ಚಿಕ್ಕೋಡಿ-ಸದಲಗಾ ನೀರಿನ ಸಮಸ್ಯೆ ನಿವಾರಣೆ: ಪ್ರಕಾಶ ಹುಕ್ಕೇರಿ

0
58

ಕನ್ನಡಮ್ಮ ಸುದ್ದಿಚಿಕ್ಕೋಡಿ 25: ಚಿಕ್ಕೋಡಿ-ಸದಲಗಾ ಪಟ್ಟಣಗಳಿಗೆ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳನ್ನು ಜಾರಿಗೆಗೊಳಿಸುವ ಮೂಲಕ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ಪಟ್ಟಣದ ಹೊಸಪೇಠ್‌ ಗಲ್ಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಅನುದಾನದಡಿ 1 ಕೋಟಿ ವೆಚ್ಚದಲ್ಲಿ ದತ್ತ ಮಂದಿರದ ಜೀರ್ಣೋದ್ಧಾರ ಕಾಮಗಾರಿಗೆ ಬಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 35 ವರ್ಷಗಳ ಅವಧಿಯ ನನ್ನ ರಾಜಕೀಯ ಜೀವನದಲ್ಲಿ ಮತಕ್ಷೇತ್ರಕ್ಕೆ ಇಷ್ಟು ಅನುದಾನ ತಂದಿದ್ದು ಇದೇ ಮೊದಲು ಕಾಂಗ್ರೆಸ್‌ ಸರಕಾರ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರಿಂದಲೇ ದಾಖಲೆ ಮೊತ್ತದ ಅನುದಾನ ತರಲು ಸಾಧ್ಯವಾಗಿದೆ ಎಂದರು. ಚಿಕ್ಕೋಡಿ ಪಟ್ಟಣ ಸೇರಿದಂತೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಸಮುದಾಯಗಳಿಗೆ ಅಗತ್ಯವಿರುವ ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗಿದ್ದು, ದತ್ತ ಮಂದಿರದ ಹೆಚ್ಚುವರಿ ಅಭಿವೃದ್ಧಿ ಇನ್ನೂ 50 ಲಕ್ಷ ಅನುದಾನ ನೀಡುವದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಆರತಿ ಮುಂಡೆ, ನರೇಂದ್ರ ನೇರ್ಲಿಕರ, ರಾಮಾ ಮಾನೆ, ರವಿ ಪಾಟೀಲ, ಜಿ.ಎಸ್‌. ಕುಲಕರ್ಣಿ, ಡಿ.ಎಂ. ಕುಲಕರ್ಣಿ, ಎಸ್‌.ಜಿ.ಜಹಾಗೀರದಾರ, ಸುರೇಶ ಕಟ್ಟಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...