ಜ.1ರಂದು ಗುಳೇದಗುಡ್ಡ ತಾಲೂಕು ಕಾರ್ಯಾರಂಭ: ಜಿಲ್ಲಾಧಿಕಾರಿ ಶಾಂತಾರಾಮ

0
128

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಗುಳೇದಗುಡ್ಡ ಜನರ ಬಹುದಿನಗಳ ಕನಸು ಈಗ ಸಾಕಾರಗೊಂಡಿದ್ದು, ಗುಳೇದಗುಡ್ಡ ತಾಲೂಕು ಕೇಂದ್ರ ಜ. 1ರಂದು ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಕುಮಾರ ಹೇಳಿದರು.
ಅವರು ಗುಳೇದಗುಡ್ಡ ನೂತನ ತಾಲೂಕು ಪ್ರಾರಂಭಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದ ನೀರಾವರಿ ಕಚೇರಿ, ಪಡಸಾಲೆ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ, ಪುರಸಭೆಯ ಸಭಾಭವನದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಈಗ ತಾತ್ಕಾಲಿಕ ಕಟ್ಟಡಗಳಲ್ಲಿ ಕಚೇರಿಗಳು ಪ್ರಾರಂಭವಾದರೂ ಮುಂದೆ ಹಣಕಾಸು, ಸ್ಥಳದ ಲಭ್ಯತೆ ಮೇಲೆ ಖಾಯಂ ಕಚೇರಿಗಳು ಪ್ರಾರಂಭಗೊಳ್ಳುವವು. ಗುಳೇದಗುಡ್ಡ ನೂತನ ತಾಲೂಕು ಉದ್ಘಾಟನೆಯಾದ ದಿನದಿಂದಲೇ ಸಾರ್ವಜನಿಕರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ನೂತನ ಗುಳೇದಗುಡ್ಡ ತಾಲೂಕು ಉದ್ಘಾಟನೆಗೆ ಸಂಬಂಧಿಸಿದಂತೆ ಕಟ್ಟಡಗಳ ಸ್ಥಳಾವಕಾಶ, ಸಿಬ್ಬಂದಿ ನಿಯೋಜನೆ, ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕೆಲವೊಂದು ಸಣ್ಣಪುಟ್ಟ ಅಡಚಣೆಗಳನ್ನು ನಿವಾರಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಾದಾಮಿ ತಹಶೀಲ್ದಾರ ಎಸ್‌.ರವಿಚಂದ್ರ, ತಾಲೂಕುಪಂಚಾಯತಿ ಕಾರ್ಯನಿರ್ವಾಹರ್ಣಾಧಿಕಾರಿ ಜೆ.ಬಿ. ಹೂಗಾರ, ಪುರಸಭೆ ಅಧ್ಯಕ್ಷ ಶಿವಕುಮಾರ ಹಾದಿಮನಿ, ಮುಖ್ಯಾಧಿಕಾರಿ ಯೇಸು ಬೆಂಗಳೂರು, ಸಿಡಿಪಿಓ ಯಲ್ಲಪ್ಪ ಚಲವಾದಿ, ಸಾಮಾಜಿಕ ಅರಣ್ಯಾಧಿಕಾರಿ ವಿಠ್ಠಲ ಹಡ್ಲಗೇರಿ, ಎ.ಡಿ. ಶ್ರೀಕಾಂತ ಸಬನೀಶ, ಕ್ಷೇತ್ರಸಮನ್ವಯಾಧಿಕಾರಿ ಎಂ.ಪಿ. ಮಾಗಿ, ಅಕ್ಷರದಾಸೋದ ಅಧಿಕಾರಿ ಎಂ.ಬಿ. ದೊಡ್ಡಪ್ಪನವರ, ಎಂ.ಎಲ್‌.ಬಿ.ಸಿ. ಎಇಇ ಸಿ.ಬಿ. ನಾಡಗೌಡರ, ಟಿಎಚ್‌ಓ ಡಾ. ಕವಿತಾ ಶಿವನಾಯಕರ, ರಾಜು ಚಿಮ್ಮನಕಟ್ಟಿ, ಡಾ.ದೇವರಾಜ ಪಾಟೀಲ, ನಾಗಪ್ಪ ಗೌಡರ, ರಾಜು ತಾಪಡಿಯಾ, ಅನ್ವರಖಾನ ಪಠಾಣ, ಪುರಸಭೆ ಸದಸ್ಯರಾದ ಈಶ್ವರ ಕಂಠಿ, ಲಕ್ಷ್ಮಣ ಹಾಲನ್ನವರ, ಅಶೋಕ ಹೆಗೆಡೆ, ವಾಯ್‌.ಆರ್‌. ಹೆಬ್ಬಳ್ಳಿ, ಮಹಾಂತೇಶ ಅಂಗಡಿ, ರಮೇಶ ಪದಕಿ, ಯು.ಜಿ. ವರದಪ್ಪನವರ, ಪಿ.ವಾಯ್‌. ದುರಗದ, ಎಂ.ಎಸ್‌. ಹಳ್ಳೂರ ಮತ್ತಿತರರು ಇದ್ದರು.

loading...