ಜಾನಪದ ಕಲೆ ಸಕ್ಕರೆ ತುಪ್ಪದಂತೆ ಸವಿಯಾಗಿದೆ: ಶಾಸಕ ವರ್ತೂರು

0
49

ಕನ್ನಡಮ್ಮ ಸುದ್ದಿ-ತಾಳಿಕೋಟೆ: ಹಳ್ಳಿಯ ಶ್ರೀಮಂತ ಸಂಸ್ಕೃತಿಯೇ ಜಾನಪದ. ಜಾನಪದ ಕಲೆ ಸಕ್ಕರೆ ತುಪ್ಪದಂತೆ ಸವಿಯಾಗಿದೆ ಅಂತಹ ಜಾನಪದವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಜಾನಪದ ಪರಿಷತ್‌ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೋಲಾರ ಶಾಸಕ ಆರ್‌ ವರ್ತೂರು ಪ್ರಕಾಶ ಹೇಳಿದರು.
ಅವರು ಸಮೀಪದÀ ಮೂಕಿಹಾಳ ಲಾಡ್ಲೆಮಶಾಕ ದರ್ಗಾ ಜಾತ್ರೆಯ ಸಹಯೋಗದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್‌ ನೂರನೆ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ ಜಿಲ್ಲಾ ಮಟ್ಟದ ಜಾನಪದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ಜಾನಪದ ಕಾರ್ಯಕ್ರಮಗಳಲ್ಲಿ ನಾನು ಕೈಕೂಡಿಸುತ್ತೇನೆ ಎಂದು ಹೇಳಿದರು.
ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ ಎಸ್‌ ಬಾಲಾಜಿ ಮಾತನಾಡಿ, ಜಾನಪದ ಕ್ಷೇತ್ರ ವಿಶಾಲವಾಗಿರುವದರಿಂದ ವಿಭಾಗವಾರು ಜಾನಪದ ಆಕಾಡೆಮಿಗಳನ್ನು ಸ್ಥಾಪಿಸಿ ಕಲೆ ಮತ್ತ ಕಲಾವಿದರ ಬೆಳವಣಿಗೆಗೆ ಸರ್ಕಾರ ಮುಂದಾಗಲಿ ಎಂದರು.
ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಪರಿಷತ್‌ ನಡೆಸುವ ನೂರನೆ ಕಾರ್ಯಕ್ರಮವಾಗಿದ್ದು ಜಿಲ್ಲೆಯಲ್ಲಿ ಸಾವಿರಾರು ಕಲಾವಿದರಿಗೆ ವೇದಿಕೆ ನೂರಾರು ಕಲಾವಿದರಿಗೆ ಸನ್ಮಾನ ಮತ್ತು ಕಲಾವಿದರಿಗೆ ಸ್ಪರ್ಧೆ ಮತ್ತು ಮಾಶಾಸನಕ್ಕೆ ಅನುಕೂಲು ಮಾಡಿಕೊಟ್ಟದೆ ಕಲಾವಿದರ ಸಮೀಕ್ಷೆ ನಡೆಸಿ ಕೈಪಿಡಿ ತರಲಾಗುವದು ಎಂದರು.
ನ್ಯಾಯವಾದಿ ಎಮ್‌ ಎಚ್‌ ಹಾಲಣ್ಣವರ, ಜಿಒಸಿಸಿ ಬ್ಯಾಂಕ್‌ ನಿರ್ದೇಶಕ ಶಿವಾನಂದ ಮಂಗಾನವರ ಪುಂಡಲಿಕ ಮುರಾಳ ಮಾತನಾಡಿದರು. ಸಾನಿಧ್ಯವಹಿಸಿದ ಪಡೆಕನೂರ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸರೂರ ಶಾಕಾಮಠದ ಶ್ರೀಗುರು ಸ್ವಾಮೀಜಿ ಆಶೀರ್ವಚನ ನೀಡಿದರು.
ಇದೇ ವೇಳೆ ಕಲಾವಿದರಾದ ಭಾಗಣ್ಣ ಮದರಿ, ಮೌಲಾಸಾಬ ಜಹಾಗಿರದಾರ, ವೀರಭದ್ರಪ್ಪ ಧಳವಾಯಿ, ವೀರಣ್ಣ ಬೆಕಿನಾಳ, ಶಿವಪ್ಪ ಭಜಂತ್ರಿ ಸನ್ಮಾನಿಸಲಾಯಿತು ವೇದಿಕೆಯಲ್ಲಿ ತಾಳಿಕೋಟಿ ಅರ್ಬನ್‌ ಬ್ಯಾಂಕ್‌ ನಿರ್ದೇಶಕ ಹಣಮಂತ್ರಾಯಗೌಡ ಬಾಗೇವಾಡಿ, ದರ್ಗಾ ಕಮೀಟಿ ಅಧ್ಯಕ್ಷ ಕೆ ಎಚಹ ಪಾಟೀಲ್‌, ಎ.ಆರ್‌ ಮುಲ್ಲಾ, ಬಿ.ಎಚ್‌À ಮಾಗಿ, ಕೃಷ್ಣಾ ಬಿಳೇಭಾವಿ, ರಾಜಾ ಪಟೇಲ್‌, ಸಾಹೇಬ ಪಟೇಲ್‌, ಮಲ್ಲಯ್ಯ ಹೀರೆಮಠ, ಎ.ಕೆ ಬಿರಾದಾರ, ಬಿ.ಎಮ್‌ ಗುಡ್ನಾಳ, ಎಮ್‌,ಆರ್‌ ಜಮಾದಾರ, ಎಮ್‌, ಕೆ ಬಿರಾದಾರ ಉಪಸ್ಥಿತರಿದ್ದರು. ಎಮ್‌.ಎನ್‌ ಮಾಗಿ ಸ್ವಾಗತಿಸಿದರು, ವಿಶ್ವನಾಥ ಗಣಾಚಾರಿ ನಿರೂಪಿಸಿದರು. ಎಮ್‌.ಜಿ ವಾಲಿ ವಂದಿಸಿದರು.

loading...