ಜಾಕೇಟ್ ಕೊಡಿಸುವಲ್ಲಿ ವಿಳಂಭ: ಬಾಲಕ ಆತ್ಮಹತ್ಯೆ

0
4

ಬೆಳಗಾವಿ

ಜಾಕೇಟ್ ಕೊಡಿಸುವಲ್ಲಿ ವಿಳಂಭ ಮಾಡಿದ್ದಕ್ಕೆ ಬಾಲಕ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಾಲೂಕಿನ ಬಸೂರ್ತೆ ಗ್ರಾಮದಲ್ಲಿ ನಡೆದಿದೆ.
ಬಸೂರ್ತೆ ಗ್ರಾಮದ ಶುಭಂ ಗಜಾನನ ಹನ್ನೂರಕರ(15) ಎಂಬ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. ಶುಭಂ ತನ್ನ ತಂದೆಗೆ ಹೊಸ ಜಾಕೇಟ್ ಕೊಡುವಂತೆ ತಿಳಿಸಿದ್ದಾನೆ. ಇದಕ್ಕೆ ತಂದೆ ಗಜಾನನ ನಾನು ಬೆಳಗಾವಿಯಲ್ಲಿ ಖರೀದಿ ಮಾಡಿಕೊಂಡು ಬರುತ್ತೇನೆ. ಆನ್‌ಲೈನಲ್ಲಿ ಖರೀದಿಸಬೆಡ ಎಂದು ತಿಳಿಸಿದ್ದಾರೆ. ಎಂದಿನಂತೆ ಬೆಳಿಗ್ಗೆ ತಂದೆ ಗಜಾನನ ಉದ್ಯಮಬಾಗದ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದಾನೆ. ಈ ಮನೆಯಲ್ಲಿ ನನಗೆ ಈಗಲೇ ಬೇಕು ಎಂದು ಹಠ ಹಿಡಿದಿದ್ದ ಬಾಲಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...