ಜನಪದ ಸಂಸ್ಕøತಿಯನ್ನು ಉಳಿಸಿ

0
46

ಧಾರವಾಡ : ಕಲಾ ಪ್ರಕಾರಗಳನ್ನು ಶಾಸನ ರೂಪದಲ್ಲಿ ಬರೆದ ಮಾನವ ಅಂದಿನಿಂದ ಇಂದಿನವರೆಗೂ ಜನಪದ ಸಂಸ್ಕøತಿಯನ್ನು ಉಳಿಸಿ, ಪರಂಪರೆ ಮುಂದುವರೆಸಲು ನಾವಿಂದು ಕಷ್ಟಪಡಬೇಕಾಗಿದೆ ಇತಿಹಾಸಕಾರ ಡಾ. ಮಹೇಶಕುಮಾರ ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ಹಮ್ಮಿಕೊಂಡ ‘ಜನಪದ ವೈಭವ’ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕ ಜಾನಪದ ಪ್ರಾಚೀನ ಕಲೆಗಳಲ್ಲಿ ಒಂದಾಗಿದೆ. ಕನ್ನಡ ನಾಡು-ನುಡಿ ಕಟ್ಟುವಲ್ಲಿ, ಕನ್ನಡ ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ನಾವುಗಳೆಲ್ಲ ಶ್ರಮಿಸಬೇಕಾಗಿದೆ. 25 ಲಕ್ಷ ವರ್ಷದ ಹಿಂದೆ ಖ್ಯಾತ ಮಾನವ ವಿಜ್ಞಾನಿ, ಸಂಶೋಧಕ ‘ಹೋಮಿನಾಯ್ಡು’ ಅವಿಷ್ಕಾರದಿಂದ ಕೋತಿಯ ಸಂತತಿಯಿಂದ ಮಾನವ ಬೆಳೆದು ಬಂದನು. ನಂತರ ಹೊಮೋ ಎರಕ್ಸಸ್ ವಿಜ್ಞಾನಿ ಸಂಶೋಧನೆಯಿಂದ ನಿಲ್ಲುವ ಮಾನವನನ್ನು ಗುರುತಿಸಿದ. ಕಾಡಿನಲ್ಲಿರುವ ಪ್ರಾಣಿಗಳೊಂದಿಗೆ ಜೀವಿಸಲಾರಂಭಿಸಿ ಅವುಗಳಿಂದ ಪ್ರತ್ಯೇಕಗೊಂಡನು. ಆ ಸಮಯದಲ್ಲಿ ಸನ್ನೆ ಮೂಲಕ ವ್ಯವಹರಿಸಲು ಶುರು ಮಾಡಿದ ಎಂದರು.
ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ನಾಗಪ್ಪ ಉಂಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ತಮ್ಮ ಜೀವನದಲ್ಲಿ ವಿವಿಧ ರೀತಿಯ ಕಲೆಗಳನ್ನು ಮೈಗೂಡಿಸಿಕೊಂಡಿದ್ದರ ಪರಿಣಾಮವಾಗಿ ನಾವಿಂದು ಸುಗ್ಗಿಪದ, ಗಿಗೀ ಪದ, ಬೀಸುಕಲ್ಲ ಪದ, ತತ್ವಪದ, ನಾಟಕ ಹೀಗೆ ವಿಶಿಷ್ಟ ರೀತಿಯ ಆಯಾಮಗಳನ್ನು ಕಂಡಿದ್ದೇವೆ. ಮುಂದಿನ ಪೀಳಿಗೆಗೆ ಕಲಿಸಿ, ಉಳಿಸುವಂತೆ ನಮ್ಮ ಕರ್ತವ್ಯ ಪಾಲಿಸಬೇಕೆಂದರು. ನಿವೃತ್ತ ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಸ್.ಎಸ್. ರೋಣದ ಹಾಗೂ ನಿವೃತ್ತ ಆರ್.ಟಿ. ಓ. ವೀರಣ್ಣ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here