ಜಿ.ಪಂ ಮಾಸಿಕ ಕೆಡಿಪಿ ಸಭೆ

0
11

ಬಾಗಲಕೋಟೆ: ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿ ಊಟ ತಯಾರಿಸುತ್ತಿರುವ ಅಡಿಗೆ ಸಹಾಯಕರಿಗೆ ಎಪ್ರಾನ್ ಎಂಬ ಸುರಕ್ಷಿತ ವಸ್ತಗಳನ್ನು ಯಾರ ಗಮನಕ್ಕೆ ತರದೇ ಖರೀದಿಸಿದ್ದು, ಈ ಕುರಿತು ಸತ್ಯಾಸತ್ತತೆಯನ್ನು ಅರಿಯಲು ತನಿಖೆಗೆ ಆದೇಶಿಸುವಂತೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಜಿ.ಪಂ ಸಿಇಓ ಅವರಿಗೆ ಸೂಚಿಸಿದರು. ಜಿ.ಪಂ ಸಭಾಭವನದಲ್ಲಿಂದು ಜರುಗಿದ ನವೆಂಬರ-೧೮ರ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೇಲಾಧಿಕಾರಿಗಳ ಗಮನಕ್ಕೆ ತರದೇ ನೇರವಾಗಿ ತಮಗೆ ಬೇಕಾದ ಏಜೇನ್ಸಿಯವರಿಂದ ರೂ.೨ ಸಾವಿರಗೆ ಒಂದು ಸೆಟ್ ಎಪ್ರಾನ್ ಖರೀದಿಸಲಾಗಿದೆ ಎಂದು ಜಿ.ಪಂ ಸದಸ್ಯೆ ಶೋಭಾ ಬಿರಾದಾರ ಸಭೆಯಲ್ಲಿ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಬರದೇ ಇರುವದನ್ನು ಕಂಡು ತನಿಖೆಗೆ ಆದೇಶಿಸುವಂತೆ ಸೂಚಿಸಿದರು. ಅಲ್ಲದೇ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮವನ್ನು ಸಹ ತೆಗೆದುಕೊಳ್ಳಬೇಕೆಂದರು.
ಈ ಕುರಿತು ಸದನದಲ್ಲಿಯೂ ಸಹ ಚರ್ಚೆಗೆ ಬಂದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಅಸಮಾಧಾನಕ್ಕೆ ಕಾರಣವಾಯಿತು. ಇದನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಒಳಪಡಿಸುವದ ಜೊತೆಗೆ ತಪ್ಪಿತತ್ಸರ ಮೇಲೆ ಎಪ್‌ಐಆರ್ ಸಹ ದಾಖಲಿಸಬೇಕೆಂದು ಎಂದರು. ಎಪ್ರಾನ್‌ಗಳನ್ನು ಪರೀಕ್ಷಿಸಲು ಸ್ವತಃ ಸಭೆಗೆ ತರಿಸಿ ಗುಣಮಟ್ಟವನ್ನು ಪರೀಕ್ಷಿಸಲಾಯಿತು.

ಪ್ರಸಕ್ತ ವರ್ಷದಲ್ಲಿ ಸರ್ವೆ ಕಾರ್ಯದಿಂದ ಒಟ್ಟು ೧೪೫೦ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ತಿಳಿದು ಬಂದಿದ್ದು, ಅವರನ್ನು ಶಾಲೆಗೆ ದಾಖಲಾತಿಗೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಡಿಡಿಪಿಐ ಕಾಮಾಕ್ಷಿ ಸಭೆಗೆ ತಿಳಿಸಿದಾಗ ಕಾರ್ಯಕ್ರಮ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ನಿಮ್ಮಲ್ಲಿರುವ ಬೇಜವಾಬ್ದಾರಿತ ಎತ್ತಿ ತೋರಿಸುತ್ತದೆ ಎಂದು ಜಿ.ಪಂ ಅಧ್ಯಕ್ಷರು ತಿಳಿಸಿದರು. ಈ ವರ್ಷ ಎಸ್‌ಎಸ್‌ಎಲ್‌ಸಿ ಸುಧಾರಣೆಗೆ ವಿಶೇಷ ಕ್ಲಾಸ್ ಹಾಕಿಕೊಂಡು ಫಲಿತಾಂಶದಲ್ಲಿ ಹಿಂದೆ ಇರುವ ತಾಲೂಕುಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದ್ದು, ತೋಟಗಾರಿಕೆ ಬೆಳೆಗಳ ಬಗ್ಗೆ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕೆಲಸವಾಗಬೇಕು.

ಬಂಜೆತನ ನಿವಾರಣೆಗೆ ಸಹ ಚಿಕಿತ್ಸೆ ನೀಡಬೇಕೆಂದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಜಿ.ಪಂ ಉಪಾದ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ ಸಿಪಿಓ ನಿಂಗಪ್ಪ ಗೋಠೆ, ಜಿ.ಪಂ ಸದಸ್ಯರು, ಜಿ.ಪಂ ಉಪ ಕಾರ್ಯದರ್ಶಿ ದುರ್ಗೇಶ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...