ಜಾನಪದ ಯಾವಾಗಲೂ ಜೀವಂತವಾಗಿರಬೇಕು: ಪೊಲೀಸ್ ಪಾಟೀಲ

0
14

ಜಾನಪದ ಯಾವಾಗಲೂ ಜೀವಂತವಾಗಿರಬೇಕು: ಪೊಲೀಸ್ ಪಾಟೀಲ
ಬೆಳಗಾವಿ :
ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ೨೩ ರಂದು ಹಮ್ಮಿಕೊಂಡ ದತ್ತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲರು ಸಾಹಿತಿಗಳು ಹಾಗೂ ನಾಟಕಕಾರರು ಆದ ಬಿ. ಆರ್. ಪೊಲೀಸ್ ಪಾಟೀಲ ಅವರು ‘ಜಾನಪದ ಯಾವಾಗಲೂ ಜೀವಂತವಾಗಿರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅರಿವಿನ ಕಣ್ಣು ತೆರೆದು ನಾವು ಮುನ್ನಡೆಯಬೇಕು ಎಂದರು. ಜನಪದ ತತ್ವಗಳನ್ನು ಸಾರುತ್ತದೆ. ಅದು ಆದರ್ಶವಾದುದು ಎಂದರು. ಮುಖದ ಮೇಲೆ ನಗು ಹಾಗೂ ಒಳಗೆ ಮಗುವಿನ ಮುಗ್ಧತೆ ಯಾವಾಗಲೂ ಮನುಷ್ಯರಲ್ಲಿ ಇದ್ದರೆ ಒಳಿತು ಎಂದು ಹೇಳಿದರು. ಜನಪದ ಹಾಡುಗಳನ್ನು ಹಾಡಿ ಜನರ ಮನ ಸೂರೆಗೊಂಡರು. ದತ್ತಿ ದಾನಿಗಳಾದ ಸುಮಾ ಕಿತ್ತೂರ ಹಾಗೂ ಸುನಂದಾ ಎಮ್ಮಿಯವರು ದತ್ತಿ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು. ದತ್ತಿ ದನಿಗಳಾದ ರತ್ನಪ್ರಭಾ ಬೆಲ್ಲದ, ಆಶಾ ಪಾಟೀಲ ಹಾಘೂ ಆರತಿ ಅಂಗಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಲೇಖಕಿಯರ ಸಂಘದ ಸದಸ್ಯರಾದ ಜಯಶೀಲಾ ಬ್ಯಾಕೋಡ, ದೀಪಿಕಾ ಚಾಟೆ, ವಿದ್ಯಾ ಹುಂಡೇಕರ, ಮಾಧವಿ ಸಂಬರಗಿ, ಜಯಾ ಚುನಮರಿ, ಅಕ್ಕಮಹಾದೇವಿ ಹುಲಗಬಾಳಿ, ಸರ್ವಮಂಗಳಾ ಅರಳಿಮಟ್ಟಿ, ಸುನಂದಾ ಹಾಲಭಾವಿ, ಮಹಾನಂದಾ ಪರುಶೆಟ್ಟಿ, ಪ್ರಭಾ ಪಾಟೀಲ, ಶಾಲಿನಿ ಚಿನಿವಾರ, ಸುನಿತಾ ನಂದೆಣ್ಣವರ, ಮೇಘಾ ಪಾಟೀಲ, ಹೀರಾ ಚೌಗಲೆ, ಅನ್ನಪೂರ್ಣ ಹಿರೇಮಠ ಹಾಗೂ ಅನಿತಾ ಮಾಲಗತ್ತಿ, ಅಕ್ಕಮಹಾದೇವಿ ತಗ್ಗಿ, ಸ್ವರಚಿತ ಸುಂದರ ಒಡಪುಗಳನ್ನು ಹೇಳಿ ಎಲ್ಲರ ಗೆದ್ದರು. ಸಲಿಂ ಹಣಗುಡಿ ತಬಲಾ ಸಾಥ ನೀಡಿದರು. ತಾವೇ ಸುಂದರವಾಗಿ ರಚಿಸಿದ ಒಡುಗಳನ್ನು ಹೇಳಿ ಎಲ್ಲರನ್ನೂ ರಂಜಿಸಿದರು. ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಡಾ. ಹೇಮಾವತಿ ಸೋನೊಳ್ಳಿಯವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷೀಯ ನುಡಿಗಳಲ್ಲಿ ಡಾ. ಹೇಮಾವತಿ ಸೊನೊಳ್ಳಿಯವರು ಜನಪದದ ಮಹತ್ವ ಚಿರನೂತನ ಎಂದರು. ಶೈಲಜಾ ಭಿಂಗೆ, ಎಲ್.ಎಸ್. ಶಾಸ್ತಿç, ಪ್ರೇಮಾ ತಹಸೀಲ್ದಾರ, ಅಶೋಕ ಮಳಗಲಿ, ಪ್ರಕಾಶ ದೇಶಪಾಂಡೆ, ಉಮಾ ಅಂಗಡಿ, ಪಾಂಡುರAಗ ಯಲಿಗಾರ, ಡಿ. ಎಂ. ಪಾಟೀಲ, ನಿರ್ಮಲಾ ಬಟ್ಟಲ, ವೈಶಾಲಿ ಭರಬರಿ, ಭುವನೇಶ್ವರಿ ಪೂಜಾರಿ, ಲಲಿತ ಪರ್ವತರಾವ್, ಲೇಖಕಿಯರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸುಪ್ರಿಯಾ ದೇಶಪಾಂಡೆ ಪ್ರಾರ್ಥಿಸಿದರು. ಜ್ಯೋತಿ ಬಾದಾಮಿ ಪರಚಯಿಸಿ, ಸ್ವಾಗತಿಸಿದರು. ಇಂದಿರಾ ಮೊಟೆಬೆನ್ನೂರ ವಂದಿಸಿದರು. ರಾಜನಂದಾ ಘಾರ್ಗಿ ನಿರೂಪಸಿದರು.

 

loading...