ಜಿಸ್ಯಾಟ್-30’ ಉಶಸ್ವಿ ಉಡಾವಣೆ

0
3

ಬೆಂಗಳೂರು:- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನದ    ಮೂಲಕ ನಿರ್ಮಿಸಿರುವ ಸುಧಾರಿತ, ಆಧುನಿಕ   ಸಂಪರ್ಕ  ಉಪಗ್ರಹ  ‘ಜಿಸ್ಯಾಟ್-30’     ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ  ಯಶಸ್ವಿಯಾಗಿ ಉಡಾವಣೆಯಾಗಿದೆ.
ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ  2.35ರ ವೇಳೆಗೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ ‘ಎರೇನ್ 5’ ಎಂಬ ರಾಕೆಟ್  ವಾಹಕದ ಮೂಲಕ  ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದೆ  ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಉಡಾವಣೆಯ ಬಳಿಕ  38 ನಿಮಿಷ 25 ಸೆಕೆಂಡುಗಳು ಜಿಸ್ಯಾಟ್  -30 ಅರಿಯೇನ್ 5 ಮೇಲಿನ ಹಂತದಿಂದ ಅಂಡಾಕಾರದ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಬೇರ್ಪಟ್ಟಿದೆ.
“ಉಪಗ್ರಹವು ಕು-ಬ್ಯಾಂಡ್ ಮೂಲಕ ಭಾರತೀಯ ಮುಖ್ಯಭೂಮಿ ಮತ್ತು ದ್ವೀಪಗಳಲ್ಲಿ ಸಂವಹನ ಸೇವೆಗಳನ್ನು ಒದಗಿಸುತ್ತದೆ ಮತ್ತು ಗಲ್ಫ್ ರಾಷ್ಟ್ರಗಳು, ಹೆಚ್ಚಿನ ಸಂಖ್ಯೆಯ ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾವನ್ನು ಸಿ-ಬ್ಯಾಂಡ್ ಮೂಲಕ ಒಳಗೊಳ್ಳುತ್ತದೆ” ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.
3,357 ಕೆಜಿ ತೂಕದ  ಈ ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್ಲಿಂಕಿಂಗ್, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ  (ಡಿಎಸ್ಎನ್ಜಿ), ಸೆಲ್ಯೂರಲ್ ಬ್ಯಾಕ್ಹೌಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ಒದಗಿಸಲಿದೆ.

loading...