ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯ

0
16

ಬೆಳಗಾವಿ

ಬೆಳಗಾವಿ ಜಿಲ್ಲಾಸ್ಪತ್ರೆಯ ಕ್ರೂರ,ಅಹಂಕಾರಿ ಹಾಗೂ ಅಮಾನವೀಯ ವೈದ್ಯರು, ಅಧಿಕಾರಿಗಳ ನಿರ್ಲಕ್ಷ್ಯದಿಂದ 9ವರ್ಷದ ಬಾಲಕಿ ಶೃದ್ದಾ ಮಾವಕರ ಸಾವಿನ ಉನ್ನತ ತನಿಖೆ, ತಪ್ಪಿತಸ್ಥರ ವಿರುದ್ದ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಶನಿವಾರ ಜೀವನ್ಮೂಕಿ ಫೌಂಡೇಶನ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಸಚಿವರಿಗೆ ಮನವಿ ರವಾನಿಸಿದರು.

ಸಾರ್ವಜನಿಕರ ಆರೋಗ್ಯ ಸೇವೆ ಸರಕಾರ ಎಲ್ಲ ಸೌಲಭ್ಯಗಳ ನಡುವೆ ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆ ನಡೆಸುತ್ತಿರುವುದರಿಂದ ಬಡ ರೋಗಿಗಳಿಗೆ ನ್ಯಾಯ‌ ಕೊಡಿಸವಲ್ಲಿ ವಿಫಲರಾಗುತ್ತಿದ್ದಾರೆ. ಅಲ್ಲದೆ ಬಡ ರೋಗಿಗಳ ಪ್ರಾಣದ ಜತೆ ಚಲ್ಲಾಟವಾಡಿ ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿದ್ದಾರೆ. ಏನೂ ಅರಿಯದ 9 ವರ್ಷದ ಕಂದಮ್ಮನ ಸಾವಿಗೆ ಜಿಲ್ಲಾ ಸರ್ಜನ್ ಹುಸೇನ್ ಸಾಬ್ ಖಾಜಿ ಹಾಗೂ ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೋಪ್ಪ ನೇರ ಕಾರಣರಾಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.
ಕಿರಣ ಕುಮಾರ ಪಾಟೀಲ, ಶ್ರೀದೇವಿ ಮಾವುರಕರ, ದೀಪಾ ಕಳಗೇಕರ, ಸಂದೀಪ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...