ಜಾನಿ ಬೇರ್ ಸ್ಟೋ ಶತಕ, ಇಂಗ್ಲೆಂಡ್ 2-0 ಮುನ್ನಡೆ

0
5

ಬ್ರಿಸ್ಟಲ್ಆ:-ರಂಭಿಕ ಜಾನಿ ಬೇರ್ ಸ್ಟೋ ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ಆರು ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಐದು ಏಕದಿನ ಪಂದ್ಯದ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್ ಗಳಲ್ಲಿ 9 ವಿಕೆಟ್ ಗೆ 358 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ 44.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 359 ರನ್ ಕಲೆ ಹಾಕಿ ಗೆಲುವಿನ ನಗೆ ಬೀರಿತು.
ಗುರಿಯುನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಜಾಸೋನ್ ರಾಯ್ (79) ಹಾಗೂ ಜಾನಿ ಬೇರ್ ಸ್ಟೋ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 17.3 ಓವರ್ ಗಳಲ್ಲಿ 159 ರನ್ ಕಲೆ ಹಾಕಿ ಅಬ್ಬರಿಸಿತು.
ಭರ್ಜರಿ ಫಾರ್ಮ್ ನಲ್ಲಿರುವ ಜಾನಿ ಬೇರ್ ಸ್ಟೋ ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಇವರು 93 ಎಸೆತಗಳಲ್ಲಿ 15 ಬೌಂಡರಿ ಹಾಗೂ 5 ಸಿಕ್ಸರ್ ಸಹಾಯದಿಂದ 128 ರನ್ ಬಾರಿಸಿ ಜುನೇದ್ ಖಾನ್ ಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕಿತ ಜೋ ರೂಟ್ 43 ರನ್ ಗಳಿಗೆ ಆಟ ಮುಗಿಸಿದರು. ಬೆನ್ ಸ್ಟೋಕ್ಸ್ 37 ರನ್ ಬಾರಿಸಿ ಔಟಾದರು.
ಆಲ್ ರೌಂಡರ್ ಮೋಯಿನ್ ಅಲಿ 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಫಖಾರ್ ಜಮನ್ (2), ಬಾಬರ್ ಅಜಮ್ (15), ರನ್ ಕಲೆ ಹಾಕವುಲ್ಲಿ ವಿಫಲರಾದರು. ಮೂರನೇ ವಿಕೆಟ್ ಗೆ ಆರಂಭಿಕ ಇಮಾಮ್ ಉಲ್ ಹಕ್ ಹಾಗೂ ಹಾರಿಸ್ ಸೋಹಿಲ್ ತಂಡಕ್ಕೆ ಕೊಂಚ ನೆರವಾದರು. ಈ ಜೋಡಿ ತಂಡಕ್ಕೆ 68 ರನ್ ಜೊತೆಯಾಟದ ಕಾಣಿಕೆ ನೀಡಿದರು. ನಾಯಕ ಸರ್ಫಾರಜ್ ಅಹ್ಮದ್ 27 ರನ್ ಗಳಿಗೆ ಔಟಾದರು.
5ನೇ ವಿಕೆಟ್ ಗೆ ಇಮಾಮ್ ಅವರ ಜೊತೆಗೂಡಿದ ಆಸೀಫ್ ಅಲಿ ತಂಡಕ್ಕೆ 125 ರನ್ ಸೇರಿಸಿದರು. ಆಸೀಫ್ ಅಲಿ 52 ರನ್ ಬಾರಿಸಿ ಔಟಾದರು.
ಇಮಾಮ್ ಮನಮೋಹಕ ಬ್ಯಾಟಿಂಗ್ ಮುಂದುವರೆಸಿದರು. 131 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಾಯದಿಂದ 151 ರನ್ ಬಾರಿಸಿದ ಇವರು ಟಾಮ್ ಕರನ್ ಗೆ ಬಲಿಯಾದರು. ಕ್ರಿಸ್ ವೋಕ್ಸ್ 67 ರನ್ ಗಳಿಗೆ 4 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 50 ಓವರ್ ಗಳಲ್ಲಿ 9 ವಿಕೆಟ್ ಗೆ 358
(ಇಮಾಮ್ ಉಲ್ ಹಕ್ 151, ಆಸೀಫ್ ಅಲಿ, 52, ಹಾರೀಸ್ ಸೋಹಿಲ್ 41, ಕ್ರಿಸ್ ವೋಕ್ಸ್ 67ಕ್ಕೆ 4)
ಇಂಗ್ಲೆಂಡ್ 44.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 359
(ಜಾಸೋನ್ ರಾಯ್ 76, ಜಾನಿ ಬೇರ್ ಸ್ಟೋ 128, ಜೋ ರೂಟ್ 43, ಜುನೇದ್ ಖಾನ್ 57ಕ್ಕೆ 1).

loading...