ಜನರು ಹೇಳಿದ್ದನ್ನು ನಾನು ಹೇಳಿದ್ದೇನೆ ಇದರಲ್ಲಿ ನನ್ನದೇನು ಇಲ್ಲ

0
35

ಬೆಂಗಳೂರು: ವಿಧಾನ ಸಭೆ ಚುನಾವಣೆ ವೇಳೆ ಜನಾರ್ದನ ರೆಡ್ಡಿಯವರನ್ನು ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದು ಅವರ ಸೋದರ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಬಳ್ಳಾರಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು.
ವಿಧಾನ ಸಭೆ ಚುನಾವಣೆ ವೇಳೆ ಜನಾರ್ದನ ರೆಡ್ಡಿಯವರನ್ನು ದೂರ ಇಟ್ಟಿದ್ದರಿಂದ ರಾಜ್ಯದಲ್ಲಿ ಬಿಜೆಪಿ ನಿರೀಕ್ಷಿತ ಸೀಟು ಗಳಿಸಲು ಸಾಧ್ಯವಾಗಿಲ್ಲ. ಚುನಾವಣೆ ವೇಳೆಯಲ್ಲಿ ನನ್ನ ಸಹೋದರನನ್ನು ಜನಾರ್ದನ ರೆಡ್ಡಿ ಕಡೆಗಣನೆ ಬಗ್ಗೆ ಈಗ ಬಿಜೆಪಿಯವರೇ ಮಾತನಾಡಿಕೊಳ್ಳುತ್ತಿದ್ದಾರೆ. ಅವರನ್ನು ಸಕ್ರಿಯವಾಗಿಸಿಕೊಂಡಿದ್ದರೆ ಬಿಜೆಪಿ ಗೆಲ್ಲುತ್ತಿತ್ತು ಅಂತ ವಿಶ್ಲೇಷಣೆ ಮಾಡಿದ್ದಾರೆ.
ರೆಡ್ಡಿ ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿತ್ತು.ಜನರ ಅಭಿಪ್ರಾಯ ಹೀಗಿರುವಾಗ ಅದನ್ನು ಒಪ್ಪಬೇಕಲ್ವಾ?,ಜನರು ಹೇಳಿದ್ದನ್ನು ನಾನು ಹೇಳಿದ್ದೇನೆ. ಇದರಲ್ಲಿ ನನ್ನದೇನು ಇಲ್ಲ ಅಂತ ಹೇಳಿದ್ದಾರೆ.

loading...