ಜ್ಞಾನಿಗಳ ಬದುಕು ನಮ್ಮ ಜೀವನಕ್ಕೆ ಅಡಿಪಾಯ: ನಾಗರತ್ನ

0
37

ಗುಳೇದಗುಡ್ಡ: ನಾವೆಲ್ಲ ಒಬ್ಬನೇ ತಂದೆಯ ಮಕ್ಕಳು. ನಾವು ಜಾತಿ, ಧರ್ಮ, ಸೀಮೆ, ಗಡಿಗಳಿಂದ ಮುಕ್ತರಾಗಿ ಆತ್ಮಜ್ಞಾನ ಹೊಂದಬೇಕು. ತತ್ವಜ್ಞಾನಿಗಳು, ದಾರ್ಶನಿಕರು ತೋರಿದ ಮಾರ್ಗದಲ್ಲಿ ನಡೆಯಬೇಕು, ಅವರ ಜೀವನ ದರ್ಶನ ನಮ್ಮ ಜೀವನಕ್ಕೆ ಅಡಿಪಾಯವಾಗಬೇಕು ಎಂದು ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ನಾಗರತ್ನ ಅಕ್ಕನರವರು ಹೇಳಿದರು.
ಅವರು ಇಲ್ಲಿನ ಮರಡಿ ಮಠದಲ್ಲಿ ೯ನೇ ಶ್ರಿÃ ಕಾಡಸಿದ್ದೆÃಶ್ವರ ಶಿವಯೋಗಿಗಳ ೬೧ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜೀವನದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತು ಒಳ್ಳೆಯವರನ್ನು ಮಾತ್ರ ಗೌರವಿಸುತ್ತದೆ. ಒಳ್ಳೆಯತನದಿಂದ ಬದುಕುವುದೇ ಜೀವನ ದರ್ಶನ ಎಂದರು.

ಶ್ರಿÃಮಠದ ಅಭಿನವ ಕಾಡಸಿದ್ದೆÃಶ್ವರ ಶ್ರಿÃಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿಗೆ ಗುರುಗಳ ಮಾರ್ಗದರ್ಶನ ಅವಶ್ಯ. ಗುರುವಿನ ಪಾದದಲ್ಲಿ ಶರಣಾದವನು ಮಾತ್ರ ಆತ್ಮಶಾಂತಿ ಪಡೆಯುತ್ತಾನೆ. ಗುರುವಿನಿಂದ ಜೀವನ ದರ್ಶನ ಸಾಧ್ಯವಾಗುತ್ತದೆ ಎಂದರು. ವೇ.ಮೂ.ಗುರುದೇವ ಶಾಸ್ತಿçÃಗಳು, ಎ.ಎಂ ಪಲ್ಲೆÃದ ಅವರು ಮಾತನಾಡಿದರು.
ಶ್ರಿÃಮಠದ ಶ್ರಿÃ ೧೦ನೇ ಕಾಡಸಿದ್ದೆÃಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಇಂಗಳಗಿಯ ರೇವಣಸಿದ್ದೆÃಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶುಕ್ರವಾರ ೯ನೇ ಕಾಡಸಿದ್ದೆÃಶ್ವರ ಶ್ರಿÃಗಳ ಪುಣ್ಯಾರಾಧನೆ ಅಂಗವಾಗಿ ಬೆಳಿಗ್ಗೆ ಕತೃ ಗದ್ದುಗೆಗೆ ಅಭಿಷೇಕ ನಡೆಯಿತು. ಬಳಿಕ ವಟುಗಳಿಗೆ ಅಂiÀiÁ್ಯಚಾರ ಕಾರ್ಯಕ್ರಮ ನಡೆಯಿತು. ಬಳಿಕ ೧೦ ಗಂಟೆಗೆ ೯ನೇ ಶ್ರಿÃ ಕಾಡಸಿದ್ದೆÃಶ್ವರ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ೧೦೮ ಕುಂಭಗಳು ಹಾಗೂ ವಾದ್ಯಮೇಳಗಳೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು. ಬಳಿಕ ೧೨ ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

೧೦ನೇ ಶ್ರಿÃ ಕಾಡಸಿದ್ದೆÃಶ್ವರ ಸ್ವಾಮಿಗಳು, ಶ್ರಿÃ ಅಭಿನವ ಕಾಡಸಿದ್ದೆÃಶ್ವರ ಸ್ವಾಮಿಗಳು, ಕೋಟೆಕಲ್ಲಿನ ಶ್ರಿÃ ಹೊಳೆಹುಚ್ಚೆÃಶ್ವರ ಸ್ವಾಮಿಗಳು, ಕಮತಗಿಯ ಶ್ರಿÃ ಶಿವಕುಮಾರ ಶಿವಾಚಾರ್ಯರು, ಇಂಗಳಗಿಯ ಶ್ರಿÃ ರೇವಣಸಿದ್ದೆÃಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ. ಹಂಗರಗಿ, ಅಡಿವೆಪ್ಪ ತಾಂಡೂರ, ಹುಚ್ಚಪ್ಪ ಅಂಕದ, ಶಿವಕುಮಾರ ತೊಗರಿ, ಸಂಗಪ್ಪ ಜವಳಿ, ನಾಗೇಶ ಪಾಗಿ, ವೇ.ಮೂ. ಈಶ್ವರಯ್ಯ ಕಲ್ಮಠ, ಮರುಳಾಧ್ಯ ಮರಡಿಮಠ, ಶಿವಯ್ಯ ಮರಡಿಮಠ, ಶರಣಯ್ಯ ಮರಡಿಮಠ, ಮಹಾಂತೇಶ ಅಗ್ನಿ, ಬಸವರಾಜ ಸಿಂಗದ, ಪ್ರಕಾಶ ಅಚನೂರ ಸೇರಿದಂತೆ ತಿಮ್ಮಸಾಗರ, ಮುಗಳೊಳ್ಳಿ, ಕಮತಗಿ, ಹಡಗಲಿ, ನಿಂಬಲಗುಂದಿ, ಹೂವಿನಹಳ್ಳಿ ಮತ್ತಿತರ ಶಾಖಾಮಠಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಸವರಾಜ ಸಿಂದಗಿಮಠ, ಶ್ರಿÃಕಾಂತ ಚಿಮ್ಮಲ, ಶಿವಯ್ಯ ಮಾಲಗಿತ್ತಿಮಠ ಅವರಿಂದ ಸಂಗೀತ ಸೇವೆ ನಡೆಯಿತು.

loading...