ಚಿಕ್ಕೋಡಿ ಪುರಸಭೆ ಬಿ.ಜೆ.ಪಿ ತೆಕ್ಕೆಗೆ

0
7

ಚಿಕ್ಕೋಡಿ ಪುರಸಭೆ ಬಿ.ಜೆ.ಪಿ ತೆಕ್ಕೆಗೆ

ಕನ್ನಡಮ್ಮ ಸುದ್ದಿ -ಚಿಕ್ಕೋಡಿ : ಇಲ್ಲಿನ‌ ಚಿಕ್ಕೋಡಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾ‌ನದ ಚುನಾವಣಾ ಇಂದು ನಡೆದಿದ್ದು ,ನಿರೀಕ್ಷೆಯಂತೆ ಬಿಜೆಪಿಯ ಅಭ್ಯರ್ಥಿಗಳು ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ೧೦ ಹಾಗೂ ಬಿಜೆಪಿಯ ೧೩ ಸದಸ್ಯರು ಆಯ್ಕೆಯಾಗಿದ್ದರು .ಅಧ್ಯಕ್ಷ ಸ್ಥಾ‌ನಕ್ಕೆ ಪರಿಶಿಷ್ಟ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲು ನೀಡಿ ಸರಕಾರ ಆದೇಶ ಹೊರಡಿಸಿತ್ತು .ಇ‌ಂದು ನಡೆದ ಚುನಾವಣೆಯಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಮಾರ್ಗದರ್ಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ಬಾಜಿರಾವ್ ಕಾಂಬಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಜಯ ಚ. ಕವಟಗಿಮಠ ಅವರನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .ಚುನಾವಣಾ ಅಧಿಕಾರಿಯಾಗಿ ತಹಶಿಲ್ದಾರರ ಸುಭಾಷ್ ಸಂಪಗಾವಿ ಕಾರ್ಯ ನಿರ್ವಹಿಸಿದರು .

loading...