ಚುನಾವಣೆಯಲ್ಲಿ ಮತದಾರರೇ ನಿರ್ಣಾಯಕರು: ಶಾಸಕ ಸತೀಶ

0
12

 

ಬೆಳಗಾವಿ

ಲೋಕಸಭಾ ಕ್ಷೇತ್ರದ ಉಪಚುನಾವಣೆ ಇದು ಕಾರ್ಯಕರ್ತರ ಚುನಾವಣೆ. ಮತದಾರರೇ ನಿರ್ಣಾಯಕ ಇರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರ ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿ ಲೋಕ ಸಭಾ ಕ್ಷೇತ್ರದಲ್ಲಿ ಮತದಾರರೆ ನಿರ್ಣಯ ಅಂತಿಮ. ಆವರೇ ನಿರ್ಧಾರ ಮಾಡಬೇಕು ಯಾರಿಗೆ ಮತಹಾಕಬೇಕು ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ ‌ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾವೂ ಕೂಡ ನೇರವಾಗಿ ಎಲ್ಲಾ ನಾಯಕರು ಎಲ್ಲ ಸಮಾಜದ ಸಂಪರ್ಕದಲ್ಲಿ ಇದ್ದೇವೆ. ಎಲ್ಲಾ ಸಮುದಾಯ ಮುಖಂಡರು ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ನಾವು ಎಲ್ಲಾ ಸಮುದಾಯ ಮುಖಂಡರನ್ನ ಭೇಟಿ ಮಾಡುತ್ತಿದ್ದೇವೆ ಎಂದರು.

ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಯನ್ನು ಎರಡು ಲಕ್ಷ ಮತಗಳಿಂದ ಗೆಲ್ಲಿಸಿ ಎಂದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಎರಡು ಲಕ್ಷ ಮತ ಬೀದ್ದರೂ ಅಷ್ಟೇ
ಒಂದು ಓಟು ಬಿದ್ದ ಗೆದ್ದರೂ ಗೆದ್ದ ಹಾಗೆ. ಮತದಾರರೇ ನಿರ್ಣಯ ಮಾಡಬೇಕು. ಇದು ಮತದಾರ ಚುನಾವಣೆ ಇದೆ ಎಂದರು.

ಬೆಲೆ ಏರಿಕೆ ಕುರಿತು ಡಿಸಿಎಂ ಕಾರಜೋಳ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬೆಲೆ ಏರಿಕೆ ಸೇರಿದಂತೆ ದೇಶಗಳಲ್ಲಿ ನಡೆಯುವ ಎಲ್ಲಾ ಘಟನೆಗಳಿಗೆ ಕೇಂದ್ರ ರಾಜ್ಯ ಜವಾಬ್ದಾರಿ ಇರ್ತಾರೆ. ಅವರೇ ಹೇಳಬೇಕು. ಏಳು ವರ್ಷಗಳ ವೈಪಲ್ಯ ಜನರೇ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

loading...