ಜೈವಿಕ ಇಂಧನ ಬಳಕೆಯಿಂದ ಕೊರತೆ ನಿವಾರಣೆ ಸಾಧ್ಯ

0
12

ಅಥಣಿ 18: ಜೈವಿಕ ಇಂಧನಗಳನ್ನು ಬಳಕೆ ಮಾಡುವುದರಿಂದ ಪೆಟ್ರೌಲಿಯಂ ತೈಲಗಳ ಕೊರತೆಯನ್ನು ನೀಗಿಸಲು ಸಾಧ್ಯ. ಆದ್ದರಿಂದ ಜೈವಿಕ ಇಂಧನ ಬಳಕೆಗೆ ಆದ್ಯತೆ ನೀಡುವಂತೆ ಆಡಳಿತಾಧಿಕಾರಿ ಎಂ.ಆರ್.ಪಾಟೀಲ ಕರೆನೀಡಿದರು.

ಅವರು ಇಲ್ಲಿನ ವಿದ್ಯಾವರ್ಧಕ ಸಂಸ್ಥೆಯ ಶಾಲೆಯಲ್ಲಿ ಜೈವಿಕ ಇಂಧನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ಶಿಕ್ಷಕ ಎಸ್.ಬಿ.ಜೋರಾಪೂರ, ಶಿಕ್ಷಕಿ ಆಶಾ ಪಾಟೀಲ, ಶೀತಲ ಕರಣಿ ಜೈವಿಕ ಇಂಧನ ಬಳಕೆ ಕುರಿತು ಮಾತನಾಡಿದರು.

ಅಮೃತಾ ಗೋಠೆ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ರೋಹಿಣಿ ಯಾದವಾಡ ಸ್ವಾಗತಿಸಿದರು. ಮುಖ್ಯಾಧ್ಯಾಪಕ ವಿ.ಡಿ.ಚನ್ನಗೌಡ, ಎಸ್.ಜಿ.ಧನ್ಯಾಳಮಠ, ಎಸ್.ಪಿ.ಪಿರಗೊಂಡ, ಗಣೇಶಗೌಡ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here