ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ: ಜನರಲ್ಲಿ ಆತಂಕ ದ್ವಿಗುಣ

0
258

ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ: ಜನರಲ್ಲಿ ಆತಂಕ ದ್ವಿಗುಣ

7ಕ್ಕೆ ಏರಿದ ಸೋಂಕಿತರ ಸಂಖ್ಯೆ
ಬೆಳಗಾವಿ: ಜಿಲ್ಲೆಯಲ್ಲಿ ಭಾನುವಾರ ಮತ್ತೆ ನಾಲ್ಕು ಜನರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು ಇದರಿಂದ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ ಏಳಕ್ಕೇರಿದೆ.

ಭಾನುವಾರ ಒಂದೇ ದಿನ ನಾಲ್ವರಿಗೆ ಕೋವಿಡ್-19 ಸೋಂಕು ತಗುಲಿರುವುದು ತೀವ್ರ ಆತಂಕ ಉಂಟು ಮಾಡಿದೆ. ಕೋವಿಡ್-19 ಸೋಂಕು ತಗುಲಿದವರು ನಾಲ್ವರೂ ರಾಯಬಾಗ ತಾಲೂಕಿಗೆ ಸೇರಿದವರಾಗಿದ್ದು ಇವರೆಲ್ಲರೂ ದೆಹಲಿ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು.

ಕೋವಿಡ್ 19 ಸೋಂಕು ದೃಢಪಟ್ಟವರಲ್ಲಿ ಮೂವರು ಮಹಿಳೆಯರು, ಓರ್ವ ಪುರುಷ ಸೇರಿದ್ದಾರೆ.

ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ.
ನಾಲ್ವರು ಬೆಳಗಾವಿ ಜಿಲ್ಲೆಯ ರಾಯಬಾಗ ಮೂಲದವರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದ್ದು ಇವರೆಲ್ಲರೂ ದೆಹಲಿಯ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು.
ಸದ್ಯ ರಾಯಬಾಗ ತಾಲೂಕಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ನಾಲ್ವರು ದೆಹಲಿಯ ನಿಜಾಮುದ್ದಿನ್ ದಿಂದ ಮಾರ್ಚ್‌ 20ರಂದು ಬೆಳಗಾವಿಗೆ ಆಗಮಿಸಿದ್ದರು. ಮಾರ್ಚ್ 13ರಿಂದ ಮಾರ್ಚ್ 18ರವರೆಗೂ ದೆಹಲಿಯಲ್ಲಿದ್ದರು.
ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದರು.

ಬೆಳಗಾವಿ ಜಿಲ್ಲೆಯಿಂದ 80ಜನ ದೆಹಯ ನಿಜಾಮುದ್ದಿನ್ ಗೆ ತೆರಳಿದ್ದರು.
19ಜನರ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ಕು ಜನರಲ್ಲಿ ಕೊರೊನಾ ಸೋಂಕು ದೃಢ.
ದೆಹಲಿಯಿಂದ ಮರಳಿದ ಬಳಿಕ ಹೋಮ್ ಕ್ವಾರಂಟೈನ್ ಮಾಡಿರಲಿಲ್ಲ.

loading...