ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಭಾರತ: ಶಿವಂ ದುಬೆ ಚೊಚ್ಚಲ ಪದಾರ್ಪಣೆ,ರಾಹುಲ್ ,ವಿರಾಟ್ ಔಟ್

0
2
Virat Kohli Captain of India and Kieron Pollard Captain of West Indies during the 1st One Day International match (ODI) between India and the West Indies held at the M. A. Chidambaram Stadium, Chennai on the 15th December 2019. Photo by Deepak Malik / Sportzpics for BCCI

ಚೆನ್ನೈ,:-ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ತಂಡದ ನಾಯಕ ಕಿರೋನ್ ಪೊಲಾರ್ಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ, ಟೀಮ್‌ ಇಂಡಿಯಾ ಮೊದಲು ಬ್ಯಾಟಿಂಗ್‌ ಆರಂಭಿಸಿತು.ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದ ಭಾರತ, ರಾಹುಲ್  ೬ ರನ್  ವಿರಾಟ್ ನಾಲ್ಕ ರನ್ ಮಾಡಿ ಫೆವಲಿನ್ ಸೇರಿಕೊಂಡರು.ಇವರಿಬ್ಬರು ಕಾಟ್ರಲ್‌ಗೆ ವಿಕೆಟ್ ಒಪ್ಪಿಸಿದರು.
ಟಿ-20 ಸರಣಿಯಲ್ಲಿ ಇನಿಂಗ್ಸ್ ಆರಂಭಿಸಿದ್ದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಜೋಡಿಯೇ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಪ್ರಾರಂಭಿಸಿದರು. ಈಗಾಗಲೇ ಟಿ-20 ಸರಣಿ ಮಡಿಲಿಗೆ ಹಾಕಿಕೊಂಡಿರುವ ಕೊಹ್ಲಿ ಪಡೆ, ಏಕದಿನ ಸರಣಿ ಮೇಲೂ ಚಿತ್ತ ಹರಿಸಿದೆ. ಶಿವಂ ದುಬೆ ಅವರು ಚೊಚ್ಚಲ ಏಕದಿನ ಪಂದ್ಯಕ್ಕೂ ಇಂದು ಪದಾಪರ್ಣೆ ಮಾಡಿದರು.
ಟಾಸ್ ಸೋತ ಬಳಿಕ ಮಾತನಾಡಿದ ಕೊಹ್ಲಿ, “ಮೊದಲು ಬ್ಯಾಟಿಂಗ್‌ ಮಾಡಲು ಖುಷಿಯಾಗುತ್ತಿದೆ. ಅಂಗಳ ಸಂಪೂರ್ಣ ಒಣಗಿದೆ. ಗೌರವ ಮೊತ್ತವನ್ನು ಸುಲಭವಾಗಿ ಗಳಿಸುತ್ತೇವೆ. ಆದರೆ, ವೆಸ್ಟ್‌ ಇಂಡೀಸ್‌ ತಂಡದ ಎದುರು ಉತ್ತಮ ಮೊತ್ತ ಕಲೆ ಹಾಕುವುದು ಅಷ್ಟೊಂದು ಸುಲಭವಲ್ಲ. ಅವರನ್ನು ನಾವು ಹಗುರವಾಗಿ ಪರಿಗಣಿಸಲ್ಲ. ಏಕೆಂದರೆ, ಅವರದು ಅಪಾಯಕಾರಿ ತಂಡವಾಗಿದೆ ಎಂದರು.
ಶಿಖರ್‌ ದವನ್‌ ಬದಲಿಗೆ ಸ್ಥಾನ ಪಡೆದಿರುವ ಮಯಾಂಕ್ ಅಗರ್ವಾಲ್‌ಗೆ ಅವಕಾಶವಿಲ್ಲ. ಮನೀಶ್‌ ಪಾಂಡೆ ಹಾಗೂ ಶೂರ್ದೂಲ್ ಠಾಕೂರ್‌ ಬೆಂಚ್‌ ಆಟಗಾರರಾಗಿದ್ದಾರೆ.
ಭಾರತ (ಅಂತಿಮ 11): ಕೆ.ಎಲ್‌ ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್ ಪಂತ್‌, ಕೇದಾರ್‌ ಜಾಧವ್, ಶಿವಂ ದಬೆ, ರವೀಂದ್ರ ಜಡೇಜಾ, ದೀಪಕ್‌ ಚಾಹರ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ.
ವೆಸ್ಟ್ ಇಂಡೀಸ್ (ಅಂತಿಮ 11): ಶಾಯ್‌ ಹೋಪ್, ಸುನೀಲ್‌ ಅಂಬ್ರೀಸ್‌, ಶಿಮ್ರಾನ್ ಹೆಟ್ಮೇರ್, ನಿಕೋಲಸ್‌ ಪೂರನ್‌, ರೋಸ್ಟನ್‌ ಚೇಸ್, ಕಿರೋನ್‌ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಕಿಮೋ ಪಾಲ್, ಹೇಡನ್‌ ವಾಲ್ಷ್‌, ಅಝಾರಿ ಜೊಸೆಫ್‌, ಶೆಲ್ಡನ್‌ ಕಾಟ್ರೆಲ್‌

loading...