ಜಮ್ಮು ಹೊರವಲಯದಲ್ಲಿ ಮತ್ತೆ ಘರ್ಷಣೆ: 2ನೇ ದಿನವೂ ಕರ್ಫ್ಯೂ ಜಾರಿ

0
19

ಜಮ್ಮು: ಜಮ್ಮು-ಕಾಶ್ಮೀರದ ಚಳಿಗಾಲದ ರಾಜಧಾನಿ ಜಮ್ಮುವಿನ ಹೊರವಲಯದಲ್ಲಿ ಗಲಭೆ ಭುಗಿಲೆದ್ದಿದ್ದು, ಎರಡನೇ ದಿನವಾದ ಇಂದು ಕೂಡ ಕರ್ಫ್ಯೂ ಜಾರಿ ಮಾಡಲಾಗಿದೆ.
ವದಂತಿಗಳು ಹರಡುವುದನ್ನು ತಡೆಯಲು ಮೊಬೈಲ್ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಾಧ್ಯಮ ಗುರುತಿನ ಚೀಟಿ ಇದ್ದರೂ ಪತ್ರಕರ್ತರಿಗೆ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪುಲ್ವಾಮದಲ್ಲಿ ಉಗ್ರರಿಂದ ನಡೆದ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗಲಭೆ ಉಂಟಾದುದರಿಂದ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಅದು ಇಂದು ಕೂಡ ಮುಂದುವರಿದಿದೆ. ನಿನ್ನೆ ಪ್ರತಿಭಟನಕಾರರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು.

loading...