ಚೆನ್ನಮ್ಮ ವೃತ್ತವನ್ನು ಮಾದರಿ ವೃತ್ತವನ್ನಾಗಿಸುವೆ: ಶಾಸಕ ಬೆನಕೆ

0
22

 

ಬೆಳಗಾವಿ

ಬೆಳಗಾವಿ ನಗರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವೃತ್ತವನ್ನು ಮಾದರಿ ವೃತ್ತವನ್ನಾಗಿ ಮಾಡಲಾಗುವುದು ಎಂದು ಶಾಸಕ ಅನಿಲ್ ಬೆನಕೆ‌ ಹೇಳಿದರು.

ಶುಕ್ರವಾರ ರಾಣಿ ಚನ್ನಮ್ಮ ವಿಜಯೋತ್ಸವದ ಅಂಗವಾಗಿ ನಗರದ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಾಜೀಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯದ‌ಕ್ಕಾಗಿ ಬ್ರಿಟಿಷ್ ರ ವಿರುದ್ದ ಹೋರಾಡಿದ ದೀರ ಮಹಿಳೆ ಚನ್ನಮಾ. ಚನ್ನಮ್ಮ ವೃತ್ತದ ಪುತ್ಥಳಿಯ ವೃತ್ತವನ್ನು ಮಾದರಿ ವೃತ್ತವನ್ನಾಗಿಸಲು ಶ್ರಮಿಸಿಸುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ್ದ ಬೆಳ್ಳಿ ಚಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಾಜೀಯ ವಿಜಯೋತ್ಸವದ ಅಂಗವಾಗಿ ಬೆಳಗಾವಿ ‌ನಗರದ ಚನ್ನಮ್ಮ ವೃತ್ತದಲ್ಲಿ ವಿವಿಧ ಕನ್ನಡ ಸಂಘಟನೆಗಳು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಾಯಣ್ಣ ಹಾಗೂ ಚನ್ನಮ್ಮಳ ಧ್ವಜ ಬಿಡುಗಡೆ ಮಾಡಿ ಸಂಭ್ರಮಿಸಿದರು.

ಭಾರತದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ ಕಿತ್ತೂರಿನ ವೀರರಾಣಿ ಚನ್ನಮ್ನನವರ 242ನೇ ಜಯಂತಿಯ ಪ್ರಯುಕ್ತ ಜನಪ್ರಿಯ ಶಾಸಕರಾದ ಅನಿಲ್ ಬೆನಕೆಯವರು ಚೆನ್ನಮ್ಮ ವೃತ್ತವನ್ನು ಮಾದರಿ ವೃತ್ತವನ್ನಾಗಿ ಮಾಡುತೆನೇ ಎಂದು ಹೇಳಿದರು

ಬ್ರಿಟಿಷ್ ರ ವಿರುದ್ದ ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮಾಜೀಯ ಹೋರಾಟ ಎಲ್ಲರಿಗೂ ತಿಳಿದ ಇತಿಹಾಸ. ರಾಣಿ ಚನ್ನಮ್ಮಳ ಗತವೈಭವನ್ನು ಸಾರುವ ಹಾಗೂ ಚನ್ನಮ್ಮಾಜೀಯ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತಾಗಬೇಕು ಎಂದು ಚನ್ನಮ್ಮನ ಅಭಿಮಾನಿಗಳು ವಿನಂತಿಸಿದ್ದರು.


ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕನ್ನಡ ಹೋರಾಟಗಾರರಾದ ರಾಜು ಕೋಲಾ, ಶ್ರೀನಿವಾಸ ತಾಳೂಕರ, ಬೆಳಗಾವಿ ಉತ್ತರ ಮತಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟೆಪ್ಪನವರ, ಮಹಾಂತೇಶ ರಣಗಟ್ಟಿಮಠ, ರಮೇಶ ಯರಗಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

loading...