ಜಾಗತಿಕ ಲಿಂಗಾಯತ ಮಹಾಸಭೆ ರಚನೆಗೆ ಡಿ.೯ರಂದು ಪೂರ್ವಭಾವಿ

0
2

ಬಸವನಬಾಗೇವಾಡಿ: ಲಿಂಗಾಯತ ಧರ್ಮವನ್ನು ಸಾಂವಿಧಾನಿಕ ಮಾನ್ಯತೆಗಾಗಿ ಬರುವ ದಿನಗಳಲ್ಲಿ ಬಸವ ನೆಲದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಘಟಕ ರಚನೆಯ ಮೂಲಕ ಹೋರಾಟ ಮಾಡಲಾಗುವುದು ಎಂದು ಹಿರಿಯ ಸಾಹಿತಿ ಲ.ರು ಗೊಳಸಂಗಿ ಹೇಳಿದರು.
ಅವರು ಪಟ್ಟಣದ ಶ್ರಿÃ ವಿರಕ್ತಮಠದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಹೀಗಾಗಲೇ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ರಾಜ್ಯದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಬಸವ ನೆಲದಲ್ಲಿ ಕೂಡ ಡಿ.೯ ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ನೂತನ ಘಟಕ ರಚಿಸಿಕೊಂಡು, ಸಾಂವಿಧಾನಿಕ ಮಾನ್ಯತೆ ನೀಡುವವರೆಗೂ ಹೋರಾಟ ಪ್ರಾರಂಭ ಮಾಡುತ್ತೆÃವೆ. ಲಿಂಗಾಯತ ಧರ್ಮವು ಬಸವಣ್ಣನವರ ಸ್ವತಂತ್ರ ಧರ್ಮವಾಗಿದ್ದು. ಜಾತ್ಯಾತೀತ, ಪಕ್ಷ ,ಬೇಧ ಮುಕ್ತ ಧರ್ಮವಾಗಿದ್ದು. ಮನುಕುಲದ ಒಳಿತಿಗಾಗಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಮಾನ್ಯತೆ ನೀಡಬೇಕಾಗಿದೆ. ಜಗತ್ತಿನಲ್ಲಿ ಯಾರೂ ಮಾಡದ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ. ತಮ್ಮ ಸ್ವಧರ್ಮವನ್ನೆÃ ತ್ಯಾಗ ಮಾಡಿ ಲಿಂಗಾಯತ ಧರ್ಮವನ್ನು ಪೋಷಿಸಿದ್ದಾರೆ. ಹೀಗಾಗಲೇ ಮಹಾಸಭಾದ ಘಟಕಗಳು ರಾಜ್ಯಾಧ್ಯಂತ ಕರ‍್ಯ ನಿರ್ವಹಿಸುತ್ತಿವೆ. ಬಸವ ನೆಲದಲ್ಲಿ ಸುಸ್ಥಿರ ಹಾಗೂ ಸಬಲ ಘಟಕವಾಗಬೇಕಾಗಿದೆ. ಹೀಗಾಗಿ ೯ರಂದು ಪಟ್ಟಣದ ಶ್ರಿÃ ವಿರಕ್ತಮಠದಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಭೆಗೆ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭಿಪ್ರಾಯವನ್ನು ಮಂಡಿಸಬೇಕೆಂದರು.

ವಿಶ್ರಾಂತ ಪ್ರಾಚರ‍್ಯ ಎಂ ಎಸ್ ಕೋಟ್ಲಿ ಮಾತನಾಡಿ. ೯ ರಂದು ನಡೆಯುವ ಸಭೆಯಲ್ಲಿ ಘಟಕ ರಚನೆ ಕುರಿತಾಗಿ ಸಾಧಕ ಬಾಧಕ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದರ ಮೂಲಕ ಜಾಗತಿಕ ಲಿಂಗಾಯತ ಮಹಾಸಭಾ ನೂತನ ಘಟಕವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದರು. ಸಿದ್ಧಲಿಂಗ ಸ್ವಾಮೀಜಿ ಹಾಗೂ ವಿಶ್ರಾಂತ ಪ್ರಾಚರ‍್ಯ ಎಸ್.ಎಸ್ ಝಳಕಿ, ಸಾಹಿತಿ ಮಹಾಂತೇಶ ಸಂಗಮ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ವಿರೇಶ ಬಿ.ಕುಂಟೋಜಿ, ವಿಶ್ರಾಂತ ಉಪನ್ಯಾಸಕ ಎಚ್.ಎಸ್ ಬಿರಾದಾರ, ವಿಶ್ರಾಂತ ಪ್ರಾಚರ‍್ಯ ಎಫ್.ಡಿ ಮೇಟಿ, ಎಸ್.ಎಂ ಹತ್ತಿ, ಪರಮಾನಂದ ಓಲೇಕಾರ, ಸಾಯಬಣ್ಣ ಕುಂಬಾರ ಸೇರಿದಂತೆ ಅನೇಕರು ಇದ್ದರು.

loading...