ಜಯಂತಿಗಳ ಮೇಲೆ ಜಯಂತಿಗೆ ರಜೆ ಆಚರಣೆ

0
158

ಮಾಬುಸಾಬ.ಎಮ್.ಯರಗುಪ್ಪಿ..
ಕನ್ನಡಮ್ಮ ಸುದ್ದಿ-ನವಲಗುಂದ : ಸರ್ಕಾರಿ ಕೆಲಸ ಪಡೆಯಲು ಇವತ್ತು ಪ್ರತಿಯೂಬ್ಬರು ಹರಸಾಹಸ ಪಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಅದಕ್ಕೇ ಕಾರಣ ಕೆಲಸ ಕಮ್ಮಿ ಸಂಬಳ ಜಾಸ್ತಿ ಯಾಕೆಂದರೆ ಸÀರ್ಕಾರಿ ಕೆಲಸಗಾರರು ಮಾಡುತ್ತಿರುವಂತಹ ಕೆಲಸ ದಿನಕ್ಕೆ ನಾಲ್ಕು ಘಂಟೆ ತಿಂಗಳಿಗೆ 4 ಭಾನುವಾರದ ರಜೆ, ಒಂದು ಎರಡನೆಯ ಶನಿವಾರದ ರಜೆ ಇನ್ನೂ ಈ ದೇಶದಲ್ಲಿ ಹಬ್ಬಹರಿದಿಗಳದ್ದು ಲೆಕ್ಕವಿಲ್ಲಾ. ಸ್ವಾತಂತ್ರ್ಯ ಸಿಕ್ಕ ದಿವಸ ಜೋತೆಗೆ ಮಹಾತ್ಮರ ಹೆಸರಿನಲ್ಲಿ ನಡೆಯುವಂತಹ ಜಯಂತಿಗಾಗಿ ರಜೆ ಹೀಗೆ ಒಟ್ಟಾರೆಯಾಗಿ ಒಂದು ವರ್ಷದ 365ದಿನಗಳಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುವುದು ಅಂದಾಜು ಕೇವಲ 100 ದಿನಗಳು ಮಾತ್ರ. ಹಾಗಾಗಿ ಇವತ್ತು ಪ್ರತಿಯೂಬ್ಬ ಯುವಕ ಯುವತಿಯರು ಸರ್ಕಾರಿ ಕೆಲಸ ಪಡೆಯಲು ಲಂಚವನ್ನಾದರು ಕೂಟ್ಟು ಸೇರಿಕೂಳ್ಳಲು ಬಯಸುತ್ತಾರೆ ಪ್ರಾಮಾಣಿಕತೆಯನ್ನು ಮರೆತುಬಿಟ್ಟಿದ್ದಾರೆ.

ಇಲ್ಲಿ ಇಲ್ಲಾ ಕಿರಿ-ಕಿರಿ.
ಒಂದು ಸರ್ಕಾರಿ ಕಾರ್ಯಾಲಯದ ಒಳಗಡೆ ಹೋಗಿ ನೋಡಿ ಅಲ್ಲಿ ಅವರು ಕೆಲಸಕ್ಕೆ ಬರುವುದು ಬೆಳಿಗ್ಗೆ ಸರಿಯಾಗಿ 11 ಘಂಟೆÀಗೆ ಇನ್ನು 2 ತಾಸು ಕೆಲಸವನ್ನು ಮಾಡಿದರೆ ಊಟದ ಸಮಯ ನಂತರ ಊಟ ಮಾಡಿ ಕೆಲಸಕ್ಕೆ ಹಾಜರಾಗುವುದು 3 ಘಂಟೆಗೆ ನಂತರ ಮತ್ತೆ 4:30 ರ ಸುಮಾರಿಗೆ ಹೆಗಲಿಗೆ ಚೀಲವನ್ನು ಹಾಕಿಕೂಂಡು ಮನೆಯ ಕಡೆಗೆ ಹೊರಡಲು ರಡಿ ಇವರು ದಿನಕ್ಕೇ ಕನಿಷ್ಠ ಕೆಲ ಮಾಡುವಂತಹ ಅವಧಿ 4 ತಾಸು. ಇವರಿಗೆ ಕೇಳುವವರಾರು? ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ನಮ್ಮನ್ನು ಆಳುತ್ತಿರುವಂತಹ ಸರ್ಕಾರದ ನಾಯಕರಿಗೆ ಇಲ್ಲಾ ಇದರ ಚಿಂತೆ. ಇನ್ನು ಸರ್ಕಾರಿ ಅಧಿಕಾರಿಗಳು ಸೂತ್ರವಿಲ್ಲದ ಪಟದಂತೆ ಆಗಿ ಹೋಗಿದ್ದಾರೆ. ಇವತ್ತು ಸಾರ್ವಜನಿಕರು ಕಟ್ಟುವಂತಹ ತೆರಿಗೆಯ ಹಣದಿಂದ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ತಮಗೆ ನೀಡಿರುವಂತಹ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿರುವರಾ? ಎನ್ನುವಂತಹ ಸೂಕ್ಷ್ಮ ವಿಚಾರವನ್ನು ಸಹ ಮಾಡದ ಸರ್ಕಾರ ಇನ್ನು ದೇಶದ ಅಭಿವೃದ್ದಿಗೆ ಯಾವ ರೀತಿ ಕ್ರಮ ತೆಗೆದುಕೂಳ್ಳುವರು ಎಂಬುವುದನ್ನು ಒಂದು ಕ್ಷಣ ನಾವೆಲ್ಲರು ಯೋಚಿಸಬೇಕಾದಂತಹ ವಿಷಯವಾಗಿದೆ..
ಕೂಟ್ಯಂತರ ರೂಪಾಯಿ ಪೋಲಾಗುತ್ತಿದೆ ಸಾರ್ವಜನಿಕರ ಹಣ.
ಸರ್ಕಾರ ಪ್ರತಿ ತಿಂಗಳು ಸಾವಿರಾರು ಕೂಟಿ ರೂಪಾಯಿಯನ್ನು ಸರ್ಕಾರಿ ಅಧಿಕಾರಿಗಳ ಸಂಬಳಕ್ಕಾಗಿ ಬಳಕೆಯನ್ನು ಮಾಡುತ್ತಿದೆ. ಇಷ್ಟೆಲ್ಲಾ ಹಣವನ್ನು ನೀಡಲು ಮುಂದಾಗುವಂತಹ ಸರ್ಕಾರ ಇವತ್ತು ಸಂಬಳಕ್ಕೆ ಖರ್ಚಾಗಿರುವಂತಹ ಹಣಕ್ಕೆ ತಕ್ಕ ಹಾಗೆ ಸರ್ಕಾರಿ ಅಧಿಕಾರಿಗಳಿಂದ ಕೆಲಸವನ್ನು ತೆಗೆದುಕೂಂಡಿದ್ದೇವೆಯಾ ಎನ್ನುವುದನ್ನು ಯೋಚಿಸಲು ಕೂಡಾ ಹೋಗುವುದಿಲ್ಲಾ ಯಾಕೆಂದರೆ ಆ ಹಣ ಯಾರಪ್ಪನ ಮನೆಯ ಸ್ವತ್ತು ಅಲ್ಲಾ ಅದು ಸಾರ್ವಜನಿಕರದ್ದು ಹಾಗಾಗಿ ಅವರು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವ ಹಾಗೆ ಬಳಕೆ ಮಾಡುತ್ತಾ ಸರ್ಕಾರಿ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ.

ಬೆಳೆಯುತ್ತಿದೆ ಜಯಂತಿಗಳ ಪಟ್ಟಿ..
ಇವತ್ತು ಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಹೋಗಬೇಕಾದರೆ ಮೊದಲು ಕ್ಯಾಲೆಂಡರನ್ನು ನೋಡಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ ಇದಕ್ಕೇ ಕಾರಣ ಸರ್ಕಾರಿ ರಜೆಗಳು. ತಿಂಗಳಲ್ಲಿ ನಾಲ್ಕು ಭಾನುವಾರದ ರಜೆ, ಒಂದು ಎರಡನೆಯ ಶನಿವಾರ ಮತ್ತು ನಾಲ್ಕನೆಯ ಶನಿವಾರದ ರಜೆ, ಇನ್ನು ಅಂಬೇಡ್ಕರ ಜಯಂತಿ, ಬಸವೇಶ್ವರ ಜಯಂತಿ, ಟಿಪ್ಪುಸುಲ್ತಾನ್ ಜಯಂತಿ, ಮಹಾವೀರ ಜಯಂತಿ, ಗಾಂಧಿ ಜಯಂತಿ, ಲಾಲಬಹದ್ದೂರ ಶಾಸ್ತ್ರೀ ಜಯಂತಿ, ಛತ್ರಪತಿ ಶಿವಾಜಿ ಜಯಂತಿ, ಕನಕದಾಸರ ಜಯಂತಿ, ವಾಲ್ಮೀಕಿ ಜಯಂತಿ, ವಿಶ್ವಕರ್ಮ ಜಯಂತಿ ಈ ದೇಶದಲ್ಲಿ ಜಯಂತಿಗಳಿಗೇನು ಕಮ್ಮಿಯಿಲ್ಲಾ, ಇನ್ನೂ ರಾಷ್ಟ್ರೀಯ ಹಬ್ಬಗಳ ರಜೆಯ ಬಗೆ ಹೇಳಲು ಹೋರಟರೆ ಅದು ಮುಗಿಯದ ಕತೆಯಾಗಿಯೇ ಉಳಿಯುತ್ತದೆ. ಕಾರಣ ಎಲ್ಲ ಧರ್ಮದ ಜನರನ್ನು ಒಳಗೂಂಡ ಈ ಭಾರತ ಒಂದೂಂದು ಧರ್ಮದವರ ಮಾನ್ಯತೆಯ ಮೇರೆಗೆ ರಜೆಯನ್ನು ಘೋಷಣೆಯನ್ನು ಮಾಡಿ ಮೆಚ್ಚುಗೆಯನ್ನು ಗಳಿಸಿಕೂಂಡಿದೆ. ಹೀಗಾದರೆ ದೇಶ ಅಭಿವೃದ್ದಿಯಾಗಲು ಸಾಧ್ಯವೆ?..

ಜಯಂತಿಗಳ ಮೇಲೆ ಜಯಂತಿ ರಜೆ ಏಕೆ?.
ಸರ್ಕಾರ ಮಹಾತ್ಮರ ಹೆಸರಿನ ಮೇಲೆ ಜಯಂತಿಗಳನ್ನು ಮಾಡುತ್ತಾ ಅದಕ್ಕಾಗಿ ಒಂದು ದಿನ ಸರ್ಕಾರಿ ರಜೆಯನ್ನು ಘೋಷಣೆ ಮಾಡಿ ಸಾಧಿಸುತ್ತಿರುವುದಾದರು ಏನು? ಇಲ್ಲಿ ನಮ್ಮನ್ನು ಆಳುವಂತಹ ಸರ್ಕಾರಗಳು ಏನು ಮಾಡುತ್ತಿವೆ ಇವತ್ತು ಒಂದು ಕೋಮಿನ ನಾಯಕನ ಹೆಸರಿನಲ್ಲಿ ಜಯಂತಿಯ ದಿನ ಸರ್ಕಾರಿ ರಜೆಯನ್ನು ಘೋಷಿಸಿ ಆ ಸಮುದಾಯದವರ ಪ್ರೀತಿಗೆ ಪಾತ್ರರಾಗುತ್ತಾರೆ ಅಂದರೆ ಆ ಸಮುದಾಯದ ಓಟ ಬ್ಯಾಂಕನ್ನು ಭದ್ರ ಬುನಾದಿ ಮಾಡಿಕೂಳ್ಳುವುದು ಇವರ ಉದ್ದೇಶವಾಗಿದೆ ಹೊರತು ಆ ಮಹಾತ್ಮರಿಗೆ ನಿಜವಾಗಿಯು ಗೌರವವನ್ನು ಸಲ್ಲಿಸುವುದಲ್ಲಾ. ಆದರೆ ಇವರಿಗೆ ಆ ಮಹಾತ್ಮರ ಮೇಲೆ ನಿಜವಾಗಿಯು ಗೌರವವಿದ್ದರೆ ಅವರ ಜಯಂತಿಯ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಣೆ ಮಾಡುವ ಬದಲು ಎರಡು ತಾಸು ಹೆಚ್ಚಿಗೆ ಕೆಲಸವನ್ನು ಮಾಡಲು ಆದೇಶವನ್ನು ಮಾಡುವುದಿಲ್ಲವೇಕೆ? ಇದೆಲ್ಲಾ ಮಾಡಲು ನಮ್ಮನ್ನಾಳುವಂತಹ ನಾಯಕರಲ್ಲಿ ತಾಕತ್ತಿನ ಕೂರತೆ ಇದೆಯಾ ಅಥವಾ ಇಚ್ಚಾಶಕ್ತಿಯ ಕೂರತೆÀ ಇದೆಯಾ ಎನ್ನುವುದನ್ನು ಅವರು ಅರ್ಥ ಮಾಡಿಕೂಳ್ಳಬೇಕಾಗಿದೆ. ಇವತ್ತು ಸರ್ಕಾರಿ ರಜೆಯಿಂದ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಸರ್ಕಾರಿ ಹಣ ವ್ಯೆರ್ಥವಾಗಿ ಹೋಗುತ್ತಿದೆ.
ರೈತರ ಬಗ್ಗೆ ನಿರ್ಲಕ್ಷ್ಯ.
ರೈತರು ಆತ್ಮಹತ್ಯೆ ಮಾಡಿಕೂಂಡಾಗ ಆ ಕುಟುಂಬಕ್ಕೆ ಪರಿಹಾರವನ್ನು ನೀಡಲು ಮೀನಾಮೇಷ ಮಾಡುವಂತಹ ಸರ್ಕಾರ ಏನು ಕೆಲಸವನ್ನು ಮಾಡದೆ ಐಷರಾಮಿಯಾಗಿ ಎಸಿ ರೂಮಿನೂಳಗೆ ಹಾಯಾಗಿ ಕುಳಿತು ಹೋಗುವಂತಹ ಸರ್ಕಾರಿ ನೌಕರರಿಗೆ ಕೂಟ್ಯಂತರ ರೂಪಾಯಿ ಸಂಬಳವನ್ನಾಗಿ ನೀಡುತ್ತಿದೆ. ಯಾಕೆ ರೈತರು ಈ ದೇಶದ ಜನರನ್ನು ಸಾಕುತ್ತಿಲ್ಲವೆ? ಹಗಲಿರುಳು ರಾತ್ರಿ ಮಳೆ ಚಳಿಯನ್ನು ಲೆಕ್ಕಿಸದೇ ಕಷ್ಟ-ಪಟ್ಟು ದುಡಿಯುವವರನ್ನು ಕಡೆಗಣಿಸುವ ಸರ್ಕಾರ ಸರ್ಕಾರಿ ಅಧಿಕಾರಿಗಳಿಗೆ ಶ್ರೀರಕ್ಷೆಯಾಗಿ ನಿಂತಿದೆ. ಹಾಗಾದರೆ ರೈತರ್ಯಾರು ಈ ಸರ್ಕಾರದ ಆಯ್ಕೆಯಲ್ಲಿ ಪಾತ್ರವನ್ನು ವಹಿಸಿಲ್ಲವೆ? ಅವರ್ಯಾರು ಚುನಾವಣೆಯಲ್ಲಿ ಮತವನ್ನು ಹಾಕಿಲ್ಲವೇ ಈ ಸರ್ಕಾರ ರೈತಕುಲ ಮತ್ತು ಸಾಮಾನ್ಯ ಜನರಿಗೆ ಮಾಡುತ್ತಿರುವಂತಹ ನಂಬಿಕೆ ದ್ರೋಹವಾಗಿದೆ.

ರದ್ದು ಮಾಡಿ ಮಹಾತ್ಮರ ಜಯಂತಿಯಂದು ಸರ್ಕಾರಿ ರಜೆ.
ಇವತ್ತು ಈ ದೇಶಕ್ಕಾಗಿ ಅನೇಕ ಮಹಾತ್ಮರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರು ತಮ್ಮ ಜೀವತಾವಧಿಯವರೆಗೂ ಈ ಸಮಾಜಕ್ಕಾಗಿ ದುಡಿದಿದ್ದಾರೆ ಆದರೆ ಇವತ್ತು ಇಂತಹ ಮಹಾತ್ಮರ ಜಯಂತಿಯ ದಿನ ಸರ್ಕಾರಿ ರಜೆಯನ್ನು ಘೋಷಣೆ ಮಾಡಿ ಅವರ ಬಾವಚಿತ್ರಕ್ಕೆ ಒಂದು ಹಾರವನ್ನು ಹಾಕಿ ಮನೆಗೆ ಹೋಗಿ ಎಂದು ಹೇಳುವಂತಹ ಸ್ಥಿತಿಯನ್ನು ಇವತ್ತು ಸರ್ಕಾರ ತಂದಿದೆ. ನಿಜವಾಗಿಯೂ ಇಂತಹ ಮಹಾತ್ಮರಿಗೆ ಗೌರವ ಸಲ್ಲಬೇಕಾದರೆ ಅವರ ಜಯಂತಿಯ ದಿನ 2 ರಿಂದ 3 ತಾಸು ಹೆಚ್ಚಿಗೆ ಕೆಲಸವನ್ನು ಮಾಡಲು ಆದೇಶವನ್ನು ಮಾಡಬೇಕು ಅಂದಾಗ ಜಯಂತಿಯನ್ನು ಮಾಡಿದ್ದು ಸಾರ್ಥಕವಾಗುತ್ತದೆ. ಇಲ್ಲವಾದರೆ ಸರ್ಕಾರ ಸ್ವತಃ ಸರ್ಕಾರಿ ಅಧಿಕಾರಿಗಳಿಗೆ ರಜೆಯನ್ನು ನೀಡಿ ಸೋಮಾರಿಗಳನ್ನಾಗಿ ಮಾಡುತ್ತಿದೆ. ಹಾಗೂ ಸರ್ಕಾರದ ಬೊಕ್ಕಸವನ್ನು ನಷ್ಟ ಮಾಡುತ್ತಿದೆ. ಇನ್ನಾದರು ನಮ್ಮನ್ನಾಳುವಂತಹ ಸರ್ಕಾರ ಎಚ್ಛೆತ್ತುಕೂಳ್ಳಲಿ ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.

loading...