ಜನಪದರು ತಮ್ಮ ಪದಗಳಲ್ಲಿ ಬೀರೇಶ್ವರನ್ನು ಹೊಗಳಿದ್ದಾರೆ

0
127

ಕನ್ನಡಮ್ಮ ಸುದ್ದಿ-ಧಾರವಾಡ : ಕನ್ನಡ ಸಾಹಿತ್ಯ ರಂಗದಲ್ಲಿ ಬಹುಭಾಗ ಜನಪದೀಯರ ಸಾಹಿತ್ಯ ಶ್ರೀಮಂತಿಕೆಯಾಗಿದೆಂದರೆ ಅದು ಶ್ರೀ ಬೀರೇಶ್ವರರ ಜೀವನ ಚರಿತ್ರೆ ಒಳಗೊಂಡ ಕಾವ್ಯಗಳ ಗುಪ್ತವೇ ಕಾರಣ ಎಂದು ಮನಸೂರ ಶ್ರೀ ರೇವಣಸಿದ್ಧೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಬಸವರಾಜ ದೇವರು ಸ್ವಾಮಿಗಳು ಹೇಳಿದರು.
Àಬೋಗೂರ ಗ್ರಾಮದಲ್ಲಿ ಶ್ರೀ ಬೀರೇಶ್ವರ ಮಂದಿರ ಹಾಗೂ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಶ್ರೀ ಬೀರಶ್ವೇರ ಧರ್ಮ ಪರಂಪರೆ ಇಡೀ ದೇಶದಲ್ಲಿಯೇ ಅತೀ ಪುರತನವಾದದು ಬಹು ಇತಿಹಾಸವುಳ್ಳದ್ದು ಶ್ರೀ ಬೀರೆಶ್ವರನ್ನು ಬಸವಣ್ಣ ಮೊದಲು ಮಾಡಿಕೊಂಡು ಕಾಳಿದಾಸ, ಕನಕದಾಸ, ವಚನಕಾರ, ವೀರಗೊಲ್ಲಾಶೇಶ್ವರ, ಇಟಗಿ ಭೀಮಾಂಬಿಕೆ, ಸಂಗೋಳ್ಳಿ ರಾಯಣ್ಣ ಸೇರಿದಂತೆ ನಮ್ಮ ಡೊಳ್ಳಿನ ಹಾಡುಗಾರರು ಜನಪದರು ತಮ್ಮ ಪದಗಳಲ್ಲಿ ಬೀರೇಶ್ವರನ್ನು ಮನದಲ್ಲಿ ಹಾಡಿ ಹೊಗಳಿದ್ದಾರೆ ಎಂದರು.
ಸತ್ಯ ಧರ್ಮ ಪ್ರಮಾಣೆಕತೆಗೆ ಹೆಸರಾದ ಹಾಲು ಮತಸ್ಥರು ಕಂಬಳಿ ಬೀಸಿ ಮಳೆ ತರಿಸಿದುಂಟ್ಟು ಈಗಲೂ ಎಸ್ಟೇ ಕಡೆ ಕುರುಬರಿಂದ ಬೋಣೆಗೆ ಮಾಡಿಸುವುದು ಸಂಪ್ರದಾಯ ಇದೆ ಅಷ್ಟೊಂದು ನಂಬಿಕೆ ಪಾತ್ರರಾದ ಕುರುವಜನಾಂಗಯಲ್ಲ ಸರ್ವ ಧರ್ಮಿಯರೊಂದಿಗೆ ಕೂಡಿ ಬಾಳುವ ವಿಶಿಷ್ಟ ಜನಾಂಗವಾಗಿದೆ ಎಂದರು.
ನಂತರ ಸಾಮೂಹಿಕ ವಿವಾಹಗಳು ಹಾಗೂ ಬೀರೇಶ್ವರ ಭವ್ಯ ಫಲಕ್ಕಿ ಉತ್ಸವ ಅಭಿಷೇಕ ದಾಸೋಹ ಜರುಗಿದವು.

loading...