ಜ್ಞಾನ ಕರ್ಮಿ ಗುರು ವೃಶ್ಚಿಕ ರಾಶಿಗೆ ಪ್ರವೇಶ

0
141

ವೈದಿಕ ಜ್ಯೊÃತಿಷ್ಯಗಳಲ್ಲಿ ಗುರು ತುಂಬಾ ಮಹತ್ವಪೂರ್ಣ ಎಂದು ಹೇಳಲಾಗುತ್ತದೆ. ಗುರು ಜೀವನದ ಉನ್ನತಿಕಾರಕ. ಗುರು ಅತ್ಯಂತ ಶುಭ ಗ್ರಹ. ಗುರು ಬ್ರಹಸ್ಪತಿಗೆ ದೇವ ಗುರು ಎಂದು ಕರೆಯಲಾಗುತ್ತದೆ. ಗುರು ಜ್ಞಾನ, ಕರ್ಮ ಧನ, ಪುತ್ರ , ವೈವಾಹಿಕ ಕಾರಕ. ಇದಲ್ಲದೆ ಕುಂಡಲಿಯಲ್ಲಿ ಗುರುವಿನ ಪ್ರಭಾವ ಇದ್ದರೆ ಬೇರೆ ಗ್ರಹಗಳ ಕೆಟ್ಟ ಪ್ರಭಾವ ಬೀರಿದರು ಹಾನಿ ಉಂಟಾಗಲ್ಲ. ಕುಂಡಲಿಯಲ್ಲಿ ಗುರುವಿನ ಬಲ ಇದ್ದರೆ ಆ ವ್ಯಕ್ತಿಯು ಅದೃಷ್ಟಶಾಲಿಯೇ ಎಂದು ಹೇಳಬಹುದು. ಇದೆಲ್ಲ ನಾವು ಹೇಳುತ್ತಿರುವುದು ಗುರು ಗೋಚರ ೨೦೧೮ರದ್ದು.
೨೦೧೮ರಲ್ಲಿ ಬ್ರಹಸ್ಪತಿ ದೇವ ಹೆಚ್ಚಿನ ಸಮಯ ತುಲಾ ರಾಶಿಯಲ್ಲಿ ಗೋಚರವಾಗಲಿದ್ದಾನೆ. ಅಕ್ಟೊÃಬರ್ ೧೧ ಗುರುವಾರದಂದು ರಾತ್ರಿ ೮.೩೯ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಗುರು ೨೦೧೯ರ ಮಾರ್ಚ್ ೩೦ರವರೆಗೆ ರಾತ್ರಿ ೩.೧೧ರ ವರೆಗೆ ಗುರು ಇರಲಿದ್ದಾನೆ.
ಮೇಷ: ಈ ರಾಶಿಯವರಿಗೆ ಭಾಗ್ಯದ ಕೊರತೆ ಕಾಣಲಿದೆ. ಇದರಿಂದ ನಿಮಗೆ ನಷ್ಟ ಸಂಭವಿಸಲಿದೆ ಆದರೆ ಗುರು ವಂದನೆ ಮಾಡಿದರೆ ತಡವಾದರೂ ನಿಮಗೆ ಸಫಲ ಸಿಕ್ಕೆ ಸಿಗಲಿದೆ. ವ್ಯವಸಾಯ, ವ್ಯವಹಾರದಲ್ಲಿ ಸ್ವಲ್ಪ ಹಾನಿ ಕಂಡುಬರಲಿದೆ. ದುಡುಕು ಸ್ವಭಾವ ಹಾಗೂ ನಿಮ್ಮ ನಿರ್ಧಾರಗಳಿಂದ ಹಾನಿ ಸಂಭವಿಸಲಿದೆ.
ಉಪಾಯ: ಗೋವಿಗೆ ರೊಟ್ಟಿ ಆಹಾರ ನೀಡಿ, ಅರಿಶಿನ, ಬೆಳೆಕಾಳುಗಳನ್ನು ದಾನ ಮಾಡಿ.
ವೃಷಭ: ದೇವ ಗುರು ಬೃಹಸ್ಪತಿ ಅಷ್ಟಮಿಯ & ಏಕಾದಶಿಯ ಅಧಿಪತಿ. ಈ ರಾಶಿಯವರ ಜೀವನ ಸಂಗಾತಿಯಿಂದ ತುಂಬಾ ಸಂತೊಷ ಸಿಗಲಿದೆ. ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಕೆಲ ವೇಳೆ ಸಿಹಿ-ಕಹಿ ಅನುಭವವಾಗಬಹುದು. ತಾಳ್ಮೆ ಯಾವುದಕ್ಕೂ ಕಳೆದುಕೊಳ್ಳಬಾರದು. ಪಾಟ್ನರ್‌ಶಿಪ್‌ನಲ್ಲಿ ವ್ಯವಹಾರ ಮಾಡಬೇಕೆನ್ನುವವರು ಮಾಡಬಹುದು.
ಉಪಾಯ: ಗುರುವಾರದಂದು ಅರಿಶಿನ ಬೆಳೆಕಾಳುಗಳನ್ನು ದಾನ ಮಾಡಿ.
ಮಿಥುನ: ಈ ರಾಶಿಯವರಿಗೆ ಗುರು ಸ್ಥಾನಪಲ್ಲಟದಿಂದ ಸ್ವಲ್ಪ ಅನಾನುಕೂಲವಾಗಬಹುದು. ಸಹೋದರ- ಸಹೋದರಿ ಮಧ್ಯೆ ವಾದ ವಿವಾದಗಳು ನಡೆಯಬಹುದು. ಆರೋಗ್ಯದ ಕುರಿತು ಬೇಜವಾಬ್ದಾರಿ ವಹಿಸಬೇಡಿ. ಸಫಲತೆಗಾಗಿ ನೀವು ಸಂಘರ್ಷ ಮಾಡಬೇಕಾಗುತ್ತದೆ. ಗುರು ಸ್ಥಾನ ಪಲ್ಲಟದಿಂದ ಪ್ರೊಪೆಷನಲ್ ಜೀವನದಲ್ಲಿ ಕೆಲ ಬದಲಾವಣೆಗಳು ಆಗಲಿದ್ದು ಯಾವುದಕ್ಕೂ ಎಚ್ಚರಿಕೆ ವಹಿಸಿದರೆ ಉತ್ತಮ.
ಉಪಾಯ: ಬ್ರಾಹ್ಮನರಿಗೆ ಶುಕ್ರವಾರದಿನ ದಾನ ಮಾಡಿ, ಗೋವಿಗೆ ಆಹಾರ ನೀಡಿ.
ಕರ್ಕ: ಗುರುವಿನ ವೃಶ್ಚಿಕ ರಾಶಿಯಲ್ಲಿ ಪ್ರವೇಶದಿಂದ ಮನೆಯಲ್ಲಿ ಸಂತೋಷ ವಾತಾವರಣ ನಿರ್ಮಾಣವಾಗಲಿದ್ದು, ಪುಟ್ಟ ಅತಿಥಿಯೊಬ್ಬರ ಆಗಮನವಾಗಲಿದೆ. ಈ ಮಗುವಿನ ಜನ್ಮದಿಂದ ಮನೆಯಲ್ಲಿ ದಾಂಪತ್ಯದಲ್ಲಿ ಸುಖ ಶಾಂತಿ ಮನೆ ಮಾಡಲಿದೆ. ಇದರಿಂದ ಸಜ್ಜನ ಸಂಘ ನಿಮಗೆ ದೊರೆಯಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ.
ಉಪಾಯ: ಬ್ರಹಸ್ಪತಿ ಬೀಜ ಮಂತ್ರದ ಜಪ ಮಾಡಿ
ಸಿಂಹ: ಈ ರಾಶಿಯವರಿಗೆ ಸ್ವಲ್ಪ ಕಷ್ಟಕರ ಪರಿಸ್ಥಿತಿಗಳು ಎದುರಾಗಬಹುದು. ಸಂಬಂಧಿಗಳೊಂದಿಗೆ ವಾದ ವಿವಾದದಿಂದ ಸಂಬಂಧದಲ್ಲಿ ಬಿರುಕು ಕಾಣಬಹುದು. ಮಿತ್ರರೊಂದಿಗೆ ಸಮತೋಲಿತ ವ್ಯವಹಾರ ಇರಲಿದೆ. ಬೇರೆಯವರೊಂದಿಗೆ ಉತ್ತಮ ಸಂಬಂಧ ಹೊಂದುವಿರಿ. ಯಾವುದೇ ಕಾರಣದಿಂದ ನಿಮಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣ ವೈದ್ಯರನ್ನು ಕಾಣಿ.
ಉಪಾಯ: ಗುರುವಾರದಂದು ಬಾಳೆ ಹಣ್ಣಿನ ಗಿಡಕ್ಕೆ ಪೂಜೆ ಮಾಡಿ.
ಕನ್ಯಾ: ಈ ರಾಶಿಯವರು ರೈತರಾಗಿದ್ದರೆ ಸಮಯೋಚಿತ ನಿರ್ಧಾರ ತೆಗೆದುಕೊಂಡರೆ ಉತ್ತಮ. ವ್ಯವಸಾಯದಲ್ಲಿ ಎಚ್ಚರವಾಗಿರಬೇಕು.
ವ್ಯಾಪಾರದಲ್ಲಿ ಕೈ ಹಾಕುವ ಮೊದಲು ಚೆನ್ನಾಗಿ ಅದರ ಕುರಿತು ಅಧ್ಯಯನ ಮಾಡಿ. ಬೇಜವಾಬ್ದಾರಿಯಿಂದ ಉನ್ನತಿಗೆ ಕಪ್ಪು ಚುಕ್ಕೆ ಎದುರಾಗಬಹುದು. ಗುರುವಿನ ಸ್ಥಾನ ಪಲ್ಲಟದಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗಬಹದು.
ಉಪಾಯ: ನಿಮ್ಮ ಮನೆಯಲ್ಲಿ ಕರಪೂರದ ದೀಪ ಬೆಳಗಿಸಿ.
ತುಲಾ: ಈ ರಾಶಿಯವರ ವ್ಯಕ್ತಿತ್ವ ತುಂಬಾ ಆಕರ್ಷಣಿಯವಾಗಿರುತ್ತದೆ. ಚಿಕ್ಕ ದೊಡ್ಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಧನ ಲಾಭದಲ್ಲಿ ಹೆಚ್ಚಳವಾಗಲಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಹೆಚ್ಚಿನ ಲಾಭ ಸಿಗಲಿದೆ. ಆರ್ಥಿಕ ನಷ್ಟವಾಗುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಸುಖದ ವಾತಾವರಣ ನೆಲೆಸಲಿದೆ. ಗುರು ಪ್ರಭಾವದಿಂದ ನಿಮ್ಮ ಪ್ರಪೊಷನಲ್ ಜೀವನದ ಉತ್ತಮವಾಗಿರಲಿದೆ.
ಉಪಾಯ: ಗುರುವಾರದಂದು ತುಪ್ಪವನ್ನು ದಾನ ಮಾಡಿ.
ವೃಶ್ಚಿಕ: ಈ ರಾಶಿಯಲ್ಲಿ ಗುರು ಪ್ರವೇಶದಿಂದ ಸ್ವಲ್ಪ ನಷ್ಟವಾಗಬಹುದು. ಜೊತೆಗೆ ಕಷ್ಟಕರವಾಗಬಹುದು. ವಿವಿಧ ಸಮಸ್ಯೆಗಳನ್ನು ಎದುರಾಗಬಹುದು, ನಿವು ವಾಸಿಸುವ ಮನೆ ಬದಲಿಸಬಹುದು. ಕೆಲಸದ ಸಂಬಂಧ ನೀವು ಮನೆಯಿಂದ ದೂರ ಪ್ರಯಾಣ ಮಾಡಬಹುದು.ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಉಪಾಯ: ಶ್ರಿÃ ಶಿವ ರುದ್ರಾಭಿಷೇಕ ಮಾಡಿರಿ.
ಧನು: ಈ ರಾಶಿಯವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಬೇರೆಯವರಿಂದ ಸಾಕಷ್ಟು ಒತ್ತಡ ನಿಮಗೆ ಎದುರಾಗಲಿವೆ. ಪರಿಸ್ಥಿತಿ ಅನುಗುಣವಾಗಿ ಕಾರ್ಯವನ್ನು ಮಾಡಿ, ಧೈರ್ಯದಿಂದ ಮುನ್ನಡೆಯಿರಿ. ಧನ ಹಾನಿಯಿಂದ ನೀವು ಸಾಕಷ್ಟು ಬೇಸರದಿಂದ ಇರುವಿರಿ.
ಉಪಾಯ: ಬ್ರಹಸ್ಪತಿ ಯಂತ್ರ ಕಿ ಸ್ಥಾಪನೆ ಮಾಡಿ ನಿಯಮಿತ ಪೂಜೆ ಮಾಡಿ.
ಮಕರ: ಈ ರಾಶಿಯವರಿಗೆ ಗುರುವಿನಿಂದ ಲಾಭವಾಗಲಿದೆ. ಕೆಲಸ ಪ್ರವೃತ್ತಿಗಳಲ್ಲಿ ಉನ್ನತಿ ಕಾಣುವಿರಿ, ವ್ಯವಸಾಯದಲ್ಲಿ ಉತ್ತಮ ಪರಿಣಾಮ ಕಂಡು ಬರಲಿವೆ. ನಿಮ್ಮ ಸ್ವ ಬಿಜಿನೆಸ್ ಇದ್ದರೆ ನೀವು ಅದನ್ನು ವಿಸ್ತರಿಸುವ ಯೋಚನೆ ಮಾಡಿದ್ದರೆ ಮುಂದುವರೆಯಬಹುದು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿಮ್ಮ ಪರಸ್ಥಿತಿ ಸುಧಾರಿಸಿಕೊಳ್ಳುವಿರಿ.
ಉಪಾಯ: ಅರಳಿ ಮರವನ್ನು ಸ್ಪರ್ಶ ಮಾಡದೇ ನೀರು ಹಾಕಿ
ಕುಂಭ: ಈ ರಾಶಿಯವರು ಸಂಘರ್ಷ ಮಾಡಲಿದ್ದಾರೆ. ಕಚೇರಿ ಕೆಲಸದಲ್ಲಿ ಇತರರೊಂದಿಗೆ ಉತ್ತಮವಾಗಿ ವರ್ತಿಸಿ ವಾದ- ವಿವಾದ ಮಾಡುವಿರಿ, ಉಪಯೋಗವಿಲ್ಲದ ಕುರಿತು ಚರ್ಚೆ ಮಾಡಬೇಡಿ. ಗಂಭೀರ ಆಲೋಚನೆಯಿಂದ ನಿಮಗೆ ಮಾನಸಿಕ ನೆಮ್ಮದಿಗೆ ಭಂಗ ಬರಬಹುದು. ನಿಮಗೆ ಶಕ್ತಿಯಾಗಲಿದೆ ನಿಮ್ಮ ಮನೋಬಲ.
ಉಪಾಯ: ಜೇಬಿನಲ್ಲಿ ಹಳದಿ ಬಣ್ಣದ ವಸ್ತç ಜೊತೆಗಿರಲಿ, ಹಣೆಗೆ ಕೇಸರಿ ತಿಲಕ ಇರಲಿ.
ಮೀನ: ಕಚೇರಿಯಲ್ಲಿ ನಿಮಗೆ ಸಂಬಳ ಹೆಚ್ಚಿಸುವ ಕುರಿತು ಭರವಸೆ ಸಿಗಲಿದೆ, ಈ ರಾಶಿಯವರಿಗೆ ಗುರು ಕೃಪೆಯಿಂದ ಜೀವನ ಅದ್ಭುತ ಹಾಗೂ ಸುಂದರವಾಗಿರಲಿದೆ. ತಿರ್ಥ ಯಾತ್ರೆ ಅಥವಾ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಮಾಡುವಿರಿ. ಗುರು ಕೃಪೆಯಿಂದ ಲೋಕಪ್ರಿಯತೆ ವೃದ್ದಿಯಾಗಲಿದೆ. ಮಕ್ಕಳು ತಂದೆ ಮಾತುಗಳನ್ನು ಪಾಲನೆ ಮಾಡಬೇಕಾಗುತ್ತದೆ.
ಉಪಾಯ: ದೇವರ ನಾಮಸ್ಮರಣೆಯಿಂದ ನಿಮಗೆ ಲಾಭವಾಗಲಿದೆ.

loading...