ಜೈಲಿನಲ್ಲೇ  ಭೀಕರ ಗುಂಡಿನ ಕಾಳಗ: 12 ಕೈದಿಗಳ ಸಾವು

0
2
ಪನಾಮ ಸಿಟಿ:- ಪನಾಮ ನಗರದ ಸಮೀಪ ಜೈಲಿನಲ್ಲಿ ಮಂಗಳವಾರ ಎರಡು ಗ್ಯಾಂಗ್ ಗಳ ನಡುವೆ ನಡೆದ ಭೀಕರ  ಗುಂಡಿನ ದಾಳಿಯಲ್ಲಿ ಕನಿಷ್ಠ 12 ಕೈದಿಗಳು ಸಾವನ್ನಪ್ಪಿದ್ದು, ಇತರೆ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿಯಿಂದ ಪೂರ್ವಕ್ಕೆ 25 ಕಿ.ಮೀ ದೂರದಲ್ಲಿರುವ ಲಾ ಜಾಯ್ಟಾ ಜೈಲಿನಲ್ಲಿ ನಡೆದ ಗುಂಡಿನ ಕಾರ್ಯಚರಣೆಯ ನಂತರ  ಐದು ಕೈಬಂದೂಕುಗಳು ಮತ್ತು ಮೂರು  ಬಂದೂಕುಗಳು ಸೇರಿದಂತೆ ಹಲವು ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನೊಳಗೆ  ಗುಂಡಿನ ಕಾರ್ಯಾಚರಣೆ  ನಡೆದಿದೆ ಎಂದು  ಪನಾಮಾದ ಉಪ ಪೊಲೀಸ್ ಮುಖ್ಯಸ್ಥ ಅಲೆಕ್ಸಿಸ್ ಮುನೊಜ್ ಹೇಳಿದ್ದು, , ಇದು ಜನದಟ್ಟಣೆಯಿಂದ ಕೂಡಿದ ಜೈಲಿನ  ಎರಡು ತಂಡಗಳ  ನಡುವಿನ ವೈರತ್ವದಿಂದ ಸಂಭವಿಸಿದ  ಕಹಿ ಘಟನೆಯಾಗಿದೆ .
loading...