ಜಮ್ಮು ಕಾಶ್ಮೀರಕ್ಕೆ  36 ಸಚಿವರ ನಿಯೋಗ ಭೇಟಿ

0
5

ನವದೆಹಲಿ:-  ಜಮ್ಮು ಮತ್ತು ಕಾಶ್ಮೀರಕ್ಕೆ  ವಿದೇಶಿ   ರಾಯಭಾರಿಗಳನ್ನು  ಕಳುಹಿಸಿದ್ದ  ಕೇಂದ್ರ, ಈಗ   ಅಲ್ಲಿನ ತಾಜಾ ಪರಿಸ್ಥಿತಿ ಅರಿಯಲು  ಸಚಿವರ ನಿಯೋಗ  ಕಳುಹಿಸಲು   ತೀರ್ಮಾನಿಸಿದೆ.
ಇದೇ 18 ರಿಂದ 24ರ ವರೆಗೆ ನಿಯೋಗ ಭೇಟಿ ನೀಡಲಿದೆ, ನಿಯೋಗದಲ್ಲಿ 36 ಸಚಿವರಿದ್ದು,    ಗೃಹ ಸಚಿವ ಅಮಿತ್ ಶಾ ಅವರೇ ಇದರ ನೇತೃತ್ವ ವಹಿಸಲಿದ್ದಾರೆ.

ಸೂಕ್ಷ್ಮ ಪ್ರದೇಶ ಸಹಿತ ಹಲವಾರು ಸ್ಥಳಗಳಿಗೆ ನಿಯೋಗ ಭೇಟಿ ನೀಡಿ  ಯಾವ ಕಾರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದು ಕೊಳ್ಳಲಾಯಿತು. ನಂತರ  ಸರಕಾರದ ವತಿಯಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸ್ಥಳೀಯರಿಗೆ ಮನವರಿಕೆ ಮಾಡಿಕೊಡಲು  ಸಚಿವರ ನಿಯೋಗ ಮುಂದಾಗಿದೆ.

ಬೇರೆ ಬೇರೆ ಜಿಲ್ಲೆಗಳಿಗೂ  ಸಚಿವರ ತಂಡ ಪ್ರವಾಸ ಮಾಡಲಿದೆ. ಪ್ರವಾಸದ ಬಗ್ಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ಈಗಾಗಲೇ ಕೇಂದ್ರಾಡಳಿತ ಪ್ರದೇಶದ ಸರಕಾರಕ್ಕೆ ಪತ್ರ ಬರೆದು ತಿಳಿಸಿದ್ದಾರೆ .

loading...