ಜನವರಿ 2020ರಲ್ಲಿ ಅತಿ ಹೆಚ್ಚಿನ ತಾಪ

0
1

ವಾಷಿಂಗ್ಟನ್- ಈ ವರ್ಷದ ಮೊದಲ ತಿಂಗಳು ಅತಿ ಹೆಚ್ಚು ಜಾಗತಿಕ ತಾಪಮಾನ ದಾಖಲಿಸಿದೆ.
ಜನವರಿ 2020 ರ ತಾಪಮಾನ 141 ವರ್ಷಗಳಲ್ಲೇ ಅತಿ ಗರಿಷ್ಠ ತಾಪ ಎಂದು ಅಮೆರಿಕದ ರಾಷ್ಟ್ರೀಯ ಸಮುದ್ರ ಮತ್ತು ವಾತಾವರಣ ನಿರ್ವಹಣಾ ಸಂಸ್ಥೆ ಎನ್ ಒ ಎ ಎ ತಿಳಿಸಿದೆ.
141 ವರ್ಷಗಳ ಅವಧಿಯ ತಾಪಮಾನ ದಾಖಲೆಗಳಲ್ಲಿ ಕಳೆದ ತಿಂಗಳಿನಷ್ಟು ಹೆಚ್ಚು ತಾಪ ಹಿಂದೆಂದೂ ಇರಲಿಲ್ಲ ಎಂದು ಎನ್ ಒ ಎ ಎ ಪ್ರಕಟಣೆ ತಿಳಿಸಿದೆ.
ಕಳೆದ ತಿಂಗಳಲ್ಲಿ ತಾಪಮಾನ ಸತತ 44 ನೇ ಜನವರಿ ಮತ್ತು ಸತತ 421 ನೇ ತಿಂಗಳು ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
20ನೇ ಶತಮಾನದ ಸರಾಸರಿ ತಾಪಮಾನಕ್ಕಿಂತ 2.05 ಡಿಗ್ರಿ ಫ್ಯಾರನ್ ಹೀಟ್ ಅಂದರೆ 1.14 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಹೆಚ್ಚಿದೆ ಎಂಧು ಪ್ರಕಟಣೆ ತಿಳಿಸಿದೆ.
2016 ರ ನಂತರ ನಾಲ್ಕನೇ ಜನವರಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. 2002 ರ ನಂತರ ಹತ್ತು ಅತಿ ಹೆಚ್ಚು ತಾಪಮಾನಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.

loading...