ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್‌ ಪ್ರವೇಶಿಸಲು ಸುಮೀತ್‌ಗೆ ಒಂದೇ ಮೆಟ್ಟಿಲು

0
6

ನ್ಯೂಯಾರ್ಕ್‌:- ಭಾರತದ ಸುಮೀತ್‌ ನಗಾಲ್‌ ಅವರು ಯುಎಸ್‌ ಓಪನ್ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿಯೂ ಜಯಬೇರಿ ಬಾರಿಸಿ ಮುಖ್ಯ ಸ್ಪರ್ಧೆಗೆ ಇನ್ನಷ್ಟು ಸನಿಹವಾಗಿದ್ದಾರೆ.ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಸುಮೀತ್ ನಗಾಲ್‌ ಅವರು ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ 22ರ ಪ್ರಾಯದ ಕೆನಡಾದ ಪೀಟರ್‌ ಪೊಲಂಸ್ಕಿ ವಿರುದ್ಧ 7-5, 7-6 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಮೂರನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.
ಮೊದಲ ಸೆಟ್‌ನಲ್ಲಿ 3-0 ಮುನ್ನಡೆಯಲ್ಲಿದ್ದ ನಗಾಲ್‌ ಅವರನ್ನು ಹಿಮ್ಮಟ್ಟಿಸಿದ್ದ ಪೊಲಂಸ್ಕಿ 3-2 ಸಮೀಪ ಬಂದರು. ಪೊಲಂಸ್ಕಿ ಮತ್ತೇ ಏಳನೇ ಗೇಮ್‌ನಲ್ಲಿ ಬ್ರೇಕ್‌ ಆದರು. ಇದನ್ನು ಸದುಪಯೋಗ ಪಡಿಸಿಕೊಂಡ ನಗಾಲ್‌ 8 ಮತ್ತು 9ನೇ ಗೇಮ್‌ಗಳಲ್ಲಿ ಗೆದ್ದು ಮೊದಲ ಸೆಟ್ ಅನ್ನು 7-5 ಅಂತರದಲ್ಲಿ ಗೆದ್ದರು.
ಎರಡನೇ ಸೆಟ್‌ನಲ್ಲಿಯೂ ನಗಾಲ್‌ 3-0 ಮುನ್ನಡೆ ಕಾಯ್ದುಕೊಂಡಿದ್ದರು. ಈ ವೇಳೆ ಕೆನಡಾ ಆಟಗಾರ ತೀವ್ರ ಪ್ರತಿರೋಧ ತೋರಿದರು. ಆದರೆ, ಕೊನೆಯ ಕ್ಷಣದಲ್ಲಿ ಪಾರಮ್ಯ ಮೆರೆದ ಸುಮೀತ್‌ ನಗಾಲ್‌ ಕೇವಲ ಒಂದು ಅಂಕ ಅಂತರದಿಂದ ಎರಡನೇ ಸೆಟ್‌ ಗೆದ್ದು ಪಂದ್ಯ ತನ್ನದಾಗಿಸಿಕೊಂಡರು.

ವಿಶ್ವದ 190ನೇ ಶ್ರೇಯಾಂಕ ಹೊಂದಿರುವ ಸುಮೀತ್ ಮೂರು ಹಾಗೂ ಅಂತಿಮ ಸುತ್ತಿನಲ್ಲಿ ಇವರಿಗೆ ಕಳೆ ಕ್ರಮಾಂಕದ ಬ್ರೆಜಿಲ್‌ನ ಜೊವಾವೊ ಮೆನೆಜೆಸ್ ಅವರ ವಿರುದ್ಧ ಸೆಣಸಲಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲೂ ಸುಮೀತ್‌ ಗೆದ್ದು ಯುಎಸ್‌ ಓಪನ್‌ ಪ್ರಧಾನ ಸುತ್ತಿಗೆ ಪ್ರವೇಶಿಸಿದರೆ, ಕಳೆದ ಆರು ವರ್ಷಗಳಿಂದ ಗ್ರ್ಯಾನ್‌ ಸ್ಲ್ಯಾಮ್‌ಗೆ ಪ್ರವೇಶಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಗೆ ಭಾಜನರಾಗಲಿದ್ದಾರೆ. 89ನೇ ಶ್ರೇಯಾಂಕದ ಪ್ರಜ್ಞೇಶ್‌ ಗುಣೇಶ್ವರನ್‌ ಅವರಿಗೆ ನೇರವಾಗಿ ಗ್ರ್ಯಾನ್‌ ಸ್ಲ್ಯಾಮ್‌ಗೆ ಅರ್ಹತೆ ನೀಡಲಾಗಿದೆ.

loading...