ಜ.24ರಂದು ಎತ್ತ ಸಾಗುತ್ತಿದೆ ಭಾರತ ವಿಚಾರ ಸಂಕೀರ್ಣ: ಕಲ್ಲಪ್ಪ

0
8

ಬೆಳಗಾವಿ

ಕೆಲ ದುಷ್ಟರು ಇಡೀ ದೇಶವನ್ನು ನುಂಗಿ ನೊಣಿಯಲು ನಾಚಿಗೆ ಪಡದೆ ಕೂಗಾಡುತ್ತಿರುವ ಜಾತಿಗಳು, ಕೋಮುವಾದಿಗಳು ತಮ್ಮ ಮನೋಭಿಲಾಷೆಯ ಈಡೇರಿಕೆಗಾಗಿ ಒಂದಾಗುತ್ತಿರುವಾಗ ಸಂವಿಧಾನದ ಆಶಯಗಳ ಕುರಿತು ಜ.24ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕೀರ್ಣ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಲ್ಲಪ್ಪ ಕಾಂಬಳೆ ಹೇಳಿದರು.

ಬುಧವಾರ ನಗರದ ಕನ್ನಡ ಸಾಹಿತ್ಯ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಾರತದ ಜಾತಿವಾದಿ ಸಮುದಾಯಗಳು ಸ್ವೇಚೆಯಾಗಿ ಅನುಭವಿಸಿಕೊಂಡು ಬರುತ್ತಿದ್ದ ಧಾರ್ಮಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಪರಮಾಧಿಕಾರಗಳನ್ನು 1950ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸ್ವತಂತ್ರ ಸಂವಿಧಾನ ಪಲ್ಲಟಗೊಳಿಸಿ ಆ ಸ್ಥಾನದಲ್ಲಿ ಸ್ವಾತಂತ್ರ್ಯ ಸಮಾನತೆಯ ಸಹೋದರತೆ ಸಮಾಜಿಕ ನ್ಯಾಯಗಳಂಥ ಉನ್ನತ ಪ್ರಜಾ ಸತಾತ್ಮಕ ಮೌಲ್ಯಗಳನ್ನು ಪ್ರತಿಷ್ಠಾಪಿಸಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಚಾರಿತ್ರಿಕ ಬದಲಾವಣೆಗೆ ಭಾರತ ತನ್ನನ್ನು ತಾನು ಸಮರ್ಪಿಸಿಕೊಂಡು ಏಳು ದಶಕಗಳೇ ಕಳೆದಿದೆ. ಸ್ವಾತಂತ್ರ್ಯ ಬಂದ ನಂತರ ಸಂಘ ಪರಿವಾರ ಮತ್ತು ಬಿಜೆಪಿಯ ರೂಪ ಸಂವಿಧಾನಕ್ಕೆ ತೀವ್ರ ಹಾನಿ ಉಂಟುಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.

ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನ್ಯಾಯಾಲಯಗಳು, ನ್ಯಾಯಾಧೀಶರು ಸರಕಾರದ ಕೈಗೊಂಬೆಯಾಗಿದ್ದಾರೆ. ಇತ್ತೀಚಿನ ರಾಜಕೀಯದಲ್ಲಿ ಇವಿಎಂ ಮೇಲಿನ ಪ್ರಕರಣದಲ್ಲಿ ರಾಷ್ಟ್ರದ ನ್ಯಾಯಕರಣದಲ್ಲಿ ನ್ಯಾಯ ಸಿಗಲಿಲ್ಲ. ಆದ್ದರಿಂದ ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದರ ಹೋಗುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಸಂವಿಧಾನ ಉಳಿಸಿ ಹಾಗೂ ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜನವರಿ 24 ರಂದು ಜಿಲ್ಲಾಮಟ್ಟದ ವಿಚಾರ ಸಂಕೀರ್ಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಆನಂದ ಅರಬಳ್ಳಿ, ಕಲ್ಲಪ್ಪ ತಳವಾರ, ದುರ್ಗಪ್ಪ ಮೇಲಿನಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...