ಚುನಾವಣಾ ಪ್ರಚಾರ ವೇಳೆ ನೂಕುನುಗ್ಗಲು ಪ್ರಕರಣ: ಸಾವಿನ ಸಂಖ್ಯೆ 15ಕ್ಕೇರಿಕೆ

0
1

ಅಬುಜಾ: ನೈಜಿರಿಯಾದ ರಿವರ್ಸ್ ರಾಜಧಾನಿ ಪೊರ್ಟ್ ಹರಕೋರ್ಟ್ ನಗರದಲ್ಲಿ ಆಯೋಜಿಸಿದ್ದ ಅಧ್ಯಕ್ಷೀಯ ಚುನಾವಣೆ ಪ್ರಚಾರ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.
ಹಾಲಿ ಅಧ್ಯಕ್ಷ ಮುಹಮ್ಮದು ಬುಹಾರಿ ಅವರು ಚುನಾವಣೆ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ ವೇದಿಕೆಯಿಂದ ಹೊರಗೆ ಹೋದ ನಂತರ ದುರಂತ ಸಂಭವಿಸಿದ್ದು, ಇದುವರೆಗೆ 15 ಜನ ಸಾವನ್ನಪ್ಪಿದ್ದಾರೆ. ನೂಕುನುಗ್ಗಲಿನಲ್ಲಿ ಗಾಯಗೊಂಡಿದ್ದ ಇನ್ನೂಳಿದ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ ಎಂದು ಪೊರ್ಟ್ ಹರಕೋರ್ಟ್ ತರಬೇತಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡೆನಿಯಲ್ ಇಲಿಬಿಗ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬುಹಾರಿ ಅವರ ಸಭೆಯಿಂದ ನಿರ್ಗಮಿಸಿದ ನಂತರ ಕೆಲ ಬೆಂಬಲಿಗರು ಗೇಟ್ ಮುರಿದು ಹೊರಹೋಗಲು ಪ್ರಯತ್ನಿಸಿದ್ದಾಗ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ.
ನೈಜಿರಿಯಾದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರ ಚುನಾವಣೆ ಶನಿವಾರ ನಡೆಯಲಿದ್ದು, ಬುಹಾರಿ ಅವರು 2015ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಬುಹಾರಿ ಅವರು 1983ರಿಂದ 85ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಮೂರನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ

loading...