್ತಿದ್ವಿ: ಸಚಿವ ಜಾರಕಿಹೊಳಿ

0
38

ಬೆಳಗಾವಿ
ನಾವು ಓರಿಜನಲ್ ಜನಸಂಘ. ಚಿಕ್ಕವರಿದ್ದಾಗ ನಾವು ಕರಿ ಟೋಪಿ ಹಾಕಿಕೊಳ್ಳುತ್ತಿದ್ದೇವು. ನಮ್ಮ ತಂದೆ ಲಕ್ಷö್ಮಣ ಜಾರಕಿಹೊಳಿ ಅವರು ಸಂಘಟನೆಯ ಸಲುವಾಗಿ ಮೂರು ತಿಂಗಳು ಜೈಲಿನಲ್ಲಿದ್ದರು. ಜನಸಂಘ ಪರಿವಾರದಿಂದ ಬಂದಿರುವAಥ ಕುಟುಂಬ ಜಾರಕಿಹೊಳಿ ಕುಟುಂಬ ಎಂದರು. ನಮ್ಮ ತಂದೆಯವರು ಜಗನಾಥ್ ಜೋಶಿ ಅವರ ಪಾಲೋರ‍್ಸ್. ನಮ್ಮ ತಂದೆಯವರು ಗೋವಾ ಚಳುವಳಿಯಲ್ಲಿ ಮೂವರೆ ತಿಂಗಳು ಜೈಲಿನಲ್ಲಿದ್ದರು. ಮೊದಲಿಗೆ ದೀಪದ ಚಿತ್ರ ಇತ್ತು. ಅನಿವಾರ್ಯ ಕಾರಣದಿಂದ ನಾವು ಕಾಂಗ್ರೆಸ್‌ಗೆ ಹೋಗಬೇಕಾಗಿತ್ತು. ಮತ್ತೇ ಸದ್ಯ ಮರಳಿ ಬಂದಿರುವ ಕಾರಣ ರಾಜ್ಯದ ಜನರಿಗೆ ಗೊತ್ತಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಭಾನುವಾರ ನಾವಗೆ ಗ್ರಾಮದಲ್ಲಿ ಹಿಂದೂತ್ವದ ಏಕತೆಗಾಗಿ ಹಿಂದೂ ಕಾರ್ಯಕರ್ತರ ೨೪ನೇ ವರ್ಷದ ಸ್ನೇಹ ಭೋಜನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಯಾವುದೇ ಹಣದ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಕೊಲ್ಲಾಪುರದ ಜೋತಿಬಾ ದೇವಿಯ ಪಾದ ಮುಟ್ಟಿ ಆಣೆ ಮಾಡಬೇಕು. ಈ ಮೂಲಕ ಈ ಭಾಗವನ್ನು ಬಿಜೆಪಿ ವಶಪಡಿಸಿಕೊಳ್ಳುವ ಸಂಕಲ್ಪ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು.

loading...