ಜು.೪ ರಂದು ವಿಪ್ರಸಿರಿ ಸೌಹಾರ್ದ ಕ್ರೆÃಡಿಟ್ ಕೋ ಆಪರೇಟಿವ ಉದ್ಘಾಟನೆ

0
10

 

ಗಂಗಾವತಿ: ನಗರದಲ್ಲಿ ಜು.೪ ರಂದು ಗುರುವಾರ ವಿಪ್ರಸಿರಿ ಸೌಹಾರ್ದ ಕ್ರೆÃಡಿಟ್ ಕೋ-ಆಪರೇಟಿವ ಲಿಮಿಟೆಡ್ ಉದ್ಘಾನೆಯಾಗಲಿದ್ದು, ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸüರಿಗೆ, ರೈತರಿಗೆ ಆರ್ಥಿಕ ಸೌಲಭ್ಯ ನೀಡುವುದೇ ಇದರ ಮುಖ್ಯ ಉದ್ದೆÃಶವಾಗಿದೆ ಎಂದು ಸೋಸೈಟಿಯ ಮುಖ್ಯ ಪ್ರವರ್ತಕ ರಾಘವೇಂದ್ರ ಲಾಚಿಯದುಣಸಿ ಹೇಳಿದರು.
ಭಾನುವಾರ ಸೋಸೈಟಿಯ ನೂತನ ಕಚೇರಿಯಲ್ಲಿ ಅಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ವಿಶೇಷವಾಗಿ ಬ್ರಾಹ್ಮಣ ಸಮಾಜದ ಹಿರಿಯರು, ಯುವಕರ ಸಹಕಾರದಿಂದ ಮೊಟ್ಟ ಮೊದಲ ಬಾರಿಗೆ ನಾವು ವಿಪ್ರಸಿರಿ ಹೆಸರಿನಲ್ಲಿ ಈ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತರುತ್ತಿದ್ದೆÃವೆ. ಸಹಕಾರ ಇಲಾಖೆಯ ನಿಯಮದಂತೆ ವಿಪ್ರಸಿರಿ ಸೌಹಾರ್ದವನ್ನು ರಚನೆಯ ಮಾಡಲಾಗಿದೆ. ಸಮಾನ ಮನಸ್ಕ ಬ್ರಾಹ್ಮಣ ಸಮಾಜದ ಯುವಕರು ಈ ಸೋಸೈಟಿ ರಚಿಸಲು ವಿಶೇಷ ಆಸಕ್ತಿವಹಿಸಿದ್ದಾರೆ. ಆಡಳಿತ ಮಂಡಳಿಯಲ್ಲಿ ನಿಯಮಾನುಸಾರ ಎಲ್ಲರಿಗೂ ಅವಕಾಶ ನೀಡಲಾಗಿದೆ. ಎಲ್ಲಾ ಜಾತಿ ಜನಾಂಗ, ವ್ಯಾಪಾರಸ್ಥರು, ರೈತರು ಸೇರಿದಂತೆ ಎಲ್ಲರಿಗೂ ಸಾಲ ಸೌಲಭ್ಯ, ಠೇವಣಿ ವ್ಯವಸ್ಥೆ ಕಲ್ಪಿಸಲಾಗುವುದು. ದೇಶದಲ್ಲಿ ಇಂದು ಸಹಕಾರಿ ಕ್ಷೆÃತ್ರ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಈ ಕಾರಣಕ್ಕಾಗಿ ನಾವು ಸಹಕಾರಿ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದೆÃವೆ. ಸಂಘದ ಏಳ್ಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಬ್ರಾಹ್ಮಣ ಸಮಾಜ ಸೇರಿದಂತೆ ಎಲ್ಲರಿಗೂ ಆರ್ಥಿಕ ಸೌಲಭ್ಯ ನೀಡುವುದು ನಮ್ಮ ಪ್ರಮುಖ ಉದ್ದೆÃಶವಾಗಿದೆ. ಸಹಕಾರ ಇಲಾಖೆಯ ಕಾಯ್ದೆಯಡಿ ನಮ್ಮ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ಸಹಕಾರಿ ಹಿರಿಯ ಧುರಿಣ ಹಾಗೂ ಸೋಸೈಟಿ ಪ್ರವರ್ತಕ ರಮೇಶ ಕುಲಕರ್ಣಿ ಮರಳಿ ಹೇಳಿದರು. ಪ್ರವರ್ತಕ ರಾಘವೇಂದ್ರ ಮೇಗೂರು ಮಾತನಾಡಿ, ಸಮಾನ ಮನಸ್ಕರೆಲ್ಲರೂ ಸೇರಿ ಸಹಕಾರಿ ರಂಗಕ್ಕೆ ಪಾದಾರ್ಪಣೆ ಮಾಡಿದ್ದೆÃವೆ. ಎಲ್ಲರ ಸಹಕಾರ ಅಗತ್ಯವಾಗಿದೆ. ನಗರದ ಗಾಂಧಿ ವೃತ್ತದ ಜನಾರ್ದಿ ಕಾಂಪ್ಲೆಕ್ಸ್ನ ಮದೊಲನೇ ಮಹಡಿಯಲ್ಲಿ ಸಂಘದ ಸುಸಜ್ಜಿತ ಸುಸಜ್ಜಿತ ಕಚೇರಿ ಮಾಡಲಾಗಿದ್ದು, ಸಂಪೂರ್ಣ ಗಣಕೀಕೃತವಾಗಿ ಕಾರ್ಯ ನಿರ್ವಹಿಸಲಿದೆ. ಜು.೪ ರಂದು ಬೆಳೆಗ್ಗೆ ೧೦ ಗಂಟೆಗೆ ಸಹಕಾರ ಭಾರತಿ ರಾಷ್ಟಿçÃಯ ಅಧ್ಯಕ್ಷ ರಮೇಶ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಸಹಕಾರಿ ಧುರಿಣ ಶ್ರಿÃಧರ ಕೆಸರಹಟ್ಟಿ, ನಾಗಲಿಂಗಪ್ಪ ಪತ್ತಾರ, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಪಿ.ಶೆಲ್ಲಿಕೇರಿ ಉಪಸ್ಥಿತರಿರುತ್ತಾರೆ. ನಗರ ಮತ್ತು ತಾಲೂಕಿನ ಸಹಕಾರಿ ಧುರಿಣರು, ಹಿತೈಸಿಗಳು ಸಮಾಜದ ಮುಖಂಡರು ಆಗಮಿಸಿ ಶುಭ ಹಾರೈಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರವರ್ತಕರಾದ ವೆಂಕಟೇಶ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಶ್ರಿÃನಿವಾಸ ಭೋವಿ, ಗುರುರಾಜ ಚಿರ್ಚನಗುಡ್ಡ, ಶ್ರಿÃಕಾಂತ ನಾಯಕ ಮತ್ತಿತರು ಇದ್ದರು.

loading...