ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಪೌರಕಾರ್ಮಿಕ ಆಗ್ರಹ

0
8

ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಪೌರಕಾರ್ಮಿಕ ಆಗ್ರಹ
ಕನ್ನಡಮ್ಮ ಸುದ್ದಿ-ಬೆಳಗಾವಿ: ಪೌರಕಾರ್ಮಿಕರನ್ನು ಅಮಾನಿಸಿ, ನಿಂದಿಸಿ ಮನಬಂದಂತೆ ಬೇಜವ್ದಾರಿಯಿಂದ ವರ್ತಿಸದ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೌರಕಾರ್ಮಿಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾ ಪ್ರಾದೇಶಿಕ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಪೌರಕಾರ್ಮಿಕರ ವಾಸವಿರುವ ವಸತಿ ಗೃಹಗಳ ಖಾಯಂ ಮಾಲ್ಕಿ ಹಕ್ಕು ನೀಡಬೇಕೆಂದು ಡಿಸಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳನ್ನು ಬೇಟಿಯಾಗಲು ಒಳ ಹೋದ ಪೌರಕಾರ್ಮಿಕರನ್ನು ಅಮಾನಿಸಿ ನೋವಿಸಿದ್ದಾರೆ. ಮನೆಗಳನ್ನು ತೆರವುಗೊಳಿಸಲಾಗುವುದು, ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ಏಕವಚನದಲ್ಲಿ ಮಾತನಾಡಿ, ಮಹಿಳೆಯರೆನ್ನದೇ ಹೋರ ಕಳಿಸಿದ್ದಾರೆ ಎಂದರು.
ಜಿಲ್ಲೆಯ ಸಾರ್ವಜನಿಕರ ನೋವಿಗೆ ಸ್ಪಂದಿಸಬೇಕಾದ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರ ಬಗ್ಗೆ ಹಿಯಾಳಿಸಿ ಮಾತನಾಡುವುದು ಸರಿಯಲ್ಲ, ಶೀಘ್ರದಲ್ಲೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.
ಸಮಸ್ಯೆಗಳ ಬಗ್ಗೆ ಮನವಿ ನೀಡಲು ಬಂದ ಪೌರಕಾರ್ಮಿಕರನ್ನು ಕಡುಬಿಸಿಲಿನಲ್ಲಿ ೪ ಗಂಟೆ ಕಾಯಿಸಿದ್ದಾರೆ. ಸುಮಾರು ೨೫ ವರ್ಷಗಳಿಂದ ಬೆಳಗಾವಿಯಲ್ಲಿ ಹೋರಾಟ ಮಾಡುತ್ತಾ ಬಂದರೂ ಇಂತಹ ಬೇಜವ್ದಾರಿತ್ತನದ ಜಿಲ್ಲಾಧಿಕಾರಿಯನ್ನು ಕಂಡಿಲ್ಲ ಎಂದು ಆಕ್ರೊÃಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಿಗೆ ವಾಸವಾಗಿರುವಂಥ ವಸತಿ ಗೃಹಗಳನ್ನು ಏಳು ದಿನಗಳಲ್ಲಿ ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಪೌರ ಕಾರ್ಮಿಕರು ವಾಸವಿರುವ ೪೦ ವಸತಿ ಗೃಹಗಳು ಶಿಥಿಲಗೊಂಡಿದ್ದು, ಅಪಾಯದ ಅಂಚಿನಲ್ಲಿವೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಕಳೆದ ೯ ವರ್ಷಗಳಿಂದ ಸಂಬಂಧಪಟ್ಟವರಿಗೆ ತಿಳಿಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬೇರೆ ವಸತಿ ಗೃಹಗಳಲ್ಲಿ ವಾಸಿಸುವ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡದೆ ವಿನಾಕಾರಣ ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಆ ಶಿಥಿಲಗೊಂಡಿರುವ ವಸತಿಗೃಹಗಳನ್ನು ದುರಸ್ಥಿಪಡಿಸಿಲ್ಲ. ಆದರೆ ನಮ್ಮ ಸಂಬಳದಲ್ಲಿ ಅದರ ಬಾಡಿಗೆಯನ್ನು ಕಡಿತಗೊಳಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯ ಪಾಲಿಕೆಯಲ್ಲಿ ಹಕ್ಕು ಪತ್ರ ನೀಡಿದಂತೆ ನಮಗೂ ನೀಡಬೇಕಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಯಲ್ಲಪ್ಪ ಭಚಲಪುರಿ, ಯಶವಂತ ಅನಂತಪೂರ, ನರಶಿಂವ ದಾಸನ್ನಾರೂ, ವಿಜಯ, ಯಲ್ಲಪ್ಪ ಬಳ್ಳಾರಿ ಹಾಗೂ ಉಪಸ್ಥಿತರಿದ್ದರು.

loading...