ಜನ ನನಗೆ ಆಶೀರ್ವಾದ ಮಾಡ್ತಾರೆ : ನಡಹಳ್ಳಿ

0
59

ನಾಲತವಾಡ:- ಪಟ್ಟಣದಲ್ಲಿ ಮುಂದಿನ ಚುನಾವಣೆಯಲ್ಲಿ ಜನ ನನಗೆ ಆಶೀರ್ವಾದ ಮಾಡುತ್ತಾರೆ ಹಾಗೂ ಇಡೀ ಮುದ್ದೇಬಿಹಾಳ ತಾಲೂಕಿನಲ್ಲೇ ಅತೀ ಹೆಚ್ಚು ಜೆಡಿಎಸ್‌ ಪರ ವ್ಯಕ್ತವಾಗಿದೆ ಎಂದು ದೆ.ಹಿಪ್ಪರಗಿ ಶಾಸಕರಾದ ಎ.ಎಸ್‌.ಪಾಟೀಲ(ನಡಹಳ್ಳಿ) ಹೇಳಿದರು. ಪಟ್ಟಣದಲ್ಲಿ ಹಮ್ಮಿಕೊಂಡ ‘ಮನೆ ಮನೆಗೆ ಕುಮಾರಣ್ಣ, ಹಳ್ಳಿ ಹಳ್ಳಿಗೆ ನಡಹಳ್ಳಿ’ 3ನೇ ದಿನದ ಕಾರ್ಯಕ್ರಮದಲ್ಲಿ ಪಟ್ಟಣದ ನಾನಾ ವಾರ್ಡುಗಳಲ್ಲಿ ತಮ್ಮ ಸಮಾಜ ಸೇವೆಯ ಹಾಗೂ ಅಭಿವೃದ್ದಿ ಕಾಮಗಾರಿಗಳ ಚಿತ್ರಣವುಳ್ಳ ಕ್ಯಾಲೆಂಡರ್‌ಗಳನ್ನು ವಿತರಿಸಿ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಕಳೆದ ಸುಮಾರು 25 ವರ್ಷಗಳ ಸ್ಥಳಿಯ ಶಾಸಕರ ಆಡಳಿತದಲ್ಲಿ ಪಟ್ಟಣದಲ್ಲಿ ಚರಂಡಿಗಳು ಶುಚಿಗೊಳ್ಳುತ್ತಿಲ್ಲ, ಮೇಲ್ದರ್ಜೆಗೇರಿದರೂ ಇನ್ನೂ ಒಳ ಚರಂಡಿ ಭಾಗ್ಯ ಪಟ್ಟಣ ಕಂಡಿಲ್ಲ, ನಿಜವಾದ ಫಲಾನುಭವಿಗಳಿಗೆ ಇನ್ನೂ ವಾಸಿಸಲು ಸೂರು ಸಿಕ್ಕಿಲ್ಲ, ಎಲ್ಲೆಂದರಲ್ಲಿ ರಸ್ತೆ ಹದಗೆಟ್ಟಿವೆ, ರಾಜಕಾರಣ ಮುಖ್ಯವಲ್ಲ, ಅಭಿವೃದ್ದಿಯತ್ತ ಗಮನ ಹರಿಸಿ ಬಡವರ, ದೀನ ದಲಿತರ ಹಿಂದುಳಿದ ಕುಟುಂಬಗಳ ಕಣ್ಣಿರೊರೆಸುವ ಆಡಳಿತ ಪಟ್ಟಣದಲ್ಲಿ ಅವಶ್ಯವಿದೆ ಎಂದರು. ಈಚೆಗೆ ಕಳೆದ 3 ದಿನಗಳಿಂದಲೂ ಅಲೆದಾಡುತ್ತಿದ್ದೇನೆ ಪ್ರಮುಖವಾಗಿ ಮೂಲ ಸೌಕರ್ಯಗಳೇ ಇಲ್ಲಾ, ಕಳೆದ 15 ದಿನಗಳಿಂದ ಕುಡಿಯಲು ನೀರಿಲ್ಲ ಎನ್ನಲಾಗಿದೆ, ಇಂತಹ ಸಮಸ್ಯೆಗಳನ್ನು ಆಲಿಸಲು ಸ್ಥಳಿಯ ಶಾಸಕರು ಮುಂದೆ ಬರಬೇಕು, ಈ ಹಿಂದೆ ದಿ.ದೇಶಮುಖರ ಕಾಲದಿಂದಲೂ ಈ ಪಟ್ಟಣದಲ್ಲಿ ಜೆಡಿಎಸ್‌ ಬೇರೂರಿದೆ, ಪಟ್ಟಣದ ಎಲ್ಲಾ 4500 ಮನೆಗಳಿಗೂ ತೆರಳಿ ಆಶಿರ್ವಾದದ ಜೊತೆಗೆ ಸಮಸ್ಯೆಗಳನ್ನು ಆಲಿಸಿದ್ದೇನೆ, ಪ್ರತಿಯೊಬ್ಬರಲ್ಲಿ ದೇಶಮುಖರ ಅಭಿಮಾನವಿದೆ ಜೊತೆಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ ಎಂದರು. ಈ ವೇಳೆ ಪಟ್ಟಣದ ನೂರಾರು ಜೆಡಿಎಸ್‌ನ ಪುರುಷ-ಮಹಿಳಾ ಕಾರ್ಯಕರ್ತರು ಇದ್ದರು.

loading...