ಜಿಲ್ಲೆಯಲ್ಲಿ ಇಂದು ಮತ್ತೆ 38 ಸೊಂಕಿತರು ಪತ್ತೆ ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚುತ್ತಿದೆ “ಮಹಾ” ನಂಜು

0
245

ಜಿಲ್ಲೆಯಲ್ಲಿ ಇಂದು ಮತ್ತೆ 38 ಸೊಂಕಿತರು ಪತ್ತೆ
ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚುತ್ತಿದೆ “ಮಹಾ” ನಂಜು

ಕನ್ನಡಮ್ಮ ಸುದ್ದಿ :ಬೆಳಗಾವಿ:  ಜಿಲ್ಲೆಯಲ್ಲಿ ಇಂದು ಮತ್ತೆ 38 ಕೊರೊನ ಸೊಂಕಿತರು ಪತ್ತೆಯಾಗಿದ್ದಾರೆ.ಈ ಮೂಲಕ‌ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 301 ಕ್ಕೇರಿದೆ.ಇಂದು ಪತ್ತೆಯಾದ 38 ಜನ ಸೊಂಕಿತರು ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದಿದ್ದಾರೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಮಹಾರಾಷ್ಟ್ರದ ನಂಜು ಹೆಚ್ವುತ್ತಿದ್ದು ,ಪಾಸಿಟಿವ್ ಪತ್ತೆಯಾದ ಬಹುತೇಕ ಎಲ್ಲ ಸೊಂಕಿತರು ಮಹಾರಾಷ್ಟ್ರದಿಂದ ಬಂದ ವಲಸಿಗರಾಗಿದ್ದಾರೆ . ಹುಕ್ಕೇರಿ ತಾಲೂಕಿನ ಬಾಡ ಗ್ರಾಮ ಪಂಚಾಯತಿಯ ಕರಜಗಾ ಗ್ರಾಮದಲ್ಲಿ  4 ಕರೋನಾ  ಪಾಜಿಟಿವ್ ಕೆಸ್  ಸೊಂಕ್ಕಿತರು ಕಂಡು ಬಂದಿದ್ದು. ಒಂದೆ ಮನೆಯಲ್ಲಿ ತಂದೆ.ತಾಯಿ ಹಾಗೂ ‌ಮಗಳಲ್ಲಿ ಕೊರೊನ ಸೋಂಕು ಕಂಡು ಬಂದಿದ್ದು,  ಈ 4 ಸೊಂಕಿತರು‌  ಮಹಾರಾಷ್ಟ್ರದಿಂದ ಬಂದಿದ್ದಾರೆ .

ಸೊಂಕಿತರು ಕ್ವಾರಂಟೈನ್ ಇಡಲಾಗಿತ್ತು .ಕ್ವಾರಂಟೈನ್ ಅವಧಿ ಮುಗಿದ ನಂತರ ಅವರನ್ನ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು .ಇಂದು  ಕರಜಗಾ ಗ್ರಾಮಕ್ಕೆ  ‌ಪೋಲಿಸ್‌ ಇಲಾಖೆ,   ಆರೋಗ್ಯ ಇಲಾಖೆ ಭೇಟಿ ನೀಡಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ .  ಗ್ರಾಮವನ್ನು ಸೀಲ್‌ ಡೌನ್‌ ಮಾಡಿ ಗ್ರಾಮದಲ್ಲಿ ಸೈನಿಟೈಜರ್ ಸಿಂಪಡಣೆ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ .

loading...