ಜನರ ಮೆಚ್ಚುಗೆಗೆ ಪಾತ್ರರಾದ ಶಂಕರಗೌಡ ಪಾಟೀಲ

0
50

ನವದೆಹಲಿ
ಭಾನುವಾರ ವಿಶ್ರಾಂತಿ ಪಡೆದುಕೊಳ್ಳದೆ ಬಿಡುವಿಲ್ಲದ ಕೆಲಸ ನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರದ ವಿಶೇಷ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ದೆಹಲಿಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಉಪ ನಿವಾಸಿ ಆಯುಕ್ತರು ಪ್ರಸನ್ನ ಎಚ್. ಹಾಗೂ ವಿಶೇಷ ನಿವಾಸಿ ಆಯುಕ್ತರು ವಿಜಯ ರಂಜನ್ ಸಿಂಗ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಮುಂದಿನವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ದೆಹಲಿಯ ಕಾರ್ಯಕ್ರಮ ಹಾಗೂ ಕರ್ನಾಟಕ ಭವನದ ಬಾಕಿ ಉಳಿದಿರುವ ಕಟ್ಟಡ ನಿರ್ಮಾಣ ಹಾಗೂ ಇತರೆ ವಿಷಯಗಳ ಬಗ್ಗೆ, ಮಾತುಕತೆ ನಡೆಸಿದರು. ಅಲ್ಲದೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯ ಇಂಜಿನಿಯರ್ ಶಿವಯೋಗಿ ಹಿರೇಮಠ, ಲೋಕೋಪಯೋಗಿ ಕಾರ್ಯದರ್ಶಿ ಗುರುಪ್ರಸಾದ ರೊಂದಿಗೆ ದೂರವಾಣಿ ಮುಖಾಂತರ ಚರ್ಚಿಸಿ ಶೀಘ್ರವಾಗಿ ಕಾಮಗಾರಿ ಆರಂಭ ಮಾಡಲು ಸೂಚಿಸಿದರು.

loading...