ಚಿನ್ನ ಗೆದ್ದ ಹಿಮಾ ಈಗ ಅಸ್ಸಾಂ ಕ್ರೀಡಾ ರಾಯಭಾರಿ

0
22

ಅಸ್ಸಾಂ:ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದ ಹಿಮಾ ದಾಸ್ ಅವರನ್ನು ಅಸ್ಸಾಂ ರಾಜ್ಯದ ಕ್ರೀಡಾ ರಾಯಭಾರಿಯಾಗಿ, ಸಿಎಂ ಸರ್ಬಾನಂದ್ ಸೋನೋವಾಲ್ ಆಯ್ಕೆ ಮಾಡಿದ್ದಾರೆ.
20 ವರ್ಷದೊಳಗಿನ ಜೂನಿಯರ್ ಚಾಂಪಿಯನ್ ಶಿಪ್ 400 ಮೀಟರ್ ಫೈನಲ್ ನಲ್ಲಿ 18 ವರ್ಷದ ಹಿಮಾ, ಚಿನ್ನದ ಸಾಧನೆ ಮಾಡಿದ್ದರು. ಅಲ್ಲದೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದರು.

loading...