ಜಿಲ್ಲೆ ಅಭಿವೃದ್ಧಿಗೆ ಮೋದಿ ಕೊಡುಗೆ ಏನು : ಡಾ. ಸಾಧುನವರ

0
21

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹಲವಾರು ಕೊಡುಗೆಗಳನ್ನು ಕೊಟ್ಟಿದೆ, ಬೆಳಗಾವಿಗೆ ಸೂಪರ್ ಸ್ಪೆÃಶ್ಯಾಲಿಟಿ ಆಸ್ಪತ್ರೆ, ಹೈಟೆಕ್ ಬಸ್ ನಿಲ್ದಾಣದ ನಿರ್ಮಾಣಕ್ಕೆ ಅನುದಾನ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವ ಜೊತೆಗೆ ಈ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಆದರೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯ ಜನತೆಗೆ ಕೊಟ್ಟಿದ್ದೆÃನು ? ಸಂಸದ ಸುರೇಶ ಅಂಗಡಿ ಹದಿನೈದು ವರ್ಷ ಜಿಲ್ಲೆಯ ಅಭಿವೃದ್ಧಿಗೆ ಮಾಡಿದ್ದೆÃನು ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಪ್ರಶ್ನಿಸಿದ್ದಾರೆ.
ಬೆಳಗಾವಿ ಲೋಕಸಭಾ ಮತಕ್ಷೆÃತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ ಅವರು ಶನಿವಾರ ಸವದತ್ತಿ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಭವ್ಯ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ್ದು ಕಾಂಗ್ರೆಸ್ ಹಸಿರು ಕ್ರಾಂತಿಯ ಮೂಲಕ ಆಹಾರದ ಸಮಸ್ಯೆ ಬಗೆಹರಿಸಿ ದೇಶಾದ್ಯಂತ ಡ್ಯಾಂ ಗಳನ್ನು ನಿರ್ಮಿಸುವದರ ಜೊತೆಗೆ ದೇಶದ ಜನರ ಪ್ರಾಣಕ್ಕೆ ಮಾರಕವಾಗಿದ್ದ ಪ್ಲೆÃಗ್.ಪೋಲಿಯೋ ಮಲೇರಿಯಾ ಟಿಬಿ,ಕಾಲರಾ ಸೇರಿದಂತೆ ಹಲವಾರು ಭಯಾನಕ ರೋಗಗಳಿಗೆ ಔಷಧಿ ಕಂಡು ಹಿಡಿದಿದ್ದು ಕಾಂಗ್ರೆಸ್ ಎನ್ನುವದನ್ನು ದೇಶದ ಜನ ಮರೆಯುವದಿಲ್ಲ ಎಂದು ಸಾಧುನವರ ಹೇಳಿದರು’
ಸವದತ್ತಿ ಯಲ್ಲಮ್ಮ ದೇವಸ್ಥಾನ ಟ್ರಸ್ಟ ಅದ್ಯಕ್ಷ ರಾಮನಗೌಡಾ ತಿಪರಾಸಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಒಂದೂ ಭರವಸೆಯನ್ನು ಈಡೇರಿಸದೇ ಸಿಲೆಂಡರ್,ಪೆಟ್ರೊÃಲ್,ಡಿಸೈಲ್ ಬೆಲೆ ಏರಿಸಿ ಬಡವರ ಬದಉಕನ್ನು ಕಸಿದುಕೊಂಡರು.ರೂತರ ಸಾಲ ಮನ್ನಾ ಮಾಡದೇ ಅನ್ನದಾತನಿಗೆ ಮೋಸ ಮಾಡಿದ್ದು ನರೇಂದ್ರ ಮೋದಿ,ಎನ್ನುವದು ಎಲ್ಲರಿಗೂ ಗೊತ್ತಾಗಿದೆ ಮೋದಿ ಎಂದರೆ ಮೋಸ ಎನ್ನುವದು ಐದು ವರ್ಷದಲ್ಲಿ ಗೊತ್ತಾಗಿದ್ದು ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಮೋಸದಾಟ ನಡೆಯುವದಿಲ್ಲ ಎಂದರು
ಕಾಂಗ್ರೆಸ್ ಮುಖಂಡ ರವೀಂದ್ರ ಯಲಿಗಾರ ಮಾತನಾಡಿ, ಸುಳ್ಳು ಹೇಳುವದೇ ಬಿಜೆಪಿಯ ಬಂಡವಾಳ ಮೋಸ ಮಾಡುವದೇ ಬಿಜೆಪಿ ಅಜೇಂಡಾ ಬಿಜೆಪಿಯಿಂದ ಈ ದೇಶದ ಅಭಿವೃದ್ಧಿ ಅಸಾದ್ಯವಾಗಿದ್ದು ಎಲ್ಲ ವರ್ಗಗಳ ಉದ್ಧಾರಕ್ಕಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವದು ಅಗತ್ಯವಾಗಿದ್ದು ಮೋದಿ ಹಠಾವೋ ದೇಶ ಬಚಾವೋ ಎಂದು ಯಲಿಗಾರ ಮತದಾರರಲ್ಲಿ ಮನವಿ ಮಾಡಿಕೊಂಡರು
ಕಾಂಗ್ರೆಸ ಮುಖಂಡರಾದ ವಿಶ್ವಾಸ ವೈದ್ಯ ಸೇರಿದಂತೆ ಸವದತ್ತಿ ತಾಲ್ಲೂಕಿ ಎಲ್ಲ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

loading...