ಜಾನುವಾರಗಳಿಗೆ ಆಹಾರ ವಿತರಿಸಿದ ಪತ್ರಿಕಾ ಬಳಗ

0
35

ಜಾನುವಾರಗಳಿಗೆ ಆಹಾರ ವಿತರಿಸಿದ ಪತ್ರಿಕಾ ಬಳಗ
ಕನ್ನಡಮ್ಮ ಸುದ್ದಿ -ಸಂಕೇಶ್ವರ : ನೆರೆ ಹಾವಳಿಯಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರ ಜಾನುವಾರಗಳಿಗೆ ಆಹಾರ ವಿತರಿಸಿ ಸಂಕೇಶ್ವರ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ಮಾನವೀಯತೆ ಮೆರೆದಿದ್ದಾರೆ .

ಪಟ್ಟಣದ ಹಿರಣ್ಯಕೇಶಿ ದಡದ ಪ್ರವಾಹಕ್ಕೆ ಸ್ಥಳಾಂತರಗೊಂಡಿರುವ ನಿರಾಶ್ರಿತರ ದನ ಕರುಗಳು ಆಹಾರದ ಕೊರತೆ ಎದುರಿಸಿದ್ದವು. ಇದನ್ನು ಮನಗಂಡ ಸಂಕೇಶ್ವರ ಪ್ರೇಸ್ ಕ್ಲಬ್ ನ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ಪಟ್ಟಣದ ದನಗಳ ಮಾರುಕಟ್ಟೆಯಲ್ಲಿರುವ ಜಾನುವಾರಗಳಿಗೆ ಆಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ . ಈ ಸಂದರ್ಭದಲ್ಲಿ ಪತ್ರಕರ್ತರಾದ ಮಹಮ್ಮದ್ ಮೋಮಿನ ,ಆನಂದ ಶಿಂದೆ ,ಸುರೇಶ ಮಂಜರಗಿ ಸಚಿನ ಕಾಂಬಳೆ ,ಪಾಂಡು ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು .

loading...