ಝಂಡಾ ಊಂಚಾ ರಹೇ ಹಮಾರಾ…

0
537

ಬೆಳಗಾವಿ 15- ಬುಧವಾರದಂದು ಸ್ವಾತಂತ್ರ್ಯೌತ್ಸವದ ಅಗಸ್ಟ್ 15ರ ಸಂಭ್ರಮಕ್ಕೆ ನಗರದ ಎಲ್ಲ ಶಾಲಾ ಕಾಲೇಜುಗಳು, ಸರಕಾರಿ ಇಲಾಖೆಗಳು, ವೃತ್ತಗಳು ಶೃಂಗಾರಗೊಂಡಿವೆ. ಬಣ್ಣ ಬಣ್ಣದ ಹಾಳೆಗಳಿಂದ ವಿದ್ಯುದಾಲಂಕಾರದಿಂದ ಅಲಂಕರಿಸಲಾಗಿದೆ. ಬೆಳಗಿನ 8.45 ರ ಸುಮಾರಿಗೆ ಸರಕಾರಿ, ಅರೆಸರಕಾರಿ ಸಂಸ್ಥೆಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯೌತ್ಸವದ ರಾಷ್ಟ್ತ್ರ ಧ್ವಜಾರೋಹಣ ನೆರವೇರಲಿದೆ. ಸ್ವಾತಂತ್ರ್ಯೌತ್ಸವದ ನಿಮಿತ್ತ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರುಕಟ್ಟೆಯಲ್ಲಿ ರಾಷ್ಟ್ತ್ರಧ್ವಜ, ರಾಷ್ಟ್ತ್ರ ಮುದ್ರೆ, ರಾಷ್ಟ್ತ್ರ ಲಾಂಛನದ ಮಾದರಿಗಳ ಚಿಕ್ಕ ಆಕಾರಗಳು ಮಾರಾಟಕ್ಕಿವೆ. ದೇಶಾಭಿಮಾನಿಗಳು ಇವನ್ನು ಖರೀದಿಸುತ್ತಿದ್ದಾರೆ. ಎಲ್ಲೆಡೆ ಬುಧವಾರ ಸ್ವಾತಂತ್ರ್ಯೌತ್ಸವದ ಸಡಗರ, ಸಂಭ್ರಮಗಳು ಗೋಚರಿಸಲಿವೆ.

loading...

LEAVE A REPLY

Please enter your comment!
Please enter your name here