ಜಾತಿರಹಿತ ಸಮಾಜ ನಿರ್ಮಾಣದಲ್ಲಿ ಶಿವಶರಣೆಯರು ಅಮೂಲ್ಯ ಕೊಡುಗೆ ನೀಡಿದಾರೆ: ಡಾ. ಹಿರೇಮಠ

0
77


ಧಾರವಾಡ,: ವರ್ಗರಹಿತ, ಜಾತಿ ರಹಿತ ಸಮಾಜ ನಿರ್ಮಾಣದಲ್ಲಿ ಶಿವಶರಣೆಯರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಡಾ.ಉಜ್ವಲಾ ಹಿರೇಮಠ ಹೇಳಿದರು.
ಪ್ರೋಬಸ್ ಕ್ಲಬ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ, ಪಿತಾಮಹ ಡಾ.ಫು.ಗು. ಹಳಕಟ್ಟಿಯವರು ತಮ್ಮ ಗ್ರಂಥದಲ್ಲಿ 33 ಶಿವಶರಣೆಯರ ಉಲ್ಲೇಖ ಮಾಡಿದ್ದು, ಈ ಶಿವಶರಣೆಯರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವನ ಮಂಟಪದಲ್ಲಿ ತಮ್ಮ ವಚನಗಳ ಮೂಲಕ ಆತ್ಮಸಾಕ್ಷಾತ್ಕಾರದ ಆಳವನ್ನು ತಲುಪಿದ್ದು ಮಹತ್ವದ ಹಾಗೂ ವಿಶೇಷ ಸಂಗತಿ. ಶಿವಶರಣ ಅಜಗಣ್ಣನಿಂದ ಸ್ಪೂರ್ತಿಗೊಂಡು ಶಿವಶರಣೆ ಮುಕ್ತಾಯಕ್ಕಳು 37 ವಚನಗಳನ್ನು ರಚಿಸಿದ್ದು, ವಚನಗಳಲ್ಲಿ ಸತ್ಯಕ್ಕ, ಅಕ್ಕಮಹಾದೇವಿ ಇತರೆ ಶಿವಶರಣೆಯರ ತತ್ವಗಳು ಸಮಾಜಕ್ಕೆ ಅವಶ್ಯವಾಗಿವೆ ಎಂದರು.
ಪ್ರೋಬಸ್ ಕ್ಲಬ್ ಅಧ್ಯಕ್ಷ ಎಂ.ಎಲ್. ಬಿಜಾಪೂರ ಅಧ್ಯಕ್ಷತೆವಹಿಸಿ ಮಾತನಾಡಿದರು. ಕ್ಲಬ್ ಉಪಾಧ್ಯಕ್ಷ ಪಿ.ಎಸ್. ಕಾವಿ, ಶ್ರೀಮತಿ ಗಿರಿಜಾ ಚಿಕ್ಕಮಠ ಉಪಸ್ಥಿತರಿದ್ದರು. ಅಕ್ಕಮ್ಮ ಕಟಗಿ ಸ್ವಾಗತಿಸಿದರು. ಜೆ.ಐ. ಬಿದರಿ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here