ಜನರಿಗೆ ಕರಂಟ ಶಾಕ್

0
59

ಮೊದಲೆ ಲೋಡ್ ಶೆಡ್ಡಿಂಗ್ ಮಾಡಿ ಜನರಿಗೆ ತೊಂದರೆ ಕೊಡುತ್ತಿರುವ ವಿದ್ಯುತ್ ನಿಗಮಗಳು ಬೆಳಕಿನ ಹಬ್ಬ ದೀಪಾವಳಿ ಮುಗಿದ ಮರು ದಿನವೇ ವಿದ್ಯುತ್ ದರ ಹೆಚ್ಚಳ ಮಾಡಿ ಜನರಿಗೆ  ಶಾಕ್ ನೀಡುವ ಕಾರ್ಯವನ್ನು  ಮಾಡಿದೆ. ಅದರಲ್ಲಿಯೂ ಗೃಹ ಬಳಕೆ. ವಾಣಿಜ್ಯ ಬಳಕೆ, ಕೈಗಾರಿಕೆ ಬಳಕೆ ಎಂಬ ವಿಭಾಗಗಳನ್ನು ಮಾಡಿ ಆಯಾ ವಿಭಾಗದಲ್ಲಿ ಬೇರೆ ಬೇರೆ ರೀತಿಯಲ್ಲಿ ದರ ಏರಿಕೆ ಮಾಡಿ ಅದನ್ನು ಶುಕ್ರವಾರದಿಂದಲೇ ಜಾರಿಗೆ ತರಲಾಗಿದೆ. ಗೃಹ ಬಳಕೆಗಾಗಿ ಉಪಯೋಗ ಮಾಡುವ ನಗರ ಪ್ರದೇಶದ ಜನರಿಗೆ ಮೊದಲ 30 ಯುನಿಟ್ ನಂತರ ಪ್ರತಿ ಯುನಿಟಿಗೆ 10 ಪೈಸೆ ಏರಿಕೆ  ಮಾಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಮೊದಲ ಬಳಕೆಯ 100 ಯುನಿಟ್ ನಂತರ ಪ್ರತಿ ಯುನಿಟಿಗೆ 10 ಪೈಸೆ ಏರಿಕೆ ಮಾಡಲಾಗಿದೆ.  ಗ್ರಾಮಾಂತರ ಪ್ರದೇಶದಲ್ಲಿ ಬಳಕೆ ಪ್ರಮಾಣಕ್ಕೆ ಅನುಗುಣವಾಗಿ 2.10 ರೂಪಾಯಿಂದ 5 ರೂಪಾಯಿಯ ವರೆಗೆ ಹೆಚ್ಚಳ ಮಾಡಲಾಗಿದೆ. ನಗರ ಪ್ರದೇಶದಲ್ಲಿ ವಾಣಿಜ್ಯ ಬಳಕೆಗೆ ಮೊದಲ 50 ಯುನಿಟಗಳಿಗೆ 5.60 ರೂ. ದಿಂದ 6 ರೂಪಾಯಿಗೆ ಏರಿಕೆ ಮಾಡಲಾಗಿದ್ದು, 50 ಯುನಿಟ್ಗಿಂತ ಹೆಚ್ಚು ಬಳಕೆ ಮಾಡುವವರುಇಗೆ 6.80 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ವಾಣಿಜ್ಯ ಬಳಕೆಗೆ ಪ್ರತಿ ಯುನಿಟಿಗೆ  10 ಪೈಸೆ  ಹೆಚ್ಚಳ ಮಾಡಲಾಗಿದೆ.  ಕೈಗಾರಿಕೆಗಾಗಿ ಬಳಕೆಯಾಗುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗ ಇರುವ 3.60 ರೂಪಾಯಿ ಹಾಗೂ 4.70ರೂ. ದರವನ್ನು ಕ್ರಮವಾಗಿ 4 ರೂ. ಹಾಗೂ 5 ರೂಪಾಯಿಗೆ  ಹೆಚ್ಚಳ ಮಾಡಲಾಗಿದೆ. ಎಚ್. ಟಿ. ಕೈಗಾರಿಕೆ ಬಳಕೆಯ ದರ ವನ್ನು 4.60 ರಿಂದ 4.90 ಕ್ಕೆ ಹಾಗೂ 5 ರೂಪಾಯಿಯಿಂದ 5.30 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಈ ದರ ಏರಿಕೆಗೆ ನಿರ್ವಾಹಣಾ ವೆಚ್ಚ ಸಿಬ್ಬಂದಿ ವೇತನ ವೆಚ್ಚ ಹೆಚ್ಚಾಗಿರುವುದು ಹಾಗೂ ಕಲ್ಲಿದ್ದಲು ಖರೀದಿಗೆ  ಹೆಚ್ಚಿನ ಹಣ ಉಪಯೋಗ ಮಾಡಬೇಕಾಗಿ ಬಂದಿರುವುದು ಕಾರಣವಾಗಿದೆ ಎಂದು ಹೇಳಲಾಗಿದೆ. ಆದರೆ ರಾಜ್ಯದಲ್ಲಿರುವ ರಲ್ಲ ವಿದ್ಯುತ್  ನಿಗಮಗಳಿಗೆ ಸಾವಿರಾರು ಕೋಟಿ  ರೂಪಾಯಿ ಬಾಕಿ ಬರಬೇಕಾಗಿದೆ.  ಹಾಗೂ ವಿದ್ಯುತ್ ಸೋರಿಕೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.  ಈ ಎರಡೂ ಮಾರ್ಗಗಳಲ್ಲಿ ಆಗುತ್ತಿರುವ  ನಷ್ಟವನ್ನು ತಪ್ಪಿಸಿದರೆ  ಜನರ ಮೇಲೆ  ಈ ರೀತಿ  ದರ ಏರಿಕೆಯ ಭಾರವನ್ನು  ಹೇರುವ ಪ್ರಮೇಯವೇ ಬರುವುದಿಲ್ಲ. ಆದ್ದರಿಂದ  ಆಕ್ರಮಗಳನ್ನು ಅನುಸರಿಸುವುದನ್ನು ಬಿಟ್ಟು ಯಾವುದೇ ಶ್ರಮ ಪಡೆಯದೆ ಜನರ ತಲೆಗೆ ಭಾರದ ಹೊರೆಯನ್ನು ಹೊರೆಸಿ ಅಧಿಕಾರಿಗಳು ಮೋಜು ನೋಡುತ್ತಾರೆ. ಈಗ ದರ ಏರಿಕೆ ಮಾಡಿ 6 ತಿಂಗಳ ನಂತರ ಮತ್ತೆ ಹಾನಿಯಾಗಿದೆ ಎಂದು ಹೇಳಿ  ಮತ್ತೆ ಬೆಲೆ ಏರಿಕೆಗೆ ಮುಂದಾಗುತ್ತಾರೆ ಇದರಿಂದ  ಜನರು ಂಆತ್ರ ಮೂಕ ಬಸವನ ಹಾಗೆ ತಲೆ ಕೆಳಗೆ ಮಾಡಿ ಹೆಚ್ಚಿನ ಭಾರವನ್ನು ಹೊರುತ್ತಲೆ ಹೋಗಬೇಕಾಗುತ್ತದೆ. ಯಾಕೆಂದರೆ ವಿದ್ಯುತ್ ಬಿಟ್ಟರೆ ಜನರ ಜೀವನ ನಡೆಯುವುದೇ ಇಲ್ಲ. ಹೀಗಾಗಿ ಎಷ್ಟೇ ಬೆಲೆ ಹೆಚ್ಚಾದರೂ ವಿದ್ಯುತ್ ಬೇಕೆ ಬೇಕು, ಆದ್ದರಿಂದ ದರ ಏರಿಕೆಯ ವಿರುದ್ಧ  ಪ್ರತಿಭಟನೆಯನ್ನು ಮಾಡಬಹುದೇ ಹೊರತು ವಿದ್ಯುತ್ ಬೇಡ ಎಂದು ಹೇಳುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಅಧಕಾರಿಗಳಿಗೆ  ಈ  ಸತ್ಯ  ಗೊತ್ತಿರುವುದರಿಂದ ಮೂರು ದಿನ ಕೂಗಾಡುತ್ತಾರೆ. ನಂತರ ಸುಮ್ಮನಾ ಗುತ್ತಾರೆ ಎಂಬುದು ಅಧಿಕಾರಿಗಳಿಗೆ  ಗೊತ್ತಿರುವುದರಿಂದ ಅವರು ಕಾಲಕಾಲಕ್ಕೆ  ಈ ರೀತಿ ದರ ಏರಿಕೆ ಮಾಡಿ  ಕೈ ತೊಳೆದುಕೊಳ್ಳುವ ಕಾರ್ಯವನ್ನು  ಮಾಡುತ್ತಾರೆ.

ಇಂಧನ  ಸಚಿವೆ ಶೋಭಾ ಕರಂದ್ಲಾಜೆ ಅವರು ನಷ್ಟದ ಕಾರಣಗಳನ್ನು   ಕಂಡು ಹಿಡಿದು ಆ ನಷ್ಟ ತಪ್ಪಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ  ಜನರ ಮೇಲೆ  ಈ ರೀತಿ ಆಗಾಗ ದರ ಏರಿಕೆ ಮಾಡುವ ತೊಂದರೆಯನ್ನು ತಪ್ಪಿಸಬೇಕು. ನಾವು ವಿದ್ಯುತ್ ನಿಗಮಗಳು  ನಷ್ಟದಲ್ಲಿ ನಡೆಯಬೇಕು ಎಂದು ಹೇಳುವುದಿಲ್ಲ. ಆದರೆ ನಷ್ಟದ ಕಾರಣಗಳನ್ನು ಕಂಡು ಹಿಡಿದು ಆ ನಷ್ಟ ತುಂಬಲು ದರ ಏರಿಕೆಯ ಮಾರ್ಗ ಬಿಟ್ಟು ಬೇರೆ  ಇರುವ ಮಾರ್ಗಗಳ ಕುರಿತು ಆಲೋಚನೆ ಮಾಡಿ ಆ ಮಾರ್ಗಗಳನ್ನು ಅನುಸರಿಸಿ ನಷ್ಟ ತುಂಬಿಕೊಳ್ಳಬೇಕು ಎಂದು ಹೇಳುತ್ತಿದ್ದೇವೆ. ನಷ್ಟವಾಗಿದೆ ಎಂಬ ಕಾರಣವನ್ನು ಮುಂದೆ ಮಾಡಿ  ದರ ಏರಿಕೆ ಮಾಡುತ್ತಾ ಹೋದರೆ   ಜನರ ಬದುಕು ದುಸ್ತರವಾಗುತ್ತದೆ.

 

loading...

LEAVE A REPLY

Please enter your comment!
Please enter your name here