ಜಿಲ್ಲೆಗೆ “ಮಹಾ” ಕಂಟಕ ಇಂದು ೧೩ ಹೊಸ ಕೊರೊನ ಪ್ರಕರಣ ಪತ್ತೆ

0
99

ಜಿಲ್ಲೆಗೆ “ಮಹಾ” ಕಂಟಕ
ಇಂದು ೧೩ ಹೊಸ ಕೊರೊನ ಪ್ರಕರಣ ಪತ್ತೆ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ: ರವಿವಾರ ಜಿಲ್ಲೆಯ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿದೆ . ಇಂದು ಒಂದೆ ದಿನ ೧೩ ಕೊರೊನ ಸೊಂಕಿತ ಪ್ರಕರಣ ಪತ್ತೆಯಾಗಿದೆ . ಇದು ಮಹಾರಾಷ್ಟ್ರ ವಲಸಿಗರ ನಂಜು ಈಗ ಜಿಲ್ಲೆಯ ಜನರನ್ನ ತಲ್ಲಣಗೊಳಿಸಿದೆ .

ಇಂದು ಬಿಡುಗಡೆಯಾದ ಹೆಲ್ತ್ ಬುಲಿಟಿನ್ ಪ್ರಕಾರ ೧೩ ಹೊಸ ಪ್ರಕರಣಗಳು ದೃಡವಾಗಿವೆ.ಇಂದು ಪತ್ತೆಯಾದ ಎಲ್ಲ ಸೊಂಕಿತರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ .ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೧೬೦ಕ್ಕೆ ಏರಿಕೆಯಾಗಿದೆ .

೧೩ ರಲ್ಲಿ ಚಿಕ್ಕೋಡಿ ತಾಲೂಕಿನ 5, ಹುಕ್ಕೇರಿ -3 ಹಾಗೂ ಬೆಳಗಾವಿ ತಾಲ್ಲೂಕು- 5 .
ಎಲ್ಲರೂ ಕ್ವಾರಂಟೈನ್ ನಲ್ಲಿರುವವರು.

ಕಳ್ಳದಾರಿಗಳ ಮೂಲಕವು ವಲಸಿಗರು ಜಿಲ್ಲೆಯನ್ನ ಪ್ರವೇಶ ಮಾಡುತ್ತಿದ್ದಾರೆ .ತಬ್ಲಿಗ್ ,ಅಜ್ಮೀರ ಬಳಿಕ ಹೆಚ್ಚಿನ ನಂಟು ಮಹಾರಾಷ್ಟ್ರದಿಂದ ಬಂದಿರುವವರಲ್ಲಿ ಕಾಣಿಸಿಕೊಂಡಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ .

loading...