ಜನರಿಕ್ ಮಳಿಗೆಗೆ ಬೀಗ: ರೋಗಿಗಳ ಪರದಾಟ

0
3

ನರಗುಂದ: ಆಯುಷ್ಮಾನ ಭಾರತ ಯೊಜನೆಯಡಿಯಲ್ಲಿ ನರಗುಂದ ಪಟ್ಟಣದ ತಾಲೂಕಾಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಜನರಿಕ್ ಔಷಧಿ ಮಳಿಗೆಯಲ್ಲಿ ರೋಗಿಗಳಿಗೆ ಬೇಕಾದ ಔಷಧಿಗಳು ಸರಿಯಾಗಿ ದೊರೆಯುತ್ತಿಲ್ಲ. ಔಷಧಿಗಳ ಕೊರತೆಯಿಂದ ಕಳೆದ ಐದು ದಿನಗಳಿಂದ ಜನರಿಕ್ ಮಳಿಗೆಗೆ ಬೀಗ ಹಾಕಿದ್ದರಿಂದ ಬಡ ರೋಗಿಗಳು ಪರದಾಡುವಂತಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಡವರಿಗೆ ಕಡಿಮೆ ಬೆಲೆಯಲ್ಲಿ ಯೋಗ್ಯ ಔಷಧಿಗಳು ದೊರೆಯಲಿ ಎಂಬ ಉದ್ದೆÃಶದಿಂದ ಆಯುಷ್ಮಾನ ಭಾರತ ಯೋಜನೆಯಡಿ ದೇಶದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಮಳಿಗೆಗಳನ್ನು ತೆರೆದಿದ್ದಾರೆ. ಇದರಿಂದ ದೇಶದ ಕೋಟ್ಯಾಂತರ ಜನರು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಖರೀಧಿಸಿ ಲಾಭವನ್ನು ಪಡೆದಿದ್ದಾರೆ. ಆದರೆ, ನರಗುಂದ ಪಟ್ಟಣದಲ್ಲಿರುವ ಜನರಿಕ್ ಮಳಿಗೆಯನ್ನು ಕಳೆದ ಐದಾರು ದಿನಗಳಿಂದ ಬಂದ್ ಮಾಡಿದ್ದರಿಂದ

ರೋಗಿಗಳು ನಿತ್ಯ ಜನರಿಕ್ ಮಳಿಗೆಗೆ ಹಾಕಿದ ಕೀಲಿಯನ್ನು ನೋಡಿ ಬೇರೆಡೆಯಿಂದ ಹೆಚ್ಚಿಗೆ ದುಡ್ಡು ಖರ್ಚು ಮಾಡಿ ಔಷಧಿ ಮಾತ್ರೆ ತರುವಂತಾಗಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಜನರಿಕ್ ಮಳಿಗೆಯಲ್ಲಿ ಸಾರ್ವಜನಿಕರಿಗೆ ಬೇಕಾಗುವ ಗುಣಮಟ್ಟದ ಔಷಧಿಗಳನ್ನು ದೊರೆಯುವಂತೆ ಗಮನವನ್ನು ಹರಿಸಬೇಕು ಎಂದು ಸಾರ್ವಜನಿಕರಾದ ಕಾಶಪ್ಪ ಮಾನೆ, ಲಕ್ಷö್ಮಪ್ಪ ಘಾಟಗೆ. ಯಲ್ಲಪ್ಪ ಹುಣಸ್ಯಾಳ. ತಿಮ್ಮಮ್ಮ ಕಾಶಪ್ಪನವರ, ಲಕ್ಷಿö್ಮÃ ತೋಂಡ್ಲೆ, ಸಾವಿತ್ರಿ ಕೀಲಿಕೈ ಆಗ್ರಹಿಸಿದ್ದಾರೆ.

ವರುಣ ಸವದಿ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಇಲ್ಲಿ ಜನರಿಕ್ ಮಳಿಗೆಯನ್ನು ಆರಂಭಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳ ವ್ಯಾಪ್ತಿಯಲ್ಲಿ ಇದರ ಹೊಣೆಗಾರಿಕೆ ಇರುತ್ತದೆ. ಜನರಿಕ್ ಮಳಿಗೆಯಲ್ಲಿ ಸಾರ್ವಜನಿಕರಿಗೆ ಬೇಕಾದ ಔಷಧಿಗಳು ಇರುವುದಿಲ್ಲ. ಸರಿಯಾಗಿ ಬಾಗಿಲು ತೆರೆಯುವುದಿಲ್ಲ ಎಂದು ರೋಗಿಗಳಿಂದ ಆಗಾಗ ಅನೇಕ ದೂರುಗಳು ಬಂದಿವೆ.
ಈ ಕುರಿತು ಮಳಿಗೆಯ ಹೊಣೆಗಾರಿಕೆಯನ್ನು ಹೊತ್ತಿರುವ ಹಿರೇಮಠ ಎಂಬುವರಿಗೆ ಸಾರ್ವಜನಿಕರು ನೀಡಿರುವ ದೂರುಗಳ ಬಗ್ಗೆ ತಿಳಿಸಿದ್ದರೂ ಕೂಡಾ ಯಾವುದನ್ನು ಸರಿಪಡಿಸಿಕೊಂಡಿಲ್ಲ. ಕಳೆದ ಎರಡು ದಿನಗಳ ಹಿಂದೆ ಹಿರೇಮಠ ಅವರಿಗೆ ದೂರವಾಣಿಯಲ್ಲಿ ಮಾತನಾಡಲು ಪ್ರಯತ್ನಿಸಿದರೂ ಸಹ ಅವರು ಮಾತನಾಡುತ್ತಿಲ್ಲ. ಹಿರೇಮಠ ಅವರ ಮನೆಯಲ್ಲಿ ಮದುವೆ ಇರುವುದರಿಂದ ಅವರು ಮಳಿಗೆ ಆರಂಭಿಸಿಲ್ಲ ಎಂದು ಕೆಲವರಿಂದ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

loading...